ಕ್ರಾಂತಿಕಾರಿ ಭಗತಸಿಂಗ್‌ ಶಿಕ್ಷೆಯ ಪ್ರಕರಣದಲ್ಲಿ ಮರುವಿಚಾರಣೆಗೆ ಲಾಹೋರ ಹೈಕೋರ್ಟ್‌ನಿಂದ ನಿರಾಕರಣೆ !

ಲಾಹೋರ (ಪಾಕಿಸ್ತಾನ್) – ಲಾಹೋರ ಹೈಕೋರ್ಟ್ ಕ್ರಾಂತಿಕಾರಿ ಭಗತಸಿಂಗ್‌ ಇವರಿಗೆ ೧೯೩೧ ರಲ್ಲಿ ವಿಧಿಸಿದ ಗಲ್ಲು ಶಿಕ್ಷೆಯ ಪ್ರಕರಣದಲ್ಲಿ ಮರುವಿಚಾರಣೆ ಮಾಡಬೇಕು, ಎಂಬ ಕೋರಿದ್ದ ಅರ್ಜಿಯನ್ನು ತಳ್ಳಿಹಾಕಿತು. ೨೦೧೩ ರಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ಕಳುಹಿಸಲಾಗಿತ್ತು. ಈ ಅರ್ಜಿಯಲ್ಲಿ ಭಗತಸಿಂಗ್‌ ಇವರಿಗೆ ಮರಣೋತ್ತರ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಬೇಕೆಂಬ ಬೇಡಿಕೆಯನ್ನೂ ಸಲ್ಲಿಸಲಾಗಿತ್ತು. ಇದಕ್ಕೆ ನ್ಯಾಯಾಲಯ ಆಕ್ಷೇಪ ವ್ಯಕ್ತ ಪಡಿಸಿದೆ.