ನಾವು ಯಾವ ಆಹಾರವನ್ನು ಸೇವಿಸುತ್ತೇವೆಯೋ, ಆ ಆಹಾರದಲ್ಲಿ ಯಾವ ಯಾವ ಘಟಕಗಳನ್ನು ಬೆರೆಸುತ್ತಾರೆಯೋ, ಆ ಘಟಕಗಳಲ್ಲಿ ಯಾವುದಾದರೊಂದು ಔಷಧಿ ಉಪಯೋಗ ನಿಶ್ಚಿತವಾಗಿ ಇರುತ್ತದೆ; ಆದುದರಿಂದ ನಮ್ಮ ಭಾರತೀಯ ಪಾಕಕಲೆಯು ಆರೋಗ್ಯದ ದೃಷ್ಟಿಯಿಂದ ಸರ್ವಶ್ರೇಷ್ಠವಾಗಿದೆ ಈಗ ಈ ಘಟಕಗಳು ಯಾವುವು ಮತ್ತು ಅವುಗಳಿಂದ ಔಷಧೀಯ ಉಪಯೋಗವನ್ನು ಹೇಗೆ ಮಾಡಬೇಕು ? ಎಂಬುದನ್ನು ನಾವು ಈ ವಾರ ತಿಳಿದುಕೊಳ್ಳುವವರಿದ್ದೇವೆ. ಈ ಮಾಹಿತಿಯನ್ನು ನಾವು ಮನೆಯಲ್ಲಿಯೇ ಚಿಕ್ಕ-ಪುಟ್ಟ ಕಾಯಿಲೆಗಳಿಗೆ ಸುಲಭವಾಗಿ ಚಿಕಿತ್ಸೆ ನೀಡಲು ಉಪಯೋಗಿಸಬಹುದು. ಚಿಕ್ಕ-ಪುಟ್ಟ (ಸಾಮಾನ್ಯ ಆರೋಗ್ಯದ ತೊಂದರೆಗಳಿಗೆ ಈ ರೀತಿ ಮನೆಯಲ್ಲಿಯೇ ಉಪಚಾರ ಮಾಡಲು ಯಾವುದೇ ಅಡಚಣೆ ಇಲ್ಲ; ಆದರೆ ಇಲ್ಲಿ ಎಲ್ಲರೂ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಅದೇನೆಂದರೆ ಯಾವುದಾದರೊಬ್ಬ ವ್ಯಕ್ತಿಗೆ ಗಂಭೀರ ಕಾಯಿಲೆ ಇದ್ದರೆ ಈ ಮನೆಮದ್ದುಗಳ ಮೇಲೆ ಅವಲಂಬಿಸಿರಬಾರದು. ವೈದ್ಯರ ಸಲಹೆಯನ್ನು ಪಡೆಯಬೇಕು. ಈ ಉಪಚಾರಗಳು ಪ್ರಾಥಮಿಕ ಸ್ವರೂಪದ್ದಾಗಿವೆ. ಆದುದರಿಂದ ತಾರತಮ್ಯದಿಂದ ಈ ಮಾಹಿತಿಯನ್ನು ರೋಗಗಳ ನಿರ್ಮೂಲನೆಗಾಗಿ ಉಪಯೋಗಿಸಬೇಕು.
೨೪/೪೭ ನೇ ಸಂಚಿಕೆಯಲ್ಲಿ ಪ್ರಕಟಿಸಲಾದ ಲೇಖನದಲ್ಲಿ ನಾವು ಸಾಸಿವೆ, ಜೀರಿಗೆ, ಇಂಗು ಮತ್ತು ಅರಿಶಿಣ ಇವುಗಳ ಔಷಧಿ ಉಪಯೋಗ ವನ್ನು ಓದಿದೆವು. ಇಂದಿನ ಲೇಖದಲ್ಲಿ ಕೊತ್ತಂಬರಿ ಕಾಳು (ಧನಿಯಾ) ಅಜವಾನ, ಲವಂಗ, ಯಾಲಕ್ಕಿ ಇವುಗಳ ಔಷಧೀಯ ಉಪಯೋಗವನ್ನು ಇಲ್ಲಿ ಕೊಡುತ್ತಿದ್ದೇವೆ.
ಭಾಗ – ೨
೫. ಕೊತ್ತಂಬರಿ ಕಾಳು
ಅ. ಮಸಾಲೆ ಪದಾರ್ಥಗಳಲ್ಲಿ ಕೊತ್ತಂಬರಿ ಕಾಳುಗಳು ಇರುತ್ತವೆ. ಕೊತ್ತಂಬರಿ ಕಾಳುಗಳು ನಮ್ಮ ಜಠರಾಗ್ನಿಯನ್ನು ಹೆಚ್ಚಿಸುವ ಕಾರ್ಯವನ್ನು ಬಹಳ ಚೆÀನ್ನಾಗಿ ಮಾಡುತ್ತವೆ. ಕೊತ್ತಂಬರಿ ಕಾಳುಗಳು ಪಿತ್ತವನ್ನು ಹೆಚ್ಚಿಸುವುದಿಲ್ಲ. ಆದುದರಿಂದ ಪಿತ್ತ ಪ್ರಕೃತಿಯ ವ್ಯಕ್ತಿಗಳು ಕೊತ್ತಂಬರಿ ಕಾಳುಗಳನ್ನು ಹೆಚ್ಚು ಬಳಸಬಹುದು.
ಆ. ಬಾಯಿಹುಣ್ಣು ಆದಾಗ ಕೊತ್ತಂಬರಿ ಕಾಳುಗಳ ರಸದಿಂದ ಬಾಯಿ ಮುಕ್ಕಳಿಸಬೇಕು.
ಇ. ಮೂಗು ಸೋರಿದರೆ (ಮೂಗಿನಿಂದ ರಕ್ತ ಬಂದರೆ) ೩-೪ ಹನಿ ಕೊತ್ತಂಬರಿ ಕಾಳುಗಳ ರಸವನ್ನು ಮೂಗಿನಲ್ಲಿ ಹಾಕಬೇಕು.
ಈ. ವಾಂತಿಯಾಗುತ್ತಿದ್ದರೆ ಅರ್ಧ ಚಮಚ ಕೊತ್ತಂಬರಿಕಾಳುಗಳ ಪುಡಿ ಮತ್ತು ಒಂದು ಚಮಚ ಕಲ್ಲುಸಕ್ಕರೆಯನ್ನು ತಿನ್ನಬೇಕು.
ಉ. ಕೆಂಗಣ್ಣು ರೋಗ ಬಂದಾಗ ಕಣ್ಣುಗಳು ಉರಿಯುತ್ತವೆ ಮತ್ತು ಕಣ್ಣುಗಳಲ್ಲಿ ಒಂದೇಸವನೇ ಏನೋ ಚುಚ್ಚಿದ ಹಾಗೆ ಅನಿಸುತ್ತದೆ. ಇಂತಹ ಸಮಯದಲ್ಲಿ ಔಷಧೋಪಚಾರಗಳ ಜೊತೆಗೆ ಕೊತ್ತಂಬರಿ ಕಾಳುಗಳ ಪುಡಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ ತೊಯಿಸಿ ಸ್ವಲ್ಪ ಸ್ವಲ್ಪ ಸಮಯದ ನಂತರ ಅದನ್ನು ಕಣ್ಣುಗಳ ಮೇಲೆ ಇಡಬೇಕು.
ಊ. ಮೇಲಿಂದ ಮೇಲೆ ಆಗುವ ಪಿತ್ತದಿಂದ ಗಂಟಲಿನಲ್ಲಿ ಉರಿಯುವುದು, ಮೈ ಉರಿಯುವುದು ಕಣ್ಣುಗಳು ಉರಿಯು ವುದು, ಇಂತಹ ತೊಂದರೆಗಳಾಗುತ್ತಿದ್ದರೆ ರಾತ್ರಿ ಒಂದು ಲೋಟ ನೀರಿನಲ್ಲಿ ಅರ್ಧ ಚಮಚ ಕೊತ್ತಂಬರಿ ಕಾಳುಗಳ ಪುಡಿ ಮತ್ತು ಅರ್ಧ ಚಮಚ ಜೀರಿಗೆ ಪುಡಿಯನ್ನು ಹಾಕಿ ರಾತ್ರಿ ನೆನೆಸಿಡಬೇಕು. ಬೆಳಗ್ಗೆ ಈ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಎ. ಒಂದೇಸಮನೆ ಒಣ ಕೆಮ್ಮು ಬರುತ್ತಿದ್ದರೆ ಕೊತ್ತಂಬರಿ ಕಾಳು ಗಳನ್ನು ಕಲ್ಲುಸಕ್ಕರೆಯೊಂದಿಗೆ ಅಗಿದು ತಿನ್ನಬೇಕು.
ಐ. ಮೂತ್ರವಿಸರ್ಜನೆ ಮಾಡುವಾಗ ಮೂತ್ರ ಉರಿಯುವುದು, ಮೂತ್ರ ಸಂಪೂರ್ಣ ಆಗದಿರುವುದು ಇವುಗಳಿಗೆ ಉಪಚಾರ ವೆಂದು ಅರ್ಧ ಚಮಚ ಕೊತ್ತಂಬರಿ ಕಾಳುಗಳ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಇಡೀ ರಾತ್ರಿ ನೆನೆಸಿ ಬೆಳಗ್ಗೆ ಸೋಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
೫. ಅಜವಾನ
ಅಜವಾನವು ಉಷ್ಣ ಗುಣಧರ್ಮದ್ದಾಗಿರುವುದರಿಂದ ಅದು ಜಠರಾಗ್ನಿಯನ್ನು ಹೆಚ್ಚಿಸುವ ಕಾರ್ಯವನ್ನು ಒಳ್ಳೆಯ ರೀತಿಯಲ್ಲಿ ಮಾಡುತ್ತದೆ.
ಅ. ಅಪಚನವಾಗಿದ್ದರೆ, ಹೊಟ್ಟೆಯಲ್ಲಿ ‘ಗ್ಯಾಸ್’ನಿಂದ (ವಾಯು ವಿನಿಂದ) ನೋಯಿಸುತ್ತಿದ್ದರೆ, ಕಾಲು ಚಮಚ ಅಜವಾನ ತಿಂದು ಅದರ ಮೇಲೆ ಬಿಸಿನೀರು ಕುಡಿಯಬೇಕು. ಅಜವಾನ
ವನ್ನು ಬಟ್ಟೆಯಲ್ಲಿ ಕಟ್ಟಿ ಅದರಿಂದ ಹೊಟ್ಟೆಯನ್ನು ಕಾಯಿಸಬಹುದು.
ಆ. ಹೊಟ್ಟೆಯಲ್ಲಿ ಜಂತುಗಳು ಆಗಿದ್ದರೆ, ಅಜವಾನವನ್ನು ವೀಳ್ಯದೆಲೆಯ ಜೊತೆಗೆ ತಿನ್ನಲು ಕೊಡಬೇಕು.
ಇ. ವಾಂತಿಯಾಗುತ್ತಿದ್ದರೆ, ಅಜವಾನ ಮತ್ತು ಲವಂಗದ ಒಂದು ಚಿಟಿಕೆ ಚೂರ್ಣವನ್ನು ಜೇನುತುಪ್ಪದೊಂದಿಗೆ ನೆಕ್ಕಿ ತಿನ್ನಬೇಕು.
ಈ. ಹಸಿವಾಗದಿದ್ದರೆ ಕಾಲು ಚಮಚ ಅಜವಾನ ಮತ್ತು ಒಂದು ಚಿಟಿಕೆ ಸೈಂಧವ ಲವಣ (ಉಪ್ಪು)ವನ್ನು ಬೆಚ್ಚನೆಯ ನೀರಿ ನೊಂದಿಗೆ ಸೇವಿಸಬೇಕು.
೬. ಲವಂಗ
ಅ. ಲವಂÀಗದ ರುಚಿ ಖಾರ ಮತ್ತು ಕಹಿ ಇದ್ದರೂ, ಅದು ತಂಪುಗುಣಧರ್ಮದ್ದಾಗಿದೆ.
ಆ. ಬಾಯಿಯಿಂದ ದುರ್ಗಂಧ ಬರುತ್ತಿದ್ದರೆ ಲವಂಗವನ್ನು ಅಗಿಯಬೇಕು.
ಇ. ಹಲ್ಲು ಬಹಳ ನೋಯುತ್ತಿದ್ದರೆ ಹತ್ತಿಯ ಮೇಲೆ ಲವಂಗದ ಎಣ್ಣೆಯನ್ನು ಹಾಕಿ ಅದನ್ನು ಹಲ್ಲಿನ ಮೇಲೆ ಒತ್ತಿ ಹಿಡಿಯಬೇಕು. ಅದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.
ಈ. ಮೇಲಿಂದ ಮೇಲೆ ಕೆಮ್ಮು ಬರುತ್ತಿದ್ದರೆ, ದಮ್ಮಿನ (ಅಸ್ತಮಾದ) ತೊಂದರೆಯಿಂದ ಕೆಮ್ಮು ಬಂದಂತಾಗುತ್ತಿದ್ದರೆ, ಒಂದು ಚಿಟಿಕೆ ಲವಂಗದ ಚೂರ್ಣವನ್ನು ಜೇನುತುಪ್ಪದೊಂದಿಗೆ ಬೆರಸಿ ನೆಕ್ಕಿ ತಿನ್ನಬೇಕು.
ಉ. ಅವರೆಕಾಳು, ಕಡಲೆಬೇಳೆ, ಚೆನ್ನಂಗಿ ಬೇಳೆಯಂತಹ ಕಾಳುಗಳ ಪದಾರ್ಥಗಳನ್ನು ಬಹಳಷ್ಟು ಪ್ರಮಾಣದಲ್ಲಿ ತಿನ್ನುವುದರಿಂದ ಅಜೀರ್ಣವಾಗಿ ಹೊಟ್ಟೆ ಉಬ್ಬಿದರೆ, ಹುರಿದ ಲವಂಗದ ಒಂದು ಚಿಟಿಕೆ ಚೂರ್ಣವನ್ನು ಜೇನುತುಪ್ಪದೊಂದಿಗೆ ತಿನ್ನಬೇಕು. ಅದರಿಂದ ಹೊಟ್ಟೆಯಲ್ಲಿರುವ ವಾಯುವಿಗೆ (ಗ್ಯಾಸಗೆ) ಗತಿ (ವೇಗ) ಸಿಕ್ಕು ಹೊಟ್ಟೆ ಹಗುರಾಗುತ್ತದೆ. ಸದ್ಯ ಬಹಳಷ್ಟು ಜನರು ಊಟ ಹೆಚ್ಚಾದರೆ, ಸೋಡಾ ಇರುವ ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಉಪಹಾರಗೃಹಗಳಲ್ಲಿಯೂ ಒಂದು ರೂಢಿ ಯಾಗಿ ‘ಕೊಲ್ಡ್ ಡ್ರಿಂಕ ಬೇಕಾ ?’, ಎಂದು ಕೇಳುತ್ತಾರೆ.
ಅವುಗಳ ಮೂಲಕ ಅತಿಹೆಚ್ಚು ಪ್ರಮಾಣದಲ್ಲಿ ಸಕ್ಕರೆ ಶರೀರ ದಲ್ಲಿ ಹೊಗುತ್ತದೆ. ನಿಜ ಹೇಳುವುದಾದರೆ ನಾವು ಊಟವನ್ನೇ ಸರಿ ಪ್ರಮಾಣದಲ್ಲಿ ಮಾಡಿದರೆ, ಈ ತೊಂದರೆಯೇ ಆಗುವುದಿಲ್ಲ; ಆದರೆ ನಾಲಿಗೆಯ ಚಪಲದಿಂದ ಜಾಸ್ತಿ ತಿಂದರೆ ಈ ರೀತಿಯ ತೊಂದರೆ ಯಾವಾಗಲಾದರೊಮ್ಮೆ ಆಗುತ್ತದೆ. ಹೀಗಾದಾಗ ಲವಂಗದ ಚೂರ್ಣವನ್ನು ಸೇವಿಸುವುದು, ಆರೋಗ್ಯಕ್ಕಾಗಿ ಎಂದಿಗೂ ಹಿತಕರವೇ ಆಗಿದೆ.
೭. ಜಾಜೀಕಾಯಿ
ಅ. ನಮ್ಮಲ್ಲಿ ಸಿಹಿ ಪದಾರ್ಥಗಳಿಗೆ ಸುಗಂಧ ಬರಬೇಕೆಂದು ಜಾಜೀಕಾಯಿಯನ್ನು ಬಳಸುತ್ತಾರೆ. ಜಾಜೀಕಾಯಿ ಉಷ್ಣ ಗುಣಧರ್ಮದ್ದಾಗಿದೆ.
ಆ. ತಲೆ ನೋಯುತ್ತಿದ್ದರೆ ಜಾಜೀಕಾಯಿಯನ್ನು ತೇಯ್ದು ಹಣೆಗೆ ಹಚ್ಚಬೇಕು.
ಇ. ನಿದ್ದೆ ಬರದಿದ್ದರೆ, ಜಾಜೀಕಾಯಿಯನ್ನು ತೇಯ್ದು ಅದರ ಲೇಪವನ್ನು ಹಣೆಗೆ ಮತ್ತು ಅಂಗಾಲುಗಳಿಗೆ ಹಚ್ಚಬೇಕು.
ಈ. ಹೊಟ್ಟೆನೋವು ಬಂದು ಭೇದಿ ಆಗುತ್ತಿದ್ದರೆ, ಜಾಜೀಕಾಯಿ ಯನ್ನು ಹೆರೆಯಬೇಕು ಮತ್ತು ಹೆರೆದ ಜಾಜೀಕಾಯಿಯನ್ನು ಕಾಲು ಚಮಚ ತುಪ್ಪ ಮತ್ತು ಕಾಲು ಚಮಚ ಸಕ್ಕರೆಯೊಂದಿಗೆ ಸೇವಿಸಿದರೆ ಹೊಟ್ಟೆನೋವಿನ ಪ್ರಮಾಣವು ಕಡಿಮೆಯಾಗಿ ಭೇದಿಯೂ ನಿಲ್ಲುತ್ತದೆ.
ಉ. ಮುಖದ ಮೇಲೆ ತಾರುಣ್ಯದ ಮೊಡವೆಗಳು ಬರುತ್ತಿದ್ದರೆ, ಜಾಜೀಕಾಯಿಯನ್ನು ಹಾಲಿನಲ್ಲಿ ತೇಯ್ದು ಮುಖದ ಮೇಲೆ ಅದರ ಲೇಪವನ್ನು ಹಚ್ಚಬೇಕು. ಅದರಿಂದ ಮುಖದ ಮೇಲೆ
ಮೊಡವೆಗಳ ಕಲೆಗಳು ಬೀಳುವುದಿಲ್ಲ ಮತ್ತು ಚರ್ಮ ಸ್ವಚ್ಛವಾಗುತ್ತದೆ.
೭. ದಾಲ್ಚಿನಿ (ಚಕ್ಕೆ)
ಅ. ಶೀತದಿಂದ ತಲೆ ನೋಯುÄತ್ತಿದ್ದರೆ ದಾಲ್ಚಿನಿಯನ್ನು ತೇಯ್ದು ಅದರ ಲೇಪವನ್ನು ಹಣೆಗೆ ಹಚ್ಚಬೇಕು.
ಆ. ದಾಲ್ಚಿನಿಯು ಒಸಡುಗಳನ್ನು ಗಟ್ಟಿ ಮಾಡುತ್ತದೆ. ಆದುದರಿಂದ ದಾಲ್ಚಿನಿಯ ಒಂದು ತುಂಡನ್ನು ಬಾಯಿಯಲ್ಲಿಟ್ಟರೆ ಒಸಡುಗಳು ಆರೋಗ್ಯಕರವಾಗಿರುತ್ತವೆ.
ಇ. ದಾಲ್ಚಿನಿಯ ಒಂದು ತುಂಡನ್ನು ಬಾಯಿಯಲ್ಲಿಟ್ಟುಕೊಂಡರೆ ವಾಂತಿಯ ಲಕ್ಷಣ (ವಾಕರಿಕೆ) ಕಡಿಮೆಯಾಗುತ್ತದೆ.
ಈ. ಹುಳುಕು ಹಲ್ಲಿನ ಮೇಲೆ ದಾಲ್ಚಿನಿಯ ಎಣ್ಣೆಯಲ್ಲಿ ಅದ್ದಿದ ಹತ್ತಿಯನ್ನು ಇಟ್ಟರೆ, ನೋವು ಕಡಿಮೆಯಾಗುತ್ತದೆ.
ಉ. ದಾಲ್ಚಿನಿಯು ಉಷ್ಣವಾಗಿರುವುದರಿಂದ ಕೆಮ್ಮು, ದಮ್ಮು ಗಳಂತಹ ಕಾಯಿಲೆಗಳಿಗಾಗಿ ಬಳಸುವ ಔಷಧಿಗಳಲ್ಲಿ ಅದನ್ನು ಉಪಯೋಗಿಸುತ್ತಾರೆ.
– ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪುಣೆ (೧೬.೭.೨೦೨೩)
ಒಂದೆರೆಡು ದಿನಗಳಲ್ಲಿ ಮನೆಮದ್ದುಗಳ ಪರಿಣಾಮವು ಕಂಡು ಬರದಿದ್ದರೆ, ಅವುಗಳನ್ನೇ ಅವಲಂಬಿಸಿಕೊಂಡಿರದೇ ವೈದ್ಯರಿಂದ ಯೋಗ್ಯಸಲಹೆಯನ್ನು ಪಡೆಯುವುದು ಆವಶ್ಯಕವಾಗಿದೆ.