ಲಂಡನ್ (ಬ್ರಿಟನ್) – ಬ್ರಿಟನ್‌ನ ಎರಡನೇ ಅತಿದೊಡ್ಡ ನಗರವಾದ ಬರ್ಮಿಂಗ್ಹ್ಯಾಮ್ ಅನ್ನು ದಿವಾಳಿ ಎಂದು ಘೋಷಿಸಲಾಗಿದೆ. ನಗರದ ಮಹಾನಗರ ಪಾಲಿಕೆ ದಿವಾಳಿಯಾಗಿರುವುದು ಒಪ್ಪಿಕೊಂಡಿದೆ. ಸೆಕ್ಷನ್ 114ರ ಅಡಿಯಲ್ಲಿ ನಗರಸಭೆ ನೋಟಿಸ್ ಜಾರಿ ಮಾಡಿದೆ. ಇದರ ಪ್ರಕಾರ, ಈಗ ನಗರದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಖರ್ಚು ಮಾಡಲಾಗುವುದು ಮತ್ತು ಇತರ ವೆಚ್ಚಗಳನ್ನು ತಕ್ಷಣವೇ ನಿಲ್ಲಿಸಲಾಗಿದೆ. ಬರ್ಮಿಂಗ್ಹ್ಯಾಮ್ ಪುರಸಭೆಯು 10 ಲಕ್ಷ ಜನರಿಗಿಂತಲೂ ಹೆಚ್ಚಿನ ಜರಿಗೆ ಸೇವೆ ಸಲ್ಲಿಸುತ್ತದೆ. ಬಜೆಟ್ ನಿಬಂಧನೆಗಳನ್ನು ಮೀರಿದ ವೆಚ್ಚವು ದಿವಾಳಿತನಕ್ಕೆ ಕಾರಣವಾಗಿದೆ.
ದಿವಾಳಿ ಘೋಷಿಸಿಕೊಂಡ ಬರ್ಮಿಂಗ್ಹ್ಯಾಂ #Birmingham https://t.co/jknF5RIUit via @prajavani
— Prajavani (@prajavani) September 6, 2023
ಸಂಪಾದಕೀಯ ನಿಲುವು200 ವರ್ಷಗಳ ಕಾಲ ಭಾರತವನ್ನು ಲೂಟಿ ಮಾಡಿದ ಬ್ರಿಟಿಷರ ನಗರವೊಂದರ ಪರಿಸ್ಥಿತಿ ಹೀಗಾಗುವುದು, ಇದು ಹಣೆಬರಹ, ಎಂದು ಯಾರಿಗೆ ಅನಿಸಿದರೆ ಅದರಲ್ಲಿ ತಪ್ಪೇನು ಇಲ್ಲ ? |