‘ಘೋಷಣಾ ಪತ್ರದಲ್ಲಿ ಅಭಿಮಾನ ಪಡುವ ಹಾಗೆ ಏನೂ ಇಲ್ಲವಂತೆ !’ – ಉಕ್ರೇನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಓಲೆಗ ನಿಕೋಲೆಂಕೊ

ಉಕ್ರೇನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಓಲೆಗ ನಿಕೋಲೆಂಕೊ

ಕಿವ (ಉಕ್ರೇನ್) – ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಲಾದ ‘ಜಿ-20’ ಶೃಂಗಸಭೆಯಲ್ಲಿ ಭಾರತ ಅತ್ಯಂತ ಮುತ್ಸದ್ದಿತನದಿಂದ ಸಂಯುಕ್ತ ಘೋಷಣಾ ಪತ್ರ ಪ್ರಸಾರ ಮಾಡಿದೆ. ಇದರಲ್ಲಿ ಉಕ್ರೇನ್ ಯುದ್ಧದ ಉಲ್ಲೇಖ ಮಾಡುವಾಗ ರಷ್ಯಾ ಹೆಸರು ಉಲ್ಲೇಖಿಸಿಲ್ಲ. ಇದಕ್ಕೆ ‘ಜಿ-20’ ಯ ಎಲ್ಲಾ ದೇಶಗಳು ಮಾನ್ಯತೆ ನೀಡಿದೆ. ಈಗ ಇದನ್ನು ಉಕ್ರೇನ್ ಟೀಕಿಸಿದೆ. ಈ ಶೃಂಗಸಭೆಗಾಗಿ ಭಾರತ ಉಕ್ರೇನನ್ನು ಆಮಂತ್ರಿಸಲಿಲ್ಲ. ಆದ್ದರಿಂದ ಕೂಡ ಉಕ್ರೇನ್ ಅಸಮಾಧಾನಗೊಂಡಿದೆ.

ಉಕ್ರೇನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಓಲೆಗ ನಿಕೋಲೆಂಕೊ ಇವರು ಫೇಸ್ಬುಕ್ ನಲ್ಲಿ, ‘ಘೋಷಣಾ ಪತ್ರದ ಬಗ್ಗೆ ಅಭಿಮಾನ ಪಡುವಂತಹದು ಏನೂ ಇಲ್ಲ. ಉಕ್ರೇನ್ ಏನಾದರೂ ಈ ಶೃಂಗಸಭೆಗೆ ಉಪಸ್ಥಿತವಾಗಿದ್ದರೆ ಆಗ ಈ ಶೃಂಗಸಭೆಯ ಸದಸ್ಯರಿಗೆ ಅದರ ಪರಿಸ್ಥಿತಿ ತಿಳಿಯುತ್ತಿತ್ತು.’ ಎಂದು ಬರೆದಿದ್ದಾರೆ. ಓಲೆಗ ಇವರು ಈ ಸಮಯದಲ್ಲಿ ಶೃಂಗಸಭೆಯಲ್ಲಿ ಉಕ್ರೇನ್ ಪಕ್ಷ ಮಂಡಿಸುವ ದೇಶಗಳ ಕುರಿತು ಆಭಾರ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ ಜೊತೆಗೆ ಯುರೋಪಿನಲ್ಲಿ ಕೆಲವು ದೇಶಗಳಿಗೆ ಘೋಷಣಾ ಪತ್ರದಲ್ಲಿನ ಉಕ್ರೇನ್ ಯುದ್ಧದ ಸಂದರ್ಭದಲ್ಲಿನ ಭಾಷೆಯ ಬಗ್ಗೆ ಆಕ್ಷೇಪ ಇತ್ತು.

ಸಂಪಾದಕರ ನಿಲುವು

* ಉಕ್ರೇನ್ ಕಾಶ್ಮೀರ ಸಮಸ್ಯೆಯ ಬಗ್ಗೆ ಯಾವಾಗಲೂ ಭಾರತದ ವಿರುದ್ಧ ಪಾಕಿಸ್ತಾನದ ಪಕ್ಷ ವಹಿಸಿ ಸಹಾಯ ಮಾಡಿದೆ. ಇದರ ಬಗ್ಗೆ ಭಾರತ ಎಂದು ಏನೋ ಹೇಳಿಲ್ಲ, ಇದನ್ನು ಉಕ್ರೇನ್ ಯೋಚನೆ ಮಾಡಬೇಕು ! ಯಾವಾಗ ಸ್ವಂತ ಮನೆ ಸುಡುತ್ತದೆ ಆಗ ಇನ್ನೊಬ್ಬರ ದುಃಖ ಗಮನಕ್ಕೆ ಬರುತ್ತದೆ; ಆದರೆ ಉಕ್ರೇನ್ ಇನ್ನೂ ಕಾಶ್ಮೀರ ಸಮಸ್ಯೆಯ ಬಗ್ಗೆ ಭಾರತದ ಪರ ವಹಿಸಲಿಲ್ಲ, ಇದನ್ನು ತಿಳಿದುಕೊಳ್ಳಿ !