ಒಟಾವಾ (ಕೆನಡಾ) – ಬ್ರಿಟಿಷ್ ಕೊಲಂಬಿಯಾ ರಾಜ್ಯದ ಸರೆ ನಗರದ ತಾಮನವೀಸ ಮಾಧ್ಯಮಿಕ ಶಾಲೆಯಲ್ಲಿ ಖಲಿಸ್ತಾನಿಗಳು ಸೆಪ್ಟೆಂಬರ್ 10 ರಂದು ಸ್ವತಂತ್ರ ಖಲಿಸ್ತಾನಕ್ಕಾಗಿ ಜನಾಭಿಪ್ರಾಯ ಪಡೆಯುವ ನಿಯೋಜನೆ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ಆಡಳಿತ ಮಂಡಳಿ ಹಿಂಪಡೆದಿರುವುದರಿಂದ ಜನಾಭಿಪ್ರಾಯ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
1. ಈ ವಿಷಯದಲ್ಲಿ ‘ಸರೆ ಡಿಸ್ಟ್ರಿಕ್ಟ ಸ್ಕೂಲ್ ಬೋರ್ಡ್’ ಮಾಹಿತಿ ನೀಡುವಾಗ, ಯಾವುದಾದರೂ ಕಾರ್ಯಕ್ರಮವನ್ನು ಆಯೋಜಿಸಲು ಶಾಲೆಯ ಜಾಗವನ್ನು ಬಾಡಿಗೆಗೆ ನೀಡುವಾಗ ನಮ್ಮದು ಕೆಲವು ನಿಯಮಗಳಿವೆ. ಈ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ಈ ಕಾರ್ಯಕ್ರಮಕ್ಕೆ ನೀಡಿರುವ ಅನುಮತಿಯನ್ನು ನಿರಾಕರಿಸಿದ್ದೇವೆ. (ಅಂದರೆ ನಿಯಮಗಳನ್ನು ಅನುಸರಿಸಿದ್ದರೆ, ಅನುಮತಿ ನೀಡಲಾಗುತ್ತಿತ್ತು ಎಂದಾಯಿತು. ಅಂತಹ ಶಾಲೆಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ! – ಸಂಪಾದಕರು)
2. ಜನಾಭಿಪ್ರಾಯವನ್ನು ಸಂಗ್ರಹಿಸಲು ಕಾರ್ಯಕ್ರಮವನ್ನು ಆಯೋಜಿಸಿದ ನಂತರ, ಆ ವಿಷಯದ ಬಗ್ಗೆ ಕರಪತ್ರಗಳನ್ನು ಪ್ರಸಾರ ಮಾಡಲಾಯಿತು. ಈ ಕರಪತ್ರಗಳಲ್ಲಿ ಸಿಖ್ ಸಮುದಾಯದವರು ತಮ್ಮೊಂದಿಗೆ ಇಟ್ಟುಕೊಳ್ಳುವ ಕೃಪಾಣದೊಂದಿಗೆ (ಸಣ್ಣ ಚಾಕು) ಜೊತೆಗೆ ಎಕೆ-47 ರೈಫಲ್ ನ ಛಾಯಾಚಿತ್ರವೂ ಇತ್ತು. ಅದು ಆಕ್ಷೇಪಾರ್ಹವಾಗಿದ್ದರಿಂದ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ.
3. ‘ಫ್ರೆಂಡ್ಸ್ ಆಫ್ ಕೆನಡಾ ಅಂಡ್ ಇಂಡಿಯಾ’ ಪಕ್ಷದ ಅಧ್ಯಕ್ಷ ಮಣಿಂದರ್ ಸಿಂಗ್ ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಸರೆ ನಗರದ ಮೇಯರ್ ಬ್ರಂಡಾ ಲಾಕ್ ಕೂಡ ಶಾಲೆಯ ಮೈದಾನದಲ್ಲಿ ಜನಾಭಿಪ್ರಾಯ ಸಂಗ್ರಹಣೆಗೆ ಅಸಮ್ಮತಿ ವ್ಯಕ್ತಪಡಿಸಿದ್ದರು. ಅವರು, ಸರೆ ನಗರವು ಖಲಿಸ್ತಾನಿ ಚಟುವಟಿಕೆಗಳನ್ನು ಅಥವಾ ಅವರು ತೆಗೆದುಕೊಳ್ಳುತ್ತಿದ್ದ ಜನಾಭಿಪ್ರಾಯವನ್ನು ಬೆಂಬಲಿಸುವುದಿಲ್ಲ. ಎಂದು ಅವರು ಹೇಳಿದರು. ಅವರು ಕರಪತ್ರದಲ್ಲಿ ಬಳಸಿರುವ ಎಕೆ-47 ರೈಫಲ್ ನ ಚಿತ್ರದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು.
Another slap on the face off Khalistani Terrorists. @SarahLGates1 @TheAusToday @austhindu #Khalistan#KhalistanFreedomRally #KhalistanReferendum #KhalistaniTerrorist pic.twitter.com/WPPcVyQFGY
— Adv.Vineet Jindal (@vineetJindal19) September 4, 2023
ಸಂಪಾದಕೀಯ ನಿಲಿವುಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕರ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅಲ್ಲಿನ ಶಾಲೆಯಲ್ಲಿ ಖಲಿಸ್ತಾನವಾದಿಗಳು ಜನಾಭಿಪ್ರಾಯ ಸಂಗ್ರಹಿಸಲು ಧೈರ್ಯ ಮಾಡುತ್ತಾರೆ ಮತ್ತು ಸರಕಾರ ಈ ಬಗ್ಗೆ ಹಸ್ತಕ್ಷೇಪ ಮಾಡದಿರುವುದು ಖೇದಕರವಾಗಿದೆ ! ಭಾರತ ಸರಕಾರ ಈ ವಿಷಯದ ಬಗ್ಗೆ ಗಮನ ಹರಿಸುವುದೇ ? |