ಪಾಕಿಸ್ತಾನವು ಕಾಶ್ಮೀರದ ಗಡಿಯಲ್ಲಿರುವ ಸೇನಾ ನೆಲೆಗಳ ಬಳಿ ಭಯೋತ್ಪಾದಕರನ್ನು ಒಗ್ಗೂಡಿಸಿತು !

ಅನಂತನಾಗನ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಭಾರತದಿಂದ ದಾಳಿಯಾಗುವ ಭಯ !

ಅನಂತನಾಗ (ಜಮ್ಮು-ಕಾಶ್ಮೀರ) – ಇಲ್ಲಿಯ ಕೊಕೆರನಾಗ ಪ್ರದೇಶದಲ್ಲಿ ಕಳೆದ ೬ ದಿನಗಳಿಂದ ಭದ್ರತಾಪಡೆಗಳು ಮತ್ತು ಜಿಹಾದಿ ಭಯೋತ್ಪಾದಕರ ನಡುವೆ ಚಕಮಕಿ ನಡೆಯುತ್ತಿದೆ. ಇನ್ನೂ ಇಲ್ಲಿನ ಪರ್ವತಗಳಲ್ಲಿ ೨ ಭಯೋತ್ಪಾದಕರು ಅಡಗಿದ್ದಾರೆ. ಈ ಹಿನ್ನಲೆಯಲ್ಲಿ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿರುವ ಸೇನಾನೆಲೆಗಳ ಬಳಿ ಪಾಕಿಸ್ತಾನವು ಬೃಹತ್ ಪ್ರಮಾಣದಲ್ಲಿ ಭಯೋತ್ಪಾದಕರನ್ನು ಒಗ್ಗೂಡಿಸಿದೆ. ಈ ಭಯೋತ್ಪಾದಕರು ಭಾರತದೊಳಕ್ಕೆ ನುಸುಳುವ ಸಿದ್ಧತೆಯಲ್ಲಿದ್ದಾರೆ. ಭಾರತೀಯ ಸೇನೆಯು ಪಾಕಿಸ್ತಾನದ ಗಡಿಯೊಳಗೆ ನುಸುಳಿ ಭಯೋತ್ಪಾದಕರ ವಿರುದ್ಧ ನೇರ ಕಾರ್ಯಾಚರಣೆ ಮಾಡದಂತೆ ಅವರನ್ನು ಸೇನಾನೆಲೆಗಳ ಬಳಿ ಇರಿಸಲಾಗಿದೆ.

ಗುಪ್ತಚಾರರು ಕೊಟ್ಟಿರುವ ಮಾಹಿತಿಯನುಸಾರ ಲಷ್ಕರ ಎ ತೊಯ್ಬಾದ ೪ ಭಯೋತ್ಪಾದಕರು ಕೆ,ಜಿ, ಸೆಕ್ಟರನಿಂದ ನುಸುಳುವ ಸಿದ್ಧತೆಯಲ್ಲಿದ್ದರೇ ಪುಂಛ ಸೆಕ್ಟರನಲ್ಲಿ ೫ ಭಯೋತ್ಪಾದಕರು ನುಸುಳುವ ಸಿದ್ಧತೆಯಲ್ಲಿದ್ದಾರೆ. ಕೋಟಲಿಯಲ್ಲಿ ೩ ಭಯೋತ್ಪಾದಕರು ಮತ್ತು ಕಿರವಾಲಿ ಧೋಕದಲ್ಲಿ ೪, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅನ್ನವಾಲಿ ಧೋಕನಲ್ಲಿ ೩ ಮತ್ತು ಸಜ್ಜಿ ಪೋಸ್ಟನಲ್ಲಿ ೪ ಹಾಗೂ ಜಮ್ಮುವಿನ ಸುಂದರಬನಿ ಗಡಿಯಲ್ಲಿ ೩ ಭಯೋತ್ಪಾದಕರು ನುಸುಳಲು ಸಿದ್ಧರಾಗಿದ್ದಾರೆ.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಪ್ರತಿವರ್ಷ ಭಾರತೀಯ ಪಡೆಗಳು ೧೦೦ ಕ್ಕೂ ಹೆಚ್ಚು ಭಯೋತ್ಪಾದಕರ ಹತ್ಯೆ ಮಾಡುತ್ತಿದ್ದಾರೆ, ಆದರೂ ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲಾಗಿಲ್ಲ; ಎಕೆಂದರೆ ಪಾಕಿಸ್ತಾನ ಭಯೋತ್ಪಾದಕರನ್ನು ಸೃಷ್ಟಿಸಿ ಅವರನ್ನು ಭಾರತದೊಳಗೆ ನುಸುಳಿಸುತ್ತಿದೆ. ಭಾರತ ಎಲ್ಲಿಯವರೆಗೆ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ವರ್ಷಗಟ್ಟಲೆ ಹೀಗೆಯೇ ಮುಂದುವರೆಯುವುದು, ಇದೇ ಪರಿಸ್ಥಿತಿ ಇರಲಿದೆ !