ಆಸಕ್ತಿಯಿಂದಾಗಿ ನಿಜವಾದ ಜ್ಞಾನ ಸಿಗುವುದಿಲ್ಲ !

ಸ್ವಾಮಿ ಅಖಂಡಾನಂದಜಿ

ಯಾರಲ್ಲಿ ಆಸಕ್ತಿ ಅಥವಾ ದ್ವೇಷ ಇರುತ್ತದೆಯೋ ಅವನಿಂದ ಸತ್ಯವನ್ನು ನಿರೂಪಿಸಲು ಆಗುವುದಿಲ್ಲ ಏಕೆಂದರೆ ಆ ಆಸಕ್ತಿಯು ಅವನ ಜ್ಞಾನದೊಂದಿಗೆ ಹಾಸು ಹೊಕ್ಕಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಅವನು ತನ್ನ ಸ್ವಂತದ ವಿಷಯದಲ್ಲಿ ಅಥವಾ ಇತರರ ವಿಷಯದಲ್ಲಿ ಯೋಗ್ಯ ನಿರ್ಣಯ ತೆಗೆದುಕೊಳ್ಳಲಾರನು. ಆಸಕ್ತಿಯು ಜ್ಞಾನವನ್ನು ಭ್ರಷ್ಟಗೊಳಿಸಿ ಬಿಡುತ್ತದೆ. ಸತ್ಯದ ಜ್ಞಾನವನ್ನು ಭ್ರಷ್ಟಗೊಳಿಸುವಂತಹದ್ದು ಏನಾದರೂ ಇದೆಯೆಂದಾದರೆ ಅದುವೇ ಆಸಕ್ತಿ.

– ಸ್ವಾಮಿ ಅಖಂಡಾನಂದಜಿ