(ನಕಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಲೆ, ಕತ್ತು ಮತ್ತು ಮುಖ ಮುಚ್ಚಿಕೊಳ್ಳುವುದಕ್ಕಾಗಿ ಉಪಯೋಗಿಸುವ ಬಟ್ಟೆ. ಇದರಲ್ಲಿ ಕೇವಲ ಮಹಿಳೆಯರ ಕಣ್ಣು ಕಾಣುತ್ತದೆ.)
ಕೈರೋ – ಈಜಿಪ್ತನಲ್ಲಿ ಸೆಪ್ಟೆಂಬರ್ ೩೦ ರಿಂದ ಹೊಸ ಶೈಕ್ಷಣಿಕ ವರ್ಷಕ್ಕೆ ಆರಂಭವಾಗುವುದು. ಈ ಚಾಲತಿ ವರ್ಷದಲ್ಲಿ ವಿದ್ಯಾರ್ಥಿನಿಗಳಿಗೆ ನಕಾಬ್ ಧರಿಸಲು ನಿಷೇಧ ಹೇರಲಾಗಿದೆ. ದೇಶದ ಶಿಕ್ಷಣ ಸಚಿವ ರೇಡ ಹೇಗಾಜಿ ಇವರು ಸರಕಾರ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ಹೇಳುವಾಗ, ಸರಕಾರದ ಹೊಸ ನಿಯಮಗಳ ಪ್ರಕಾರ ವಿದ್ಯಾರ್ಥಿನಿಯರು ತಲೆಯ ಭಾಗ ಮುಚ್ಚಿಕೊಳ್ಳಬಹುದು; ಆದರೆ ಅವರ ಮುಖ ತೆರೆದಿರುವುದು ಅವಶ್ಯಕವಾಗಿದೆ. ಈ ನಿಯಮ ಉಲ್ಲಂಘನೆ ಮಾಡುವ ಹುಡುಗಿಯರಿಗೆ ಶಾಲೆಯಲ್ಲಿ ಪ್ರವೇಶ ನೀಡಲಾಗುವುದಿಲ್ಲ ಎಂದು ಹೇಳಿದೆ.
Is Egypt’s veil ban a violation of religious freedom?https://t.co/5NKvneUX3s
— WION (@WIONews) September 12, 2023
ದೇಶದಲ್ಲಿನ ಕಟ್ಟರವಾದಿ ಸಂಘಟನೆಗಳು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಹಾಗೂ ಸಾರ್ವಜನಿಕರು ಸ್ವಾಗತಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ‘ತಾಲಿಬಾನಿ ಮತ್ತು ಇಸ್ಲಾಮಿಕ್ ಸ್ಟೇಟ್’ ಇದರ ಬೆಂಬಲಿರು ಈ ನಿರ್ಣಯವನ್ನು ವಿರೋಧಿಸುತ್ತಿದ್ದಾರೆ’, ಎಂದು ಜನರ ಅಭಿಪ್ರಾಯವಾಗಿದೆ. ದೇಶದಲ್ಲಿನ ಅನೇಕ ಖಾಸಗಿ ಸಂಸ್ಥೆಗಳಿಂದ ನಕಾಬ್ ಗೆ ನಿಷೇಧ ಹೇರಿದ್ದಾರೆ. ಇದಕ್ಕೂ ಮುನ್ನ ಅಂದರೆ 2015 ರಲ್ಲಿ ಮಧ್ಯ ಪ್ರಾಚ್ಯದ ಎಲ್ಲಕ್ಕಿಂತ ಹಳೇ ವಿದ್ಯಾಪೀಠವೆಂದು ಗುರುತಿಸುರುವ ಕಾಹಿರಾ ವಿದ್ಯಾಪೀಠವು ಮಹಿಳಾ ಪ್ರಾಧ್ಯಾಪಕಿಗೆ ನಕಾಬ್ ಮೇಲೆ ನಿಷೇಧ ಹೇರಿತ್ತು. ಆದರೆ ನಿರ್ಣಯಕ್ಕೆ ಅಲ್ಲಿಯ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು; ಆದರೆ ನ್ಯಾಯಾಲಯವು ಈ ನಿರ್ಣಯ ಖಾಯಂಗೊಳಿಸಿತ್ತು.