ಹಿಂದೂ ಜನಜಾಗೃತಿ ಸಮಿತಿಯು ‘ಎಕ್ಸ್'(ಹಿಂದಿನ ಟ್ವೀಟರ್)ನಿಂದ ವಿರೋಧಿಸಿತ್ತು !
ಮುಂಬಯಿ – ಪಿವಿಸಿ ಪೈಪ್ ಅನ್ನು ಉತ್ಪಾದಿಸುವ “ಫಿನೋಲೆಕ್ಸ್” ಕಂಪನಿಯು ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಒಂದು ಜಾಹಿರಾತನ್ನು ಅದರ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿತು. ಅದರಲ್ಲಿ ಭಗವಾನ್ ಶ್ರೀಕೃಷ್ಣನ ಕೈಯಲ್ಲಿ ಕೊಳಲಿನ ಬದಲು ಪಿವಿಸಿ ಪೈಪ್ ತೋರಿಸಲಾಗಿತ್ತು. ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ.
This is most shameful @FinolexCables ! The Bansuri is very much a part of Bhagwan Shri Krishna and to replace it with a plastic pipe is nothing short of denigration.
This has hurt the sentiments of Shri Krishna’s devotees!Immediately withdraw this ‘greeting’ from all… pic.twitter.com/uuLltozAYd
— HinduJagrutiOrg (@HinduJagrutiOrg) September 8, 2023
ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗೆ ನೋವನ್ನು ಉಂಟುಮಾಡುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ ! |
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಇದರ ವಿರುದ್ಧ ಟ್ವೀಟ್ ಮಾಡಿ ಈ ಜಾಹಿರಾತನ್ನು ಹಿಂಪಡೆಯುವಂತೆ ಆಗ್ರಹಿಸಿತ್ತು. ಆನಂತರ ಇದನ್ನು ಸಾವಿರಾರು ಧರ್ಮಾಭಿಮಾನಿಗಳು ವಿರೋಧಿಸಿದ ನಂತರ ಕೆಲವೇ ಗಂಟೆಗಳಲ್ಲಿ ಫೀನೋಲೆಕ್ಸ್ ಕಂಪನಿ ಅದರ ಫೇಸ್ ಬುಕ್ ಖಾತೆಯಿಂದ ಜಾಹಿರಾತನ್ನು ತೆಗೆದುಹಾಕಿದೆ. ಆದರೆ ಈ ಕಂಪನಿಯಿದ ಯಾವುದೇ ಅಧೀಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.