ಕೆನಡಾದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಹಿಂಸಾಚಾರಕ್ಕೆ ಬೆಂಬಲ ! – ಡಾ. ಎಸ್ ಜೈಶಂಕರ್

ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಇವರಿಂರ ತಪರಾಕಿ !


ನ್ಯೂಯಾರ್ಕ್ (ಅಮೇರಿಕಾ) – ಕೆನಡಾದಲ್ಲಿ ನಮ್ಮ ಮುತ್ಸದ್ದಿಗಳಿಗೆ ಹೆದರಿಸುವುದು ಮತ್ತು ಬೆದರಿಕೆ ನೀಡಲಾಗುತ್ತಿದೆ. ನಮ್ಮ ವಾಣಿಜ್ಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಲಾಗುತ್ತದೆ. ‘ಪ್ರಜಾಪ್ರಭುತ್ವದಲ್ಲಿ ಹೇಗೆ ನಡೆಯುತ್ತದೆ’, ಎಂದು ಹೇಳಿ ‘ಇದೆಲ್ಲವೂ ಬೆಂಬಲಿಸುವಂತಿದೆ’, ಹೇಳುತ್ತಾರೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಕೆನಡಾಗೆ ತಪರಾಕಿ ನೀಡಿದರು. ‘ಕೆನಡಾದಲ್ಲಿ ಪ್ರತ್ಯೇಕತಾವಾದಿ ಶಕ್ತಿ, ಹಿಂಸಚಾರ ಮತ್ತು ಉಗ್ರರ ಜೊತೆಗೆ ಸಂಬಂಧಿತ ಅಪರಾಧಗಳು ಬೆಳೆಯುತ್ತಿವೆ. ಈ ರೀತಿ ಯಾವುದೇ ಆಘಾತಕಾರಿ ಘಟನೆ ಘಟಿಸಿದರೆ ಮತ್ತು ನನಗೆ ಸರಕಾರ ಎಂದು ಕೆಲವು ಮಾಹಿತಿ ನೀಡಿದರೆ. ಆಗ ನಾನು ಖಂಡಿತವಾಗಿ ಆದರ ಕಡೆ ಗಮನ ನೀಡುವೆ’, ಹೀಗೆ ಕೂಡ ಜೈ ಶಂಕರ್ ಇವರು ಸ್ಪಷ್ಟಪಡಿಸಿದರು. ಅವರು ‘ಕೌನ್ಸಿಲ್ ಫಾರ್ ಫಾರಿನ್ ರಿಲೇಶನ್ಸ್’ ಈ ಚರ್ಚೆಯಲ್ಲಿ ಮಾತನಾಡುತ್ತಿದ್ದರು.

ಡಾ. ಎಸ್ ಜೈಶಂಕರ್ ಇವರು ಮಂಡಿಸಿರುವ ಸೂತ್ರಗಳು

೧. ಭಾರತವು ಕೆನಡಾಗೆ ಅಪರಾಧಿ ಕೃತ್ಯಗಳು ಮತ್ತು ಭಯೋತ್ಪಾದಕರ ಬಗ್ಗೆ ಬಹಳಷ್ಟು ಮಾಹಿತಿ ನೀಡಿದೆ ಮತ್ತು ಅನೇಕ ಜನರ ಶರಣಾಗತಿಗೆ ವಿನಂತಿ ಕೂಡ ಮಾಡಿದೆ. ನಾವು ಅವರನ್ನು ಕೆನಡಾದಲ್ಲಿ ನಡೆಸುವ ಸಂಘಟಿತ ಅಪರಾಧ ಮತ್ತು ಅದರ ನಾಯಕರ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದೇವೆ. ಅನೇಕ ಭಯೋತ್ಪಾದಕ ನಾಯಕರಿದ್ದಾರೆ ಅವರ ಗುರುತು ಪತ್ತೆ ಆಗಿದೆ.

೨. ನೀಜ್ಜರ್ ನ ಹತ್ಯೆಯ ಕುರಿತಾದ ಆರೋಪದ ಬಗ್ಗೆ ಜೈಶಂಕರ್ ಇವರು, ನಾವು ಕೆನಡಾಗೆ, ‘ಇದು ಭಾರತ ಸರಕಾರದ ನೀತಿ ಅಲ್ಲ.’ ಆದರೂ ಕೂಡ ಅವರ ಕಡೆ ಕೆಲವು ವಿಶಿಷ್ಟ ಸಾಕ್ಷಿಗಳಿದ್ದರೆ ಅದನ್ನು ನಮಗೆ ಹೇಳಿರಿ ಎಂದು ಹೇಳಿದ್ದೇವೆ. ಸಂಪೂರ್ಣ ಮಾಹಿತಿ ಇಲ್ಲದೆ ಯಾವುದೇ ನಿರ್ಣಯ ತೆಗೆದುಕೊಳ್ಳಲಾಗದು. ವಾಸ್ತವದಲ್ಲಿ ನಿಜ್ಜರ್ ನ ಹತ್ಯೆಯ ಆರೋಪದ ಬಗ್ಗೆ ಕೆನಡಾದಿಂದ ಇಲ್ಲಿಯವರೆಗೆ ಯಾವುದೇ ಸಾಕ್ಷಿ ತೋರಿಸಲಾಗಿಲ್ಲ.
ರಾಜಕಾರಣಕ್ಕಾಗಿ ಭಯೋತ್ಪಾದಕನಿಗೆ ಪ್ರೋತ್ಸಾಹ ನೀಡೋದು ಅಯೋಗ್ಯ !
ವಿದೇಶಾಂಗ ಸಚಿವ ಎಸ್ ಜೈಶಂಕರ್ ಇವರು ಸಪ್ಟೆಂಬರ್ ೨೬ ರಂದು ವಿಶ್ವ ಸಂಸ್ಥೆಯ ಮಹಾಸಭೆಗೆ ಸಂಬೋಧಿಸುವಾಗ ಕೆನಡಾದ ಹೆಸರು ಹೇಳದೆ, ರಾಜಕಾರಣಕ್ಕಾಗಿ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವುದು ತಪ್ಪಾಗಿದೆ. ನಮಗೆ ವಿಶ್ವಾಸವಿದೆ, ಪ್ರಜಾಪ್ರಭುತ್ವದ ಗೌರವ ಮಹತ್ವದ್ದಾಗಿದೆ; ಆದರೆ ಈ ಗೌರವದಲ್ಲಿ ಆಯ್ಕೆ ಇರಬಾರದು. ಭಯೋತ್ಪಾದನೆ ಮತ್ತು ಹಿಂಸಾಚಾರದ ಮೇಲೆ ರಾಜಕೀಯ ಅನುಕೂಲಕರ ಕ್ರಮ ಕೈಗೊಳ್ಳಬಾರದು. ಪ್ರಾದೇಶಿಕ ಅಖಂಡತೆಯ ಗೌರವ ಮತ್ತು ಅನುಕೂಲಕರ ಅಡಿಯಲ್ಲಿನ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲಾಗುವುದಿಲ್ಲ.

‘ಯಾರ ರಾಜಕೀಯ ಲಾಭಕ್ಕಾಗಿ ಕೂಡ ನಾವು ಬಾಗುವುದಿಲ್ಲ !’ (ಅಂತೆ) – ಕೆನಡಾ

ಸ್ವಂತ ರಾಜಕೀಯ ಲಾಭಕ್ಕಾಗಿ ಪ್ರಧಾನಿ ಜಸ್ಟೀನ್ ಟ್ರುಡೋ ಖಲಿಸ್ತಾನಿಗಳೆದರು ಕೇವಲ ಬಾಗುವುದಷ್ಟೇ ಅಲ್ಲ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ, ಇದನ್ನು ಸಂಪೂರ್ಣ ಜಗತ್ತೇ ನೋಡುತ್ತಿದೆ. ಇಂತಹ ಕೆನಡಾ ಈ ರೀತಿಯ ಹೇಳಿಕೆ ನೀಡುವುದು ಹಾಸ್ಯಸ್ಪದವಾಗಿದೆ.

ವಿಶ್ವ ಸಂಸ್ಥೆಯಲ್ಲಿ ಕೆನಡಾದ ರಾಯಭಾರಿ ಬಾಬ್ ರೇ ಮಹಾಸಭೆಯಲ್ಲಿ, ಯಾವಗ ನಾವು ಸಮಾನತೆಯ ಮಹತ್ವ ಹೇಳುತ್ತೇವೆಯೋ ಆಗ ನಮಗೆ ನ್ಯಾಯ ಮತ್ತು ಪ್ರಜಾಪ್ರಭುತ್ವ ಸಮಾಜದ ಮೌಲ್ಯ ರಕ್ಷಿಸಬೇಕು. ಯಾರದೋ ರಾಜಕೀಯ ಲಾಭಕ್ಕಾಗಿ ನಾವು ಬಾಗುವುದಿಲ್ಲ. ವಿದೇಶಿ ಹಸ್ತಕ್ಷೇಪದಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿರುವುದು ಕಾಣುತ್ತದೆ. ಸತ್ಯ ಏನೆಂದರೆ, ನಾವು ಒಪ್ಪಿರುವ ನಿಯಮ ನಾವು ಪಾಲಿಸಲಿಲ್ಲವೆಂದರೆ ಆಗ ನಮ್ಮ ಸಮಾಜದ ಮೂಲಭೂತ ರಚನೆಯ ಮೇಲೆ ಪರಿಣಾಮವಾಗುವುದು ಎಂದು ಹೇಳಿದರು.