ಅಪರಿಚಿತ ಸಂಪರ್ಕ ಸಂಖ್ಯೆಯಿಂದ ಯಾರಾದರೂ ಕರೆ ಮಾಡಿದರೆ ಅಥವಾ ಕಿರುಸಂದೇಶ ಕಳುಹಿಸಿದರೆ ಆರ್ಥಿಕ ಹಾನಿಯಾಗದಂತೆ ಎಚ್ಚರ ವಹಿಸಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಮನವಿ !

ಪ್ರಸ್ತುತ ಅಪರಿಚಿತ ವ್ಯಕ್ತಿಗಳು ಸಂಚಾರವಾಣಿ ಅಥವಾ ಕಿರುಸಂದೇಶದ ಮೂಲಕ ಕೆಲವು ಸಾಧಕರು ಅಥವಾ ವಾಚಕರನ್ನು ಸಂಪರ್ಕಿಸಿ ಅಥವಾ ಕಿರುಸಂದೇಶ ಕಳುಹಿಸಿ, ‘ನಿಮಗೆ… ವ್ಯಕ್ತಿಯ ಪರಿಚಯ ಇದೆಯೇ ?’, ಎಂದು ಕೇಳಿ ಆ ವ್ಯಕ್ತಿಯ ಮಾಹಿತಿಯನ್ನು ಅನಾವಶ್ಯಕವಾಗಿ ತಿಳಿದುಕೊಳ್ಳಲು ಅಥವಾ ವ್ಯಕ್ತಿಯ ಬಗ್ಗೆ ಸಾಧಕ ಅಥವಾ ವಾಚಕರ ಮನಸ್ಸಿನಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

ಉದಾ : ವ್ಯಕ್ತಿಯು ಸಾಲವನ್ನು ತೆಗೆದುಕೊಂಡಿದ್ದು ನಿಮ್ಮ ಸಂಪರ್ಕ ಸಂಖ್ಯೆಯನ್ನು ಖಾತರಿದಾರರಾಗಿ ನೀಡಿದ್ದಾರೆ. ‘ನಮ್ಮ ಸಾಲದ ಕಂತುಗಳನ್ನು ಪಾವತಿಸದಿದ್ದಕ್ಕಾಗಿ ನಾವು ಆ ಸಾಲಗಾರನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’, ಎಂದು ಪರಿಣಾಮಕಾರಿಯಾಗಿ ಹೇಳುವ ಮೂಲಕ ಅಥವಾ ಸಂದೇಶವನ್ನು ಕಳುಹಿಸುವ ಮೂಲಕ ಸಾಧಕರ ಅಥವಾ ವಾಚಕರ ಬ್ಯಾಂಕ್‌ ಖಾತೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಮತ್ತು ಆರ್ಥಿಕವಾಗಿ ಅವರನ್ನು ವಂಚಿಸಲು ಪ್ರಯತ್ನಿಸಬಹುದು.

ಈ ವ್ಯಕ್ತಿಗಳು ಸಾಧಕರು ಅಥವಾ ವಾಚಕರನ್ನು ಸಂಚಾರ ವಾಣಿಯಿಂದ ಸಂಪರ್ಕಿಸಿ, ‘ನಿಮ್ಮ ಮಾಹಿತಿ (ಫೈಲ್) ನಿರ್ದಿಷ್ಟ ಜಿಲ್ಲೆಯಿಂದ ಬಂದಿದೆ ಮತ್ತು ಅವರು ‘ಪ್ರಾವಿಡೆಂಟ್‌ ಫಂಡ್‌’ನ ಮಾಹಿತಿ ನೀಡುವ ಮೂಲಕ ಸ್ವಲ್ಪ ಸಹಾಯ ನೀಡುವುದಿದೆ’, ಎಂದು ಹೇಳುತ್ತಾರೆ. ಆದ್ದರಿಂದ ಈ ರೀತಿಯ ಅಪರಿಚಿತ ವ್ಯಕ್ತಿಗಳ ಸಂಚಾರವಾಣಿ ಬಂದರೆ ‘ಅನಾಯಾಸವಾಗಿ ಆರ್ಥಿಕ ಲಾಭವಾಗುವುದಿಲ್ಲ’, ಎಂಬ ತತ್ತ್ವಕ್ಕನುಸಾರ ಕೂಡಲೇ ಜಾಗರೂಕರಾಗಿ ಅಪರಿಚಿತರಿಗೆ ಯಾವುದೇ ಮಾಹಿತಿಯನ್ನು ನೀಡದೆ ನಿಮ್ಮ ಸಂಭಾಷಣೆಯನ್ನು ನಿಲ್ಲಿಸಬೇಕು.