‘ನೇಪಾಳದ ಕಡೆಗೆ ಈಗಾಗಲೇ ವಿದ್ಯುತ್ ಕೊರತೆ ಇದ್ದಾಗ ಅದನ್ನು ಭಾರತಕ್ಕೆ ಏಕೆ ಮಾರುತ್ತಿದೆ ? (ಅಂತೆ) – ನೇಪಾಳದಲ್ಲಿನ ಚೀನಾದ ರಾಯಭಾರಿ ಚೆನ ಸೊಂಗ

ನೇಪಾಳವು ಭಾರತಕ್ಕೆ ವಿದ್ಯುತ್ ಮಾರುತ್ತಿರುವುದರಿಂದ ಚೀನಾ ಕೆಂಡಮಂಡಲಾ !

ಕಾಠ್ಮಾಂಡು (ನೇಪಾಳ) – ನೇಪಾಳವು ಪ್ರತಿದಿನ ೬ ಕೋಟಿ ೭೦ ಲಕ್ಷ ರೂಪಾಯಿಗಳ ವಿದ್ಯುತ್ತನ್ನು ಭಾರತಕ್ಕೆ ಮಾರುತ್ತಿದೆ. ಇದಕ್ಕೆ ಈಗ ಚೀನಾವು ಆಕ್ಷೇಪಿಸಿದೆ. ನೇಪಾಳದಲ್ಲಿನ ಚೀನಾದ ರಾಯಭಾರಿ ಚೆನ ಸೊಂಗರವರು, ನೇಪಾಳದ ಬಳಿ ಈಗಾಗಲೇ ವಿದ್ಯುತ್ತಿನ ಕೊರತೆ ಇದೆ, ಹೀಗಿರುವಾಗ ಭಾರತಕ್ಕೆ ವಿದ್ಯುತ್ ಮಾರುವುದರಲ್ಲಿ ಯಾವುದೇ ಅರ್ಥವಿಲ್ಲ. ಭಾರತದ ಧೋರಣೆಯು ನೇಪಾಳದ ಹಿತಕ್ಕಾಗಿ ಇಲ್ಲ, ಎಂದು ದಾವೆ ಮಾಡಿದರು. (ಭಾರತದ ಧೋರಣೆಯು ಯಾವಾಗಲೂ ನೇಪಾಳದ ಹಿತದ ದೃಷ್ಟಿಯಿಂದಲೇ ಇದೆ. ನೇಪಾಳವನ್ನು ಭಾರತದಿಂದ ದೂರಗೊಳಿಸುವ ಷಡ್ಯಂತ್ರವನ್ನು ನೇಪಾಳದಲ್ಲಿನ ಚೀನಾದ ರಾಯಭಾರಿಯು ಮಾಡುತ್ತಿದೆ. ಈ ಷಡ್ಯಂತ್ರವನ್ನು ಗಮನದಲ್ಲಿಡಿ ! – ಸಂಪಾದಕರು)

ಕೆಲವು ದಿನಗಳ ಹಿಂದೆಯೇ ಭಾರತವು ನೇಪಾಳದೊಂದಿಗೆ ಒಪ್ಪಂದ ಮಾಡಿ ೧೦ ಸಾವಿರ ಮೆಗಾವ್ಯಾಟ್ ವಿದ್ಯುತ್ತನ್ನು ಖರೀದಿಸಲು ಆರಂಭಿಸಿತ್ತು. ನೇಪಾಳದ ವಿದ್ಯುತ್ ಪ್ರಾಧಿಕಾರವು ನೇಪಾಳದಲ್ಲಿ ಉಳಿದಿರುವ ವಿದ್ಯುತ್ತನ್ನು ಭಾರತಕ್ಕೆ ಮಾರಲಾಗುತ್ತಿದೆ. ನೇಪಾಳವು ಪ್ರತಿದಿನ ೧ ಕೋಟಿ ಯುನಿಟ ವಿದ್ಯುತ್ತನ್ನು ಭಾರತಕ್ಕೆ ಮಾರುತ್ತಿದೆ, ಎಂದು ಹೇಳಿದೆ.

ಸಂಪಾದಕೀಯ ನಿಲುವು

ನೇಪಾಳವು ಏನು ಮಾಡಬೇಕು ಮತ್ತು ಏನು ಮಾಡಬಾರದು, ಎಂಬುದನ್ನು ಹೇಳುವ ಅಧಿಕಾರವನ್ನು ಚೀನಾಗೆ ಯಾರು ನೀಡಿದರು ? ಎಂಬ ಪ್ರಶ್ನೆಯನ್ನು ನೇಪಾಳದ ಜನತೆಯು ಚೀನಾಗೆ ಕೇಳಬೇಕು !