ಅಕ್ಟೋಬರ್ ೮ ರಂದು ನ್ಯೂಜೆರ್ಸಿ (ಅಮೇರಿಕ)ಯಲ್ಲಿ ಭಾರತದ ಹೊರಗಿನ ಎಲ್ಲಕ್ಕಿಂತ ದೊಡ್ಡ ಹಿಂದೂ ದೇವಾಲಯದ ಉದ್ಘಾಟನೆ !

ನ್ಯೂಜೆರ್ಸಿ (ಅಮೇರಿಕಾ) – ಭಾರತದ ಹೊರಗೆ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ವಾಮಿ ನಾರಾಯಣ ಸಂಪ್ರದಾಯದ ಈ ದೇವಾಲಯವು ನ್ಯೂಜೆರ್ಸಿಯ ರಾಬಿನ್ಸವಿಲ್ಲೆ ನಗರದಲ್ಲಿದೆ. ಈ ದೇವಾಲಯವನ್ನು ೧೬೨ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಅದರಲ್ಲಿನ ಕಲಾಕೃತಿಗಳು ಪ್ರಾಚೀನ ಭಾರತೀಯ ಸಂಸ್ಕ್ರತಿಗೆ ಅನುಗುಣವಾಗಿವೆ. ಈ ದೇವಾಲಯವು ೧೩೪ ಅಡಿ ಉದ್ದ ಮತ್ತು ೮೭ ಅಡಿ ಅಗಲವಿದೆ. ಇದರಲ್ಲಿ ೧೦೮ ಕಂಬಗಳು ಮತ್ತು ೩ ಗರ್ಭಗುಡಿಗಳಿವೆ. ಈ ದೇವಾಲಯಕ್ಕೆ ೬೮ ಸಾವಿರ ಘನ ಅಡಿ ಇಟಾಲಿಯನ್ ಮಾರ್ಬಲ್ ಬಳಸಲಾಗಿದೆ.