ಪ್ರಖರ ಹಿಂದುತ್ವನಿಷ್ಠ ಯುಟ್ಯೂಬ್ ಚಾನೆಲ್ ‘ಸ್ಪ್ರಿಂಗ್ ರಿವೀಲ್ಸ್’ ಮೇಲೆ ಅನ್ಯಾಯವಾಗಿ ನಿಷೇಧ !

  • ಚಾನಲ್ ಗಂಭೀರವಾದ ನಿಯಮಗಳ ಉಲ್ಲಂಘನೆ ಮಾಡಿದೆ ಎಂದು ಯೂಟೂಬ್ ಆರೋಪಿಸಿದೆ !

  • ೧೪ ಲಕ್ಷಕ್ಕಿಂತಲೂ ಹೆಚ್ಚಿನ ಫಾಲೋವರ್ಸ್ !

ಮುಂಬಯಿ – ಹಿಂದೂ ಮತ್ತು ಭಾರತ ವಿರೋಧಿ ಶಕ್ತಿಗಳ ಷಡ್ಯಂತ್ರವನ್ನು ವಿಫಲಗೊಳಿಸಿ ಬಹಿರಂಗಪಡೆಸುವುದಕ್ಕಾಗಿ ಪ್ರಸಿದ್ಧವಾಗಿರುವ ‘ಸ್ಟ್ರಿಂಗ್ ರಿವೀಲ್ಸ್’ ಈ ಯುಟ್ಯೂಬ್ ಚಾನೆಲ್ ಮೇಲೆ ಯೌಟ್ಯೂಬ್ ನಿಂದ ತರ ತುರಿಯಲ್ಲಿ ನಿಷೇಧ ಹೇರಿದೆ. ಇದರ ಹಿಂದಿನ ಕಾರಣ ನೀಡುವಾಗ ಯೂಟ್ಯೂಬ್, ಈ ಚಾನಲ್ ಅದರ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿದೆ. ಸ್ಟ್ರಿಂಗ್ ರಿವಿಲ್ಸ್ ಇಂದ ಈ ಮಾಹಿತಿ ‘ಎಕ್ಸ್’ ಮೂಲಕ ಪೋಸ್ಟ್ ಮಾಡಿ ನೀಡಿದೆ. ‘ಸ್ಪ್ರಿಂಗ್ ರಿವೀಲ್ಸ್’, ಯೂಟ್ಯೂಬ್ ಇಲ್ಲಿಯವರೆಗೆ ಎಂದೂ ಈ ರೀತಿಯ ಯಾವುದಾದರೂ ಆಕ್ಷೇಪಾರ್ಯ ವಿಡಿಯೋದ ವಿರುದ್ಧ ಎಚ್ಚರಿಕೆ ನೀಡಲಿಲ್ಲ; ನೇರವಾಗಿ ಅದರ ಮೇಲೆ ನಿಷೇದ ಹೇರುವ ಅನ್ಯಾಯದ ಕ್ರಮ ಕೈಗೊಂಡಿದೆ. ‘ಸ್ಪ್ರಿಂಗ್ ರಿವೀಲ್ಸ್’ ತನ್ನ ಹೇಳಿಕೆಯಲ್ಲಿ, ಯುಟ್ಯೂಬ್ ನಿಂದ ಯಾರನ್ನು ಒಲಿಸುವುದಕ್ಕಾಗಿ ಈ ಕ್ರಮ ಕೈಗೊಂಡಿದೆ ಇದನ್ನು ಅದು ಸ್ಪಷ್ಟಪಡಿಸಬೇಕು. ನಾವು ನಿಮ್ಮ ವಿರುದ್ಧ ಮೇಲ್ಮಟ್ಟದವರೆಗೆ ಹೋಗಿ ಹೋರಾಡಬಹುದು, ಇದನ್ನು ನೀವು ಮರೆಯಬೇಡಿ. ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಕೇವಲ ಯುಟ್ಯೂಬ್ ಇದು ಒಂದೆ ಮಾಧ್ಯಮವಲ್ಲ, ಇದನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಿ ! ಸ್ಪ್ರಿಂಗ್ ರಿವಿಲ್ಸ್ ಮೇಲಿನ ಕ್ರಮದ ವಿರುದ್ಧ ‘ಎಕ್ಸ’ನಿಂದ ಹಿಂದುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕ ಹಿಂದುತ್ವನಿಷ್ಠರು ನಾವು ‘ಸ್ಪ್ರಿಂಗ್ ರಿವಿಲ್ಸ್’ ಜೊತೆಗೆ ಇರುವುದಾಗಿ ಮತ್ತು ಅವರಿಗಾಗಿ ಹೋರಾಡಲು ಕೂಡ ಸಿದ್ಧರಿದ್ದೇವೆ ಎಂದು ಹೇಳಿದೆ. ಸನಾತನ ಪ್ರಭಾತದಿಂದ ಕೂಡ ಇದರ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಈ ಸಂಘಟನೆಗೆ ಟ್ವೀಟ್ ಮೂಲಕ ತಿಳಿಸಿದೆ.

‘ಸ್ಪ್ರಿಂಗ್ ರಿವೀಲ್ಸ್’ ನಿಂದ ಹಿಂದೂ ಮತ್ತು ರಾಷ್ಟ್ರ ಹಿತಕ್ಕಾಗಿ ಮಾಡಿರುವ ಕಾರ್ಯ !

‘ಯುಟ್ಯೂಬ್’ನಲ್ಲಿ ೧೪ ಲಕ್ಷಕ್ಕಿಂತಲೂ ಹೆಚ್ಚಿನ ಫಾಲೋಅರ್ಸ್ ಇರುವ ‘ಸ್ಪ್ರಿಂಗ್ ರಿವೀಲ್ಸ್’ ಇಲ್ಲಿಯವರೆಗೆ ಸುಮಾರು ೨೫೦ ವಿಸ್ತೃತ ಅಧ್ಯಯನ ನಡೆಸಿ ವಿಡಿಯೋ ತಯಾರಿಸಿದೆ. ಇದರಲ್ಲಿನ ಕೆಲವು ವಿಡಿಯೋಗಳಿಗೆ ಕೋಟ್ಯಾಂತರ ವೀಕ್ಷಕರ ಸಂಖ್ಯೆ ಲಭಿಸಿದೆ. ‘ಸ್ಪ್ರಿಂಗ್ ರಿವೀಲ್ಸ್’ ಭಾರತ ಹಾಗೂ ಹಿಂದೂ ಧರ್ಮದ ವಿರುದ್ಧ ಕಾರ್ಯ ಮಾಡುವವರ ಷಡ್ಯಂತ್ರ ಬಹಿರಂಗಪಡಿಸುವುದಕ್ಕಾಗಿ ಪ್ರಸಿದ್ಧವಾಗಿದೆ. ಚಾನೆಲ್ ಹೆಸರಿನ ಪ್ರಕಾರ ಅದು ಯಾವುದೇ ಘಟನೆಯ ಹಿಂದಿನ ಷಡ್ಯಂತ್ರ ‘ಎಳೆ ಎಳೆಯಾಗಿ ಬಿಚ್ಚಿ’ ವಿಡಿಯೋದ ಮೂಲಕ ಜಗತ್ತಿನೆದು ಇಡುತ್ತದೆ. ಭಾರತದಲ್ಲಿ ನಡೆಯುವ ಮಹತ್ವದ ಘಟನೆಯ ಹಿಂದಿನ ಭಾರತ ವಿರೋಧಿ ಶಕ್ತಿಗಳು ಯಾವ ರೀತಿ ಕಾರ್ಯನಿರತವಾಗಿರುತ್ತವೆ, ಇದರ ಹಿನ್ನೆಲೆಯಲ್ಲಿನ ಸಂಪೂರ್ಣ ವಸ್ತುನಿಷ್ಠ ಮಾಹಿತಿ ಈ ಯೂಟ್ಯೂಬ್ ಚಾನೆಲ್ ಮೂಲಕ ನೀಡಲಾಗುತ್ತದೆ. ಇದರಲ್ಲಿ ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದಿರುವ ತಥಾಕಥಿತ ರೈತರ ಆಂದೋಲನ ಇರಲಿ ಅಥವಾ ಕರ್ನಾಟಕದಲ್ಲಿನ ಹಿಜಾಬ್ ವಿರೋಧಿ ಆಂದೋಲನ ಇರಲಿ ಅಥವಾ ಇತ್ತೀಚಿಗೆ ನಡೆದಿರುವ ಮಣಿಪುರ್ ಮತ್ತು ನೂಹ (ಹರಿಯಾಣ) ಇಲ್ಲಿಯ ಹಿಂಸಾಚಾರ ಆಗಿರಲಿ, ಎಲ್ಲಾ ಘಟನೆಯ ಹಿಂದಿನ ಅಂತರರಾಷ್ಟ್ರೀಯ ರಾಜಕಾರಣ, ಜಾತ್ಯತೀತ ಶಕ್ತಿಗಳ ಸಹಭಾಗ, ಹಿಂದೂಗಳ ಮೇಲಿನ ವಿಪತ್ತುಗಳು ಮುಂತಾದ ಎಲ್ಲಾ ವಿಷಯಗಳು ಅತ್ಯಂತ ಪ್ರಖರವಾಗಿ ಮತ್ತು ಸ್ಪಷ್ಟವಾಗಿ ಮಂಡಿಸುತ್ತಾ ಬಂದಿದೆ. ಅಷ್ಟೇ ಅಲ್ಲದೆ, ಈಶ್ವರಿ ಅಧಿಷ್ಟಾನ ಇಟ್ಟುಕೊಂಡು ಕಾರ್ಯ ಮಾಡುವ ಅಂಶಗಳ ಕೂಡ ಈ ಚಾನಲ್ ಮಾಧ್ಯಮದ ಮೂಲಕ ಆಗಾಗ ಮಾರ್ಗದರ್ಶನ ಮಾಡಿದೆ.

ಸಂಪಾದಕೀಯ ನಿಲುವು

ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳುವ ಸಾಮಾಜಿಕ ಮಾಧ್ಯಮಗಳು ಹಿಂದುತ್ವನಿಷ್ಠ ಸಂಘಟನೆಗಳ ಖಾತೆಗಳನ್ನು ಮಾತ್ರ ನಿಲ್ಲಿಸಿ ಅವುಗಳ ಧ್ವನಿಯನ್ನು ಅದುಮಿಡಲು ಪ್ರಯತ್ನ ಮಾಡುತ್ತಾರೆ. ಈ ದ್ವಿಮುಖ ನೀತಿಯ ವಿರುದ್ಧ ಈಗ ಹಿಂದುಗಳು ಸಂಘಟಿತರಾಗಿ ಪ್ರತಿಭಟಿಸುವುದು ಮತ್ತು ಅವರ ಮೇಲೆ ನಿಷೇಧ ಹೇರುವ ಅಸ್ತ್ರ ಪ್ರಯೋಗಿಸುವುದು ಆವಶ್ಯಕವಾಗಿದೆ !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಧ್ವನಿಯನ್ನೇ ಅದುಮಿಡಲಾಗುತ್ತಿದೆ, ಇದಕ್ಕಿಂತಲೂ ಲಚ್ಚಾಸ್ಪದವಾದ ವಿಷಯ ಬೇರೆ ಏನಿದೆ ? ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಇದರ ಬಗ್ಗೆ ಯೂಟ್ಯೂಬ್ ಗೆ ಪ್ರಶ್ನಿಸುವುದು ಅಪೇಕ್ಷಿತವಾಗಿದೆ. ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ ಇವರು ಕೂಡ ಇದರ ಬಗ್ಗೆ ಅಮೆರಿಕಾದ ಕಂಪನಿ ಯೂಟ್ಯೂಬ್ ನ ವಿರುದ್ಧ ಅಮೇರಿಕಾ ಸರಕಾರದ ಜೊತೆಗೆ ಚರ್ಚಿಸಬೇಕೆಂದು ಭಾರತೀಯರಿಗೆ ಅನಿಸುತ್ತದೆ !