ಶಿಕ್ಷಕಿಯ ಬಂಧನ
ಸಂಭಲ (ಉತ್ತರಪ್ರದೇಶ) – ಇಲ್ಲಿನ ದುಗಾವರ ಊರಿನಲ್ಲಿರುವ ಸೇಂಟ್ ಆಂಥನಿ ಉಚ್ಚ ಮಾಧ್ಯಮಿಕ ಶಾಲೆಯಲ್ಲಿ ಶಾಯಿಸ್ತಾ ಎಂಬ ಹೆಸರಿನ ಮುಸಲ್ಮಾನ ಶಿಕ್ಷಕಿಯು ಮುಸಲ್ಮಾನ ವಿದ್ಯಾರ್ಥಿಗಳಿಗೆ ಓರ್ವ ಹಿಂದೂ ವಿದ್ಯಾರ್ಥಿಯನ್ನು ಥಳಿಸಲು ಹೇಳಿರುವ ಘಟನೆಯು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿಯ ಪಾಲಕರು ದೂರು ನೀಡಿದ ನಂತರ ಶಾಯಿಸ್ತಾಳನ್ನು ಬಂಧಿಸಲಾಯಿತು ಹಾಗೆಯೆ ಶಾಲೆಯು ಆಕೆಯನ್ನು ಅಮಾನತುಗೊಳಿಸಿದೆ.
Sambhal, UP: Schoolteacher Shaista gets Hindu student slapped repeatedly by Muslim classmate, suspended and arrestedhttps://t.co/BTJnuFgsC6
— OpIndia.com (@OpIndia_com) September 29, 2023
ಸಂತ್ರಸ್ತ ಹುಡುಗನ ತಂದೆಯು ಮಾತನಾಡುತ್ತ, ಹುಡುಗನು ಹಿಂದೂ ಆಗಿದ್ದರಿಂದ ಶಿಕ್ಷಕಿಯು ಮುಸಲ್ಮಾನ ವಿದ್ಯಾರ್ಥಿಗಳಿಗೆ ಆತನನ್ನು ಥಳಿಸಲು ಹೇಳಿದ್ದರು. ಇದರಿಂದಾಗಿ ಹುಡುಗನು ಭಯ ಹಾಗೂ ನಾಚಿಕೆಯಿಂದಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಈ ಬಗ್ಗೆ ಅವನಲ್ಲಿ ವಿಚಾರಿಸಿದಾಗ ಅವನು ನಡೆದ ಘಟನೆಯನ್ನು ತಿಳಿಸಿದನು, ಎಂದು ಹೇಳಿದರು.
(ಸೌಜನ್ಯ – VK News)
ಸಂಪಾದಕೀಯ ನಿಲುವುಇಂತಹ ಮಾನಸಿಕತೆಯ ಶಿಕ್ಷಕಿ ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿರಬಹುದು ಎಂಬುದರ ಕಲ್ಪನೆ ಬರುತ್ತದೆ ! |