ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದಿಂದ ಛಾಯಾಚಿತ್ರ ಪ್ರಸಾರ!
ಅಯೋಧ್ಯ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಶ್ರೀರಾಮ ಜನ್ಮ ಭೂಮಿಯ ನ್ಯಾಸದ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯರವರು ‘ಎಕ್ಸ್ ‘ನಲ್ಲಿ (ಹಿಂದಿನ ಟ್ವೀಟ್) ಟ್ಟೀಟ್ ಮಾಡಿದ್ದಾರೆ. ಇದರಲ್ಲಿ ದೇವಾಲಯದ ನಿರ್ಮಾಣ ಕಾರ್ಯ ಮಾಡುವ ಸಂದರ್ಭದಲ್ಲಿ ನಡೆಸಿದ ಉತ್ಖನನದಲ್ಲಿ ಪ್ರಾಚೀನ ಮಂದಿರದ ಅವಶೇಷಗಳು ಸಿಕ್ಕಿವೆ. ಈ ಅವಶೇಷಗಳ ಛಾಯಾಚಿತ್ರವನ್ನು ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅನೇಕ ದೇವತೆಗಳ ವಿಗ್ರಹಗಳು ಮತ್ತು ಕಂಬಗಳು ಕಂಡುಬಂದಿವೆ. ಈ ವಿಷಯದ ಬಗ್ಗೆ ಇದುವರೆಗೂ ಹೆಚ್ಚಿನ ಮಾಹಿತಿಯನ್ನು ಕೊಟ್ಟಿಲ್ಲ ಶ್ರೀರಾಮ ಮಂದಿರ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಉತ್ಖನನ ದಲ್ಲಿ ಸಿಕ್ಕಿರುವ ಅವಶೇಷಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಹೇಳಿದರು.
श्री रामजन्मभूमि पर खुदाई में मिले प्राचीन मंदिर के अवशेष। इसमें अनेकों मूर्तियाँ और स्तंभ शामिल हैं। pic.twitter.com/eCBPOtqE1W
— Champat Rai (@ChampatRaiVHP) September 12, 2023