
ವಾರಣಾಸಿ (ಉತ್ತರ ಪ್ರದೇಶ) – ಯಾರು ಸನಾತನ ಧರ್ಮವನ್ನು ಅವಮಾನಿಸುತ್ತಿದ್ದಾರೆಯೋ ಅವರ 2024 ರಲ್ಲಿ (2024ರಲ್ಲಿ ದೇಶದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ) ಅಂತ್ಯವಾಗಲಿದೆ ಎಂದು ಯೋಗಿಶಿ ರಾಮದೇವ ಬಾಬಾ ಇವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.
#BabaRamdev on ‘Potassium Cyanide’ remark, says ‘Those attacking Sanatan will get salvation in 2024’
🌐 Catch the day’s latest news and updates ➠ https://t.co/Uf2njknhRX pic.twitter.com/KFF4h1AJa6— Economic Times (@EconomicTimes) September 15, 2023
ಕಳೆದ ಕೆಲವು ದಿನಗಳಿಂದ ಸನಾತನ ಧರ್ಮವನ್ನು ಮುಗಿಸುವ ಬಗ್ಗೆ ವಿವಿಧ ರಾಜಕೀಯ ಮುಖಂಡರು ನೀಡುತ್ತಿರುವ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಯೋಗ ಋಷಿ ರಾಮದೇವ ಬಾಬಾ ಅವರು ಕಾಶಿಯನ್ನು ಶ್ಲಾಘಿಸುತ್ತಾ, ಸನಾತನ ಧರ್ಮದ ಮರ್ಮ ಕಾಶಿಯಲ್ಲಿದೆ. ಕಾಶಿ ಶಾಶ್ವತ ನಗರವಾಗಿದೆ. ಇದು ಅನಾದಿ ಮತ್ತು ಅನಂತ ಕಾಲದಿಂದಲೂ ಉಪಾಸನೆಯ ಮಹಾತೀರ್ಥವಾಗಿದೆ. ಇದು ಕಲಿಕೆ ಮತ್ತು ಮೋಕ್ಷದ ನಗರವಾಗಿದೆ. ಈಗ ಸಂಪೂರ್ಣ ಜಗತ್ತಿನಲ್ಲಿ ಕಾಶಿ ಆರೋಗ್ಯ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕಾಗಿ ಜಗತ್ತಿನಲ್ಲಿ ಆಕರ್ಷಣೆಯ ಕೇಂದ್ರವಾಗಿದೆ ಎಂದು ಹೇಳಿದರು. (ಕಾಶಿ ಪ್ರವಾಸೋದ್ಯಮವಲ್ಲ, ಬದಲಾಗಿ ಹಿಂದೂ ಧರ್ಮಶಿಕ್ಷಣದ ಕೇಂದ್ರವಾಗಬೇಕು ! – ಸಂಪಾದಕರು) ಸಂಸ್ಕೃತಿ ಮತ್ತು ಜ್ಞಾನವು ಇದು ಸನಾತನ ಧರ್ಮದ ಸಾರವಾಗಿದೆ. (ಸನಾತನ ಧರ್ಮದ ಸಾರವನ್ನು ಎಲ್ಲರಿಗೂ ತಿಳಿಸಲು ಅದನ್ನು ಹೇಳುವುದು ಅವಶ್ಯಕವಾಗಿದೆ. ಅದಕ್ಕೊಂದು ವ್ಯವಸ್ಥೆಯನ್ನು ಮಾಡಬೇಕು ! – ಸಂಪಾದಕರು)
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.