ಭಾರತೀಯ ವಂಶದವನೆಂದು ನನಗೆ ಹೆಮ್ಮೆ ! – ಪ್ರಧಾನಿ ರಿಶಿ ಸುನಕ್

ಬ್ರಿಟನ್ ನ ಪ್ರಧಾನಿ ರಿಷಿ ಸುನಕ್ ರವರು ಪತ್ನಿ ಸಹಿತ ಅಕ್ಷರಧಾಮ ಮಂದಿರಕ್ಕೆ ಹೋಗಿ ದರ್ಶನ ಪಡೆದರು !

ಬ್ರಿಟನ್ ನ ಪ್ರಧಾನಿ ರಿಶಿ ಸುನಕ್ ಅವರ ಪತ್ನಿ ಅಕ್ಷತಾ

ನವ ದೆಹಲಿ – ‘ಜಿ-೨೦’ ಶೃಗಸಭೆಗಾಗಿ ಭಾರತಕ್ಕೆ ಬಂದಿರುವ ಬ್ರಿಟನ್ ನ ಪ್ರಧಾನಿ ರಿಶಿ ಸುನಕ್ ಅವರ ಪತ್ನಿ ಅಕ್ಷತಾ ಜೊತೆ ಇಲ್ಲಿಯ ಅಕ್ಷರಧಾಮ ಮಂದಿರಕ್ಕೆ ಹೋಗಿ ದರ್ಶನ ಪಡೆದು ಪೂಜೆ ಮಾಡಿದರು. ಸುನಕರವರು ಭೂಮಿಗೆ ತಲೆಬಾಗಿ ನಮಸ್ಕಾರ ಮಾಡಿ ಆರತಿಯನ್ನೂ ಮಾಡಿದರು. ಬೆಳಗ್ಗೆ ೧೦-೩೦ ಕ್ಕೆ ಇಲ್ಲಿಗೆ ಬಂದಿದ್ದರು. ಇಲ್ಲಿ ೪೫ ನಿಮಿಷಗಳ ಕಾಲ ಇದ್ದರು. ದೇವಸ್ಥಾನದಲ್ಲಿ ದರ್ಶನ ಪಡೆದ ನಂತರ ರಿಶಿ ಸುನಕ್ ಟ್ಟೀಟ್ ಮಾಡಿ, ನನಗೆ ನಾನು ಭಾರತೀಯ ವಂಶದವನು ಮತ್ತು ಭಾರತದೊಂದಿಗೆ ವಿಶೇಷ ಸಂಬಂಧ ಇರುವ ಬಗ್ಗೆ ಹೆಮ್ಮೆ ಇದೆ. ಒಬ್ಬ ಹೆಮ್ಮೆ ಪಡುವ ಹಿಂದೂ ಅಂದರೆ ಭಾರತ ಮತ್ತು ಭಾರತದಲ್ಲಿಯ ಜನರೊಡನೆ ನನಗೆ ವಿಶೇಷ ಸಂಬಂಧ ಯಾವಾಗಲೂ ಇರಲಿದೆ.

ಈ ಹಿಂದೆ ಸುನಕ್ ರವರು, ನಾನು ಹಿಂದೂ ಆಗಿರುವುದರ ಬಗ್ಗೆ ಹೆಮ್ಮೆ ಇದೆ, ನನ್ನನ್ನು ಸಾಕಿ ಬೆಳಸಿದ ರೀತಿ ಹೀಗೆ ಇದೆ. ನಾನು ರಕ್ಷಾಬಂಧನವನ್ನು ಆಚರಿಸಿದೆ. ಸಮಯದ ಅಭಾವದಿಂದ ಜನ್ಮಾಷ್ಟಮಿ ಆಚರಿಸಲು ಆಗಲಿಲ್ಲ; ಆದರೆ ದೇವಸ್ತಾನಕ್ಕೆ ಹೋಗಿ ಅದರ ಪರಿಹಾರ ಸಿಗಲಿದೆ. ಎಂಬ ಆಸೆಯಿದೆ. ಈ ಭರವಸೆಯೇ ನಮಗೆ ಶಕ್ತಿ ನೀಡುತ್ತದೆ ಎಂದು ಹೇಳಿದರು.