ಪೊಲೀಸರಿಂದ ಅಪರಾಧದ ಪ್ರಕರಣಗಳ ಬಗ್ಗೆ ಪ್ರಸಾರ ಮಾಧ್ಯಮಗಳಿಗೆ ನೀಡಲಾಗುವ ಮಾಹಿತಿಯ ಬಗ್ಗೆ ನಿಯಮಾವಳಿಯನ್ನು ಸಿದ್ಧಪಡಿಸಿ ! – ಸರ್ವೋಚ್ಛ ನ್ಯಾಯಾಲಯ

ಸರ್ವೋಚ್ಛ ನ್ಯಾಯಾಲಯದಿಂದ ಕೇಂದ್ರೀಯ ಗೃಹಸಚಿವಾಲಯಕ್ಕೆ ಆದೇಶ !

ನವ ದೆಹಲಿ – ಅಪರಾಧದ ಪ್ರಕರಣಗಳ ಬಗ್ಗೆ ಪೊಲೀಸರಿಂದ ಪ್ರಸಾರ ಮಾಧ್ಯಮಗಳಿಗೆ ನೀಡಲಾಗುವ ಮಾಹಿತಿಯ ಬಗ್ಗೆ ನಿಯಮಾವಳಿಯನ್ನು ಸಿದ್ಧಪಡಿಸಬೇಕೆಂದು ಸರ್ವೋಚ್ಛ ನ್ಯಾಯಾಲಯವು ಆದೇಶಿಸಿದೆ. ಒಂದು ತಿಂಗಳಿನಲ್ಲಿ ಎಲ್ಲ ರಾಜ್ಯಗಳ ಪೊಲೀಸ ಮಹಾಸಂಚಾಲಕರು ಈ ಬಗೆಗಿನ ಸೂಚನೆಯನ್ನು ಕೇಂದ್ರೀಯ ಗೃಹಸಚಿವಾಲಯಕ್ಕೆ ಕಳುಹಿಸಬೇಕು. ಹಾಗೆಯೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದಲೂ ಸೂಚನೆಯನ್ನು ಕೇಳಬೇಕು, ಎಂದು ನ್ಯಾಯಾಲಯವು ಹೇಳಿದೆ.

(ಸೌಜನ್ಯ – Live Law)

ತನಿಖೆ ನಡೆದಿರುವ ಪ್ರಕರಣದ ಸಂದರ್ಭದಲ್ಲಿ ಪ್ರಸಾರ ಮಾಧ್ಯಮಗಳಿಗೆ ಮಾಹಿತಿ ನೀಡುವ ಪೊಲೀಸರ ಪದ್ಧತಿಯ ಬಗ್ಗೆ ದಾಖಲಿಸಲಾದ ಅರ್ಜಿಯ ಮೇಲೆ ಸರ್ವೋಚ್ಚ ನ್ಯಾಯಾಲಯದಲ್ಲಿ ಆಲಿಕೆ ನಡೆದಿದೆ. ಈ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಕೇಂದ್ರೀಯ ಗೃಹಸಚಿವಾಲಯಕ್ಕೆ ಈ ಮೇಲಿನಂತೆ ಆದೇಶಿಸಿದೆ.

ನ್ಯಾಯಾಲಯವು, ಪಕ್ಷಪಾತಿ ವಾರ್ತೆಗಳನ್ನು ಬಿತ್ತರಿಸುವುದರಿಂದ ಅಪರಾಧ ಮಾಡಿದ ವ್ಯಕ್ತಿಯ ಬಗ್ಗೆ ಜನರಲ್ಲಿ ಸಂಶಯದ ವಾತಾವರಣ ನಿರ್ಮಾಣವಾಗಲು ಆರಂಭವಾಗುತ್ತದೆ. ಮಾಧ್ಯಮಗಳಲ್ಲಿನ ವಾರ್ತೆಗಳಿಂದ ಸಂತ್ರಸ್ಥರ ಖಾಸಗೀತನವು ಭಂಗವಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.