ಸನಾತನವನ್ನು ಮುಗಿಸಲು ನೋಡುವ ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟವನ್ನು ತಡೆಯಿರಿ ! – ಪ್ರಧಾನಿ ಮೋದಿ

ಸನಾತನ ಧರ್ಮ ಮುಗಿಸುವ ಇಂಡಿಯಾ ಮೈತ್ರಿಕೂಟದ ವಿರುದ್ಧ ಪ್ರಧಾನಮಂತ್ರಿ ಮೋದಿ ಇವರಿಂದ ಹಿಂದುಗಳಿಗೆ ಕರೆ !

(‘ಘಮಂಡಿಯಾ’ ಎಂದರೆ ದುರಹಂಕಾರಿ)

ಸಾಗರ (ಮಧ್ಯಪ್ರದೇಶ) – ಭಾರತದಲ್ಲಿ ದೇಶ ಮತ್ತು ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸದಲ್ಲಿ ತೊಡಗಿರುವ ಕೆಲವು ಪಕ್ಷಗಳಿವೆ. ಅವರು ಒಟ್ಟಾಗಿ ಸೇರಿ ‘ಐ.ಏನ್.ಡಿ.ಐ.ಎ.’ (ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈನ್ಸ್ – ಇಂಡಿಯಾ) ಹೆಸರಿನ ಒಂದು ಮೈತ್ರಿಕೂಟ ಮಾಡಿಕೊಂಡಿದೆ. ಈ ಮೈತ್ರಿಕೂಟಕ್ಕೇ ಕೆಲವು ಜನರು ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟ ಎನ್ನುತ್ತಾರೆ. ಇದಕ್ಕೆ ನಾಯಕನಿಲ್ಲ, ಇಲ್ಲಿಯವರೆಗೆ ನೇತೃತ್ವದಲ್ಲಿ ಒಮ್ಮತವಿಲ್ಲ; ಆದರೆ ಅವರಿಗೆ ಮುಂಬಯಿಯಲ್ಲಿನ ಸಭೆಯಲ್ಲಿ ಅವರು ‘ಅವರ ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟ ಹೇಗೆ ಕೆಲಸ ಮಾಡಲಿದೆ ?’, ಇದರ ರಣತಂತ್ರವನ್ನು ನಿರ್ಮಿಸಿದೆ. ಇದರಲ್ಲಿ ಒಂದು ರಹಸ್ಯನೀತಿ ನಿರ್ಧರಿಸಲಾಯಿತು. ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡುವುದು, ಇದೇ ಅವರ ನೀತಿಯಾಗಿದೆ. ಸನಾತನ ಧರ್ಮ ಮುಗಿಸುವುದು ಇವರ ಉದ್ದೇಶವಾಗಿದೆ. ಅವರು ಸನಾತನವನ್ನು ನಾಶ ಮಾಡಿ ದೇಶವನ್ನು ಮತ್ತೊಮ್ಮೆ ಒಂದು ಸಾವಿರ ವರ್ಷದ ಗುಲಾಮಗಿರಿಗೆ ತಳ್ಳಲು ಬಯಸಿದ್ದಾರೆ; ಆದರೆ ನಾವೆಲ್ಲರೂ ಸಂಘಟಿತರಾಗಿ ಅವರನ್ನು ತಡೆಯಬೇಕೆಂದು ಪ್ರಧಾನಮಂತ್ರಿ ಮೋದಿ ಇವರು ಹೇಳಿಕೆ ನೀಡಿದರು. ‘ಇಂಡಿಯಾ’ ಮೈತ್ರಿಕೂಟದಲ್ಲಿನ ಒಂದು ಘಟಕ ಆಗಿರುವ ದ್ರಮುಕದ ಸಚಿವರು ಸನಾತನ ಧರ್ಮ ನಾಶ ಮಾಡುವ ಹೇಳಿಕೆ ನೀಡುತ್ತಿದ್ದರು. ಪ್ರಧಾನಿ ಮೋದಿ ಇವರು ಭಾಷಣದಲ್ಲಿ ಈ ಬಗ್ಗೆ ಗಧಾ ಪ್ರಹಾರ ಮಾಡಿದರು. ಅವರು ತೈಲ ಶುದ್ಧೀಕರಣ ಇಲ್ಲದೆ ಈ ೫೦ ಸಾವಿರ ಕೋಟಿ ರೂಪಾಯಿಯ ಪೆಟ್ರೋ ಕೆಮಿಕಲ್ ಯೋಜನೆ ಅಡಿಪಾಯ ಇಟ್ಟರು. ಇಲ್ಲಿಂದ ೩ ಕಿಲೋಮೀಟರ್ ದೂರದಲ್ಲಿರುವ ಹಡಕಲಖಾಟಿ ಗ್ರಾಮದಲ್ಲಿ ಆಯೋಜಿಸಿರುವ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಧಾನಿ ಮೋದಿ ಇವರು ಸನಾತನ ಧರ್ಮದ ಬಗ್ಗೆ ಮಂಡಿಸಿರುವ ಅಂಶಗಳು

೧. ಈ ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟದ ಉದ್ದೇಶ ಭಾರತೀಯ ಶ್ರದ್ಧೆಯ ಮೇಲೆ ಆಘಾತ ಮಾಡುವುದಾಗಿದೆ. ಭಾರತ ಯಾವ ವಿಚಾರ ಮತ್ತು ಸಂಸ್ಕಾರ ಇವುಗಳ ಜೊತೆಗೆ ಸಾವಿರಾರು ವರ್ಷಗಳಿಂದ ಜೋಡಣೆಯಾಗಿದೆಯೋ ಅದನ್ನು ನಾಶ ಮಾಡುವ ಉದ್ದೇಶ ಈ ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟದ್ದಾಗಿದೆ. ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟದವರು ಸನಾತನ ಸಂಸ್ಕಾರ ಮತ್ತು ಸಂಪ್ರದಾಯವನ್ನು ನಾಶ ಮಾಡುವ ಸಂಕಲ್ಪ ಮಾಡಿ ಬಂದಿದ್ದಾರೆ. ಯಾವ ಸನಾತನ ಧರ್ಮ ಮ. ಗಾಂಧಿ ಇವರು ಜೀವನದ ಕೊನೆಯವರೆಗೆ ನಂಬಿದರು, ಯಾವ ಸನಾತನದಿಂದ ಗಾಂಧೀಜಿಯವರು ಅಸ್ಪೃಶ್ಯತೆಯ ವಿರುದ್ಧ ಪ್ರತಿಭಟನೆ ನಡೆಸಲು ಪ್ರೇರಣೆ ನೀಡಿತು, ಅದೇ ಸನಾತನ ಸಂಪ್ರದಾಯವನ್ನು ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟ ನಾಶ ಮಾಡುವುದನ್ನು ನೋಡುತ್ತಿದೆ.

೨. ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟದ ಜನರು ಸ್ವಾಮಿ ವಿವೇಕಾನಂದ ಮತ್ತು ಲೋಕಮಾನ್ಯ ತಿಲಕ್ ಇವರಿಗೆ ಯಾವ ಸನಾತನ ಧರ್ಮದಿಂದ ಪ್ರೇರಣೆ ದೊರೆಯಿತು, ಅದನ್ನು ನಾಶ ಮಾಡುವುದನ್ನು ನೋಡುತ್ತಿದೆ.

೩. ಇಂದು ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟದಲ್ಲಿನ ಜನರು ಬಹಿರಂಗವಾಗಿ ಮಾತನಾಡಲು ಆರಂಭಿಸಿದ್ದಾರೆ. ನಾಳೆ ಅವರು ನಮ್ಮ ಮೇಲಿನ ದಾಳಿ ಇನ್ನೂ ಹೆಚ್ಚಿಸುವರು. ದೇಶದ ಮೂಲೆ ಮೂಲೆಗಳಲ್ಲಿರುವ ಪ್ರತಿಯೊಬ್ಬ ಸನಾತನಿಯು ಮತ್ತು ಈ ದೇಶವನ್ನು ಪ್ರೀತಿಸುವವರು ಜಾಗರೂಕವಾಗಿರುವುದು ಅವಶ್ಯಕವಾಗಿದೆ.

೪. ಯಾವ ಸನಾತನದಿಂದ ಪ್ರೇರಣೆ ಪಡೆದು ದೇವಿ ಅಹಿಲ್ಯ ಬಾಯಿ ಹೊಳ್ಕರ್ ಇವರು ದೇಶಾದ್ಯಂತ ಸಾಮಾಜಿಕ ಕಾರ್ಯ ಮಾಡಿದರು, ದೇಶದ ಶ್ರದ್ಧಾಸ್ಥಾನಗಳ ರಕ್ಷಣೆ ಮಾಡಿದರು, ಆ ಸನಾತನ ಪರಂಪರೆಯನ್ನು ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟ ನಾಶ ಮಾಡುವ ಸಂಕಲ್ಪ ಮಾಡಿದೆ.

೫. ಸನಾತನದ ಶಕ್ತಿಯಿಂದಾಗಿ ಝಾಂನ್ಸಿ ರಾಣಿ ಲಕ್ಷ್ಮೀಬಾಯಿ ಇವರು ಬ್ರಿಟಿಷರಿಗೆ, ‘ಮೇರಿ ಝಾನ್ಸಿ ನಹಿ ದುಂಗಿ !’ ಎಂದು ಹೇಳಿದ್ದರು.

೬. ಜೀವನದುದ್ದಕ್ಕೂ ಭಗವಂತ ಶ್ರೀರಾಮನು ಪ್ರೇರಣೆ ಪಡೆದಿದ್ದ, ಆ ಮ. ಗಾಂಧಿ ಕೊನೆಯ ಶಬ್ದ ‘ರಾಮ್’ ಎಂದು ಉಚ್ಚರಿಸಿದ್ದರು, ಅಂತಹ ಸನಾತನ ಪರಂಪರೆಯನ್ನು ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟ ನಾಶಪಡಿಸಲು ಇಚ್ಚಿಸುತ್ತಿದೆ.

೭ ಸ್ವಾತಂತ್ರ್ಯದ ಆಂದೋಲನದಲ್ಲಿ ಗಲ್ಲಿಗೇರಿರುವ ವೀರರು ‘ಮುಂದಿನ ಜನ್ಮದಲ್ಲಿ ಭಾರತ ಮಾತೆಯ ಉದರದಲ್ಲಿ ಜನಿಸುವೆವು’ ಎಂದು ಇಚ್ಛೆ ವ್ಯಕ್ತಪಡಿಸಿದ್ದರು. ಯಾವ ಸನಾತನ ಸಂಸ್ಕೃತಿ ಸಂತ ರವಿದಾಸ ಇವರು ಪ್ರತಿ ಬಿಂಬಿಸಿದರು, ಯಾವ ಸನಾತನ ಸಂಸ್ಕೃತಿ ಮಾತೆ ಶಬರಿಯ ಪರಿಚಯವಾಗಿತ್ತು, ಯಾವ ಸನಾತನ ಸಂಸ್ಕೃತಿ ಮಹರ್ಷಿ ವಾಲ್ಮೀಕಿ ಅವರ ಆಧಾರವಾಗಿತ್ತು, ಯಾವ ಸನಾತನ ಸಾವಿರಾರು ವರ್ಷ ಭಾರತವನ್ನು ಒಗ್ಗೂಡಿಸಿದೆ ಈ ಸನಾತನವನ್ನು ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟ ಛಿದ್ರ ಗೊಳಿಸಲು ಇಚ್ಚಿಸುತ್ತಿದೆ.