ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅನುಮತಿ

ಕಾಂಗ್ರೆಸ್ ಮತ್ತು ಎಂ.ಐ.ಎಂ. ನಿಂದ ವಿರೋಧ

ಹುಬ್ಬಳ್ಳಿ – ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಈ ಹಿಂದೆ ಇದನ್ನು ಕಾಂಗ್ರೆಸ್ ಸರಕಾರ ವಿರೋಧಿಸಿತ್ತು. 1994 ರಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಷ್ಟ್ರಪ್ರೇಮಿಗಳು ಈ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಅವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಇದರಲ್ಲಿ 5 ದೇಶಭಕ್ತರು ಸಾವನ್ನಪಪ್ಇದ್ದರು. ಪ್ರಸ್ತುತ ಈ ನಗರಸಭೆಯಲ್ಲಿ ಭಾಜಪ ಅಧಿಕಾರದಲ್ಲಿದೆ. ಮಹಾನಗರಪಾಲಿಕೆ ನೀಡಿದ ಅನುಮತಿಗೆ ಕಾಂಗ್ರೆಸ್ ಮತ್ತು ಎಂ.ಐ.ಎಂ. ಪಕ್ಷಗಳ ನಗರಸೇವಕರು ವಿರೋಧ ವ್ಯಕ್ತಪಡಿಸಿದ್ದಾರೆ.

(ಸೌಜನ್ಯ – Zee Kannada News)

ಸಂಪಾದಕೀಯ ನಿಲುವು

ಭಾರತ ಜಾತ್ಯತೀತ ರಾಷ್ಟ್ರವಾಗಿರುವಾಗ, ತಮ್ಮನ್ನು ತಾವು ಸೆಕ್ಯುಲರ್ ಎಂದು ಕರೆಸಿಕೊಳ್ಳುವ ರಾಜಕೀಯ ಪಕ್ಷಗಳು ಈದ್ಗಾ ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಿಸುವುದನ್ನು ವಿರೋಧಿಸುತ್ತವೆ ಎಂಬುದನ್ನು ಗಮನಿಸಿರಿ !