ಇಂತಹ ವಿಕೃತ ಜನರು ಇತರ ಧರ್ಮದ ಹುಡುಗಿಯರು, ಯುವತಿಯರು ಹಾಗೂ ಮಹಿಳೆಯರೊಂದಿಗೆ ಹೇಗೆ ವರ್ತಿಸುತ್ತಾರೆ, ಎಂಬುದು ಗಮನಕ್ಕೆ ಬರುತ್ತದೆ !
ಲಾಹೋರ (ಪಾಕಿಸ್ತಾನ) – ಇಲ್ಲಿನ ಗುಜ್ಜರಪುರಾ ಪ್ರದೇಶದಲ್ಲಿ ೧೪ ವರ್ಷದ ಹುಡುಗಿಯು ತನ್ನ ತಂದೆಯನ್ನೇ ಗುಂಡಿಕ್ಕಿ ಕೊಂದಿದ್ದಾಳೆ. ಕಳೆದ ೩ ತಿಂಗಳುಗಳಿಂದ ಆಕೆಯ ಮೇಲೆ ತಂದೆ ಬಲಾತ್ಕಾರ ಮಾಡುತ್ತಿದ್ದನು. ಈ ಅತ್ಯಾಚಾರಗಳಿಂದ ಬೇಸತ್ತು ಆಕೆ ತಂದೆಯ ಬಂದೂಕಿನಿಂದ ಗುಂಡಿಕ್ಕಿ ಹತ್ಯೆಗೈದ ಘಟನೆಯು ಬೆಳಕಿಗೆ ಬಂದಿದೆ. `ಈ ಪ್ರಕರಣದಲ್ಲಿ ಎಲ್ಲ ಸಂಗತಿಗಳ ತನಿಖೆ ಮಾಡಿ ಸಂದೇಹಾಸ್ಪದ ಹುಡುಗಿಯ ಮೇಲೆ ಅಪರಾಧ ನೋಂದಾಯಿಸಲಾಗುವುದು’, ಎಂದು ತನಿಖಾಧಿಕಾರಿ ಸೋಹೇಲ ಕಾಝಮಿಯವರು ತಿಳಿಸಿದ್ದಾರೆ.
पिता ने नाबालिग बेटी का किया रेप, पीड़िता ने गोली मारकर कर दी हत्याhttps://t.co/HYrfDD6dKZ
— Hindustan (@Live_Hindustan) September 24, 2023
ವಿಶೇಷವೆಂದರೆ ಇನ್ನೊಂದು ಪ್ರಕರಣದಲ್ಲಿ ಪಾಕಿಸ್ತಾನದ ಒಂದು ನ್ಯಾಯಾಲಯವು ೨ ದಿನಗಳ ಹಿಂದೆ ಅಪ್ರಾಪ್ತ ಮಗಳ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ತಂದೆಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಈ ಘಟನೆಯ ನಂತರ ಈ ಪ್ರಸಂಗವು ಬೆಳಕಿಗೆ ಬಂದಿದೆ. (ಇಂದು ಸಮಾಜದ ಎದುರು ಈ ೨ ಘಟನೆಗಳು ಬಂದಿವೆ. ಸಮಾಜದ ಎದುರು ಬರದಿರುವ ಘಟನೆಗಳು ಎಷ್ಟಿರಬಹುದು, ಎಂಬುದರ ಕಲ್ಪನೆ ಮಾಡಲೂ ಸಾಧ್ಯವಿಲ್ಲ ! ಕೇವಲ ಪಾಕಿಸ್ತಾನದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ ! – ಸಂಪಾದಕರು)