“ಭಾರತೀಯ ರಾಯಭಾರಿಯನ್ನು ಗಡಿಪಾರು ಮಾಡಿ, ರಾ.ಸ್ವ.ಸಂಘವನ್ನು ನಿಷೇಧಿಸಿ !”(ಅಂತೆ) – ಕೆನಡಾದಲ್ಲಿನ ಮುಸಲ್ಮಾನ ಸಂಘಟನೆ

ಕೆನಡಾದಲ್ಲಿನ ಮುಸಲ್ಮಾನ ಸಂಘಟನೆಯಿಂದ ಕೆನಡಾ ಸರಕಾರದ ಬಳಿ ಬೇಡಿಕೆ

ಓಟಾವಾ (ಕೆನಡ) – ಕೆನಡಾ ಮತ್ತು ಭಾರತದ ಮಧ್ಯೆ ನಡೆಯುತ್ತಿರುವ ವಿವಾದದ ಮಧ್ಯೆ ಈಗ ಕೆನಡಾದ ಮುಸಲ್ಮಾನ ಸಂಘಟನೆ ಖಲಿಸ್ತಾನಿ ಸಿಖ್ ಗಳಿಗೆ ಬೆಂಬಲ ಘೋಷಿಸಿದೆ. “ನ್ಯಾಷನಲ್ ಕೌನ್ಸಿಲ್ ಆಫ ಕೆನಡಿಯನ್ ಮುಸ್ಲೀಂಸ್(ಎನ್.ಸಿ.ಸಿ.ಎಂ.) ಈ ಸಂಘಟನೆಯು “ಜಾಗತೀಕ ಸಿಖ್ ಸಂಘಟನೆ” ಜೊತೆಗೆ ಭಾರತದ ವಿರುದ್ದ ಕೆನಡಾ ಸರಕಾರಕ್ಕೆ ೪ ಬೇಡಿಕೆಗಳನ್ನು ಮುಂದಿಟ್ಟಿದೆ. ಇದರಲ್ಲಿ ಭಾರತದಲ್ಲಿರುವ ಕೆನಡಾದ ರಾಯಭಾರಿಯನ್ನು ಬೇಗನೆ ಕರೆಸಿಕೊಳ್ಳುವುದು, ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನು ಹೊರಹಾಕುವುದು ಕೆನಡಾ ಮತ್ತು ಭಾರತದ ಮಧ್ಯೆ ವ್ಯಾಪಾರ ಮಾತುಕತೆಗಳನ್ನು ನಿಷೇಧಿಸುವುದು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇಧವನ್ನು ಒಳಗೊಂಡಿದೆ.

ಸಂಪಾದಕೀಯ ನಿಲುವು

ಈ ರೀತಿಯ ಬೇಡಿಕೆಗಳನ್ನು ಮಾಡಿ ಕೆನಡಾದಲ್ಲಿನ ಮುಸಲ್ಮಾನ ಸಂಘಟನೆ ತನ್ನ ಬೇಳೆ ಬೇಯಿಸಲು ಪ್ರಯತ್ನಿಸುತ್ತಿದೆ !