‘ಭಾರತದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಅಲ್ಲ, ದಕ್ಷಿಣ ಗೋಲಾರ್ಧದಲ್ಲಿ ಇಳಿದಿದೆ !’ (ಅಂತೆ) – ಚೀನಾ

‘ಚಂದ್ರಯಾನ-3’ ರ ಯಶಸ್ಸಿನ ಬಗ್ಗೆ ಚೀನಾದಿಂದ ಟೀಕೆ !

ಓಯಾಂಗ ಜಿಯುವನ್

ಬೀಜಿಂಗ (ಚೀನಾ) – ಭಾರತದ ‘ಚಂದ್ರಯಾನ-3’ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ನಂತರ ಭಾರತ ಇದನ್ನು ಸಾಧಿಸುವ ಮೊದಲ ದೇಶವಾಗಿದೆ. ಜಗತ್ತಿನಾದ್ಯಂತ ಭಾರತವನ್ನು ಶ್ಲಾಘಿಸಲಾಯಿತು; ಆದರೆ ಇದರ ಬಗ್ಗೆ ಈಗ ಚೀನಾ ಟೀಕೆ ಮಾಡಿದೆ. ಚೀನಾ, ಭಾರತದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದೇ ಇಲ್ಲ ಎಂದು ಆರೋಪಿಸಿದೆ.

ಚೀನಾದ ಚಂದ್ರ ಅಭಿಯಾನದ ಸಂಸ್ಥಾಪಕ ಓಯಾಂಗ ಜಿಯುವನ್ ಇವರು, ಭಾರತದ ಚಂದ್ರಯಾನ ಚಂದ್ರನ ದಕ್ಷಿಣ ದ್ರುವದಲ್ಲಲ್ಲ, ಚಂದ್ರನ ದಕ್ಷಿಣ ಗೋಲಾರ್ಧದಲ್ಲಿ ಇಳಿದಿದೆ. ಭಾರತದ ರೋವರ್ ೬೯ ಅಂಶ ದಕ್ಷಿಣ ಅಕ್ಷಾಂಶದಲ್ಲಿ ಇಳಿದಿದೆ. ಇದು ಚಂದ್ರನ ದಕ್ಷಿಣ ಗೋಲಾರ್ದವಾಗಿದೆ. ದಕ್ಷಿಣ ಧ್ರುವ ೮೮.೫ ರಿಂದ ೯೦ ಅಂಶಗಳ ಮಧ್ಯದಲ್ಲಿದೆ. ಚಂದ್ರ ಪೃಥ್ವಿಗಿಂತಲು ಬಹಳ ಚಿಕ್ಕದಾಗಿದ್ದಾನೆ. ಆದ್ದರಿಂದ ಚಂದ್ರನ ದಕ್ಷಿಣ ದ್ರುವಕೂಡ ೮೮.೫ ರಿಂದ ೯೦ ಅಂಶಗಳ ನಡುವೆ ಇದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಭಾರತದ ಪ್ರಗತಿ ನೋಡಿ ಚೀನಾಗೆ ಹೊಟ್ಟೆ ಕಿಚ್ಚು ಆಗುತ್ತಿರುವುದರಿಂದ ಈ ರೀತಿಯ ಟೀಕೆಗಳು ಮಾಡುತ್ತಿದೆ ಇದೆ ಇದರಿಂದ ತಿಳಿಯುತ್ತದೆ !