ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಭಾರತದಿಂದ ಪಾಕಿಸ್ತಾನಿ ಹಿಂದೂ ನಿರಾಶ್ರಿತರ ಸಂಕಷ್ಟ ಮಂಡನೆ

ಜಿನೀವಾ (ಸ್ವಿಟ್ಜರ್ಲೆಂಡ್) – ಭಾರತದಲ್ಲಿ ಪೌರತ್ವ ಸಂಶೋಧನಾ ಕಾಯ್ದೆಯ ಚರ್ಚೆ ಮುಂದುವರೆಯುವಾಗಲೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಈ ವಿಷಯ ಚರ್ಚೆಯಾಗಿದೆ. ಈ ಸಂದರ್ಭದಲ್ಲಿ ‘ರಾಜಸ್ಥಾನ ಸಮಗ್ರ ಕಲ್ಯಾಣ ಸಂಸ್ಥಾನ’ದ ಸದಸ್ಯ ಸತ್ಯನಾರಾಯಣ ಶರ್ಮಾ ಅವರು ಪೌರತ್ವ ಸಂಶೋಧನಾ ಕಾಯ್ದೆಯಲ್ಲಿನ ಪ್ರಮುಖ ಸೂತ್ರಗಳನ್ನು ಪ್ರಸ್ತಾಪಿಸಿದರು. ಶರ್ಮಾ ಇವರು, ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂ ನಿರಾಶ್ರಿತರ ಭಯಾನಕ ಪರಿಸ್ಥಿತಿಯ ಬಗ್ಗೆ ಪರಿಷತ್ತಿನಲ್ಲಿ ತಿಳಿಸಿದರು.

ಈ ವೇಳೆ ಶರ್ಮಾ ಅವರು, ಬೇರೆ ದೇಶದಲ್ಲಿ ಆಶ್ರಯ ಪಡೆಯುವುದು ತುಂಬಾ ಕಷ್ಟ ಇತ್ತಿಚೆಗೆ ಜೋಧಪುರ, ಬಾಡಮರ್ ಮತ್ತು ಕರ್ಣಾವತಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಸ್ಥಳಾಂತರಗೊಂಡ ಪಾಕಿಸ್ತಾನಿ ಹಿಂದೂಗಳಿಗೆ ಭಾರತೀಯ ಪೌರತ್ವವನ್ನು ನೀಡಲಾಯಿತು. ಸಂತ್ರಸ್ತರ ಬಳಿ ತಮ್ಮ ದೇಶದಲ್ಲಿ ಭೂಮಿ, ಸಂಪತ್ತು ಮತ್ತು ಕೃಷಿ ಇತ್ತು; ಆದರೆ ಅದು ಕೇವಲ ಧರ್ಮದ ಆಧಾರದಲ್ಲಿ ಅವರಿಂದ ವಶಪಡಿಸಿಕೊಳ್ಳಲಾಯಿತು. ಕೊನೆಗೆ ದೌರ್ಜನ್ಯಕ್ಕೆ ಬೇಸತ್ತು ತಾಯ್ನಾಡು, ಬಂಧು ಮಿತ್ರರನ್ನು ತೊರೆದು ಭಾರತಕ್ಕೆ ಬರಬೇಕಾಯಿತು. ಜನರು ಭಯದಿಂದ ತಮ್ಮ ತಾಯ್ನಾಡನ್ನು ತ್ಯಜಿಸುತ್ತಾರೆ, ಇದು ಗಂಭೀರ ಮತ್ತು ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದರು.