ಭಾಮೇಶ್ವರಿ ದುರ್ಗಾ ದೇವಸ್ಥಾನ ಧ್ವಂಸ !

ಕೆನಡಾದಲ್ಲಿ ಖಲಿಸ್ತಾನಿಯಿಂದ ದೇವಸ್ಥಾನದ ಮೇಲೆ ಮತ್ತೆ ದಾಳಿ !

ಒಟಾವಾ (ಕೆನಡಾ) – ಕೆನಡಾದ ಬ್ರಿಟಿಷ್ ಕೊಲಂಬಿಯಾದ ಪ್ರದೇಶದಲ್ಲಿರುವ ಭಾಮೇಶ್ವರಿ ದುರ್ಗಾ ದೇವಾಲಯವನ್ನು ಖಾಲಿಸ್ತಾನಿಗಳು ಧ್ವಂಸಗೊಳಿಸುವುದರ ಜೊತೆಗೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಯಿತು. ದೇವಾಲಯದ ಗೋಡೆಗಳ ಮೇಲೆ ‘ಪ್ರಧಾನಿ ಮೋದಿ ಭಯೋತ್ಪಾದಕರಾಗಿದ್ದಾರೆ’, ‘ಪಂಜಾಬ್ ಭಾರತದ ಭಾಗವಲ್ಲ’ ಎಂಬ ಘೋಷಣೆಗಳನ್ನು ಬರೆಯಲಾಯಿತು. ಮುಂಜಾನೆ ಈ ಘಟನೆ ನಡೆದಿದೆ. ದೇವಸ್ಥಾನ ಸಮಿತಿಯಿಂದ ಈ ಘೋಷಣೆಗಳನ್ನು ಅಳಿಸಿ ಹಾಕಲಾಯಿತು. ಇದುವರೆಗೆ ಕೆನಡಾದಲ್ಲಿ ಖಲಿಸ್ತಾನಿಗಳು ದೇವಾಲಯದ ಮೇಲೆ ದಾಳಿ ನಡೆಸಿದ ಈ ವರ್ಷದ ನಾಲ್ಕನೇ ಘಟನೆಯಾಗಿದೆ.

ಸಂಪಾದಕೀಯ ನಿಲುವು

ಹಿಂದೂ ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆದಾಗ ಕೆನಡಾ ಸರಕಾರ ಕಠಿಣ ಕ್ರಮ ಕೈಗೊಳ್ಳುವುದನ್ನು ತಡೆಯುತ್ತಿರುವುದನ್ನು ಜಗತ್ತು ನೋಡುತ್ತಿದೆ. ಕೆನಡಾದ ಮೇಲೆ ಕ್ರಮ ಕೈಗೊಳ್ಳುವಂತೆ ಭಾರತ ಒತ್ತಡ ಹೇರಬೇಕು !