೧. ದತ್ತ ನಾಮಜಪ ಮಾಡುವುದು : ‘ಸದ್ಯ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆ ಆಗುತ್ತಿದೆ. ಪಿತೃಪಕ್ಷದಲ್ಲಿ (೨೯ ಸೆಪ್ಟೆಂಬರ್ ರಿಂದ ೧೪ ಅಕ್ಟೋಬರ್ ೨೦೨೩ ಈ ಅವಧಿಯಲ್ಲಿ) ಈ ತೊಂದರೆ ಹೆಚ್ಚಾಗುವುದರಿಂದ ಆ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ |’ ಈ ನಾಮಜಪವನ್ನು ಕನಿಷ್ಟ ೧ ಗಂಟೆ ಮಾಡಬೇಕು. ನಾಮಜಪ sanatan.org ಈ ಜಾಲತಾಣದಲ್ಲಿ ಲಭ್ಯವಿದೆ. ನಾಮಜಪಕ್ಕಾಗಿ ಲಿಂಕ್ – www.sanatan.org/kannada/265.html. ಯಾವ ಸಾಧಕರು ತಮಗಾಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಗಳನ್ನು ದೂರಗೊಳಿಸಲು ಆಧ್ಯಾತ್ಮಿಕ ಉಪಾಯಗಳನ್ನು ಮಾಡುತ್ತಾರೆಯೋ, ಅವರು ತಮ್ಮ ಉಪಾಯಗಳ ನಾಮ ಜಪದ ಹೊರತು ದತ್ತನ ನಾಮಜಪವನ್ನು ಕನಿಷ್ಟ ೧ ಗಂಟೆ ಮಾಡಬೇಕು. ದತ್ತನ ನಾಮಜಪವನ್ನು ಮಾಡುವಾಗ ಕೈಗಳ ಐದು ಬೆರಳುಗಳ ತುದಿಗಳನ್ನು ಜೋಡಿಸಿ ಅನಾಹತಚಕ್ರ ಮತ್ತು ಮಣಿಪುರಚಕ್ರದ ಮೇಲೆ ನ್ಯಾಸ ಮಾಡಬೇಕು.
ಯಾವ ಸಾಧಕರು ಉಪಾಯವನ್ನು ಮಾಡುವುದಿಲ್ಲವೋ, ಅವರು ವೈಯಕ್ತಿಕ ಕೃತಿಗಳನ್ನು ಮಾಡುವಾಗ, ಸ್ನಾನ, ಸ್ವಚ್ಛತೆ-ಸೇವೆ ಮುಂತಾದ ಸಮಯದಲ್ಲಿ ದತ್ತನ ನಾಮಜಪವನ್ನು ಕನಿಷ್ಟ ೧ ಗಂಟೆ ಆಗುವಂತೆ ನೋಡಬೇಕು; ಆದರೆ ಪೂರ್ವಜರ ತೊಂದರೆಯ ಅರಿವಾದರೆ ಅವರು ಸಹ ಕುಳಿತುಕೊಂಡು ಮತ್ತು ಮುದ್ರೆಯನ್ನು ಮಾಡಿ ದತ್ತನ ನಾಮಜಪವನ್ನು ಮಾಡಬೇಕು.
೨. ಪಿತೃಪಕ್ಷದಲ್ಲಿ ಪೂರ್ವಜರ ತೊಂದರೆಗಳಿಂದ ರಕ್ಷಣೆಯಾಗಲು ದಿನವಿಡಿ ಮಧ್ಯಮಧ್ಯದಲ್ಲಿ ದತ್ತನಲ್ಲಿ ಪ್ರಾರ್ಥಿಸಬೇಕು.
೩. ಸಾಧಕರಿಗೆ ಸಾಧ್ಯವಿದ್ದಲ್ಲಿ, ಅವರು ಪಿತೃಪಕ್ಷದಲ್ಲಿ ಶ್ರಾದ್ಧ ವಿಧಿಯನ್ನು ಅವಶ್ಯ ಮಾಡಬೇಕು.
ಹೀಗೆ ಮಾಡುವುದರಿಂದ ಪೂರ್ವಜರ ತೊಂದರೆ ದೂರ ವಾಗುತ್ತದೆ, ಅದರೊಂದಿಗೆ ಸಾಧನೆಗಾಗಿ ಅವರ ಆಶೀರ್ವಾದವೂ ಸಿಗುತ್ತದೆ.’
ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನ ಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆ ಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವು ದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣ ಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯ ಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |
– (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೦.೮.೨೦೨೩)