ಪುರುಷರ ತಲೆಗೂದಲುಗಳಲ್ಲಿ ಸುಳಿಗಳಿರುವುದು ಮತ್ತು ಸ್ತ್ರೀಯರ ತಲೆಗೂದಲುಗಳಲ್ಲಿ ಸುಳಿಗಳಿಲ್ಲದಿರುವುದು, ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ ಮತ್ತು ಶ್ರೀ. ರಾಮ ಹೊನಪರಿಗೆ ದೊರಕಿದ ಸೂಕ್ಷ್ಮ ಜ್ಞಾನದ ಪ್ರಕ್ರಿಯೆ

ಶ್ರೀ. ರಾಮ ಹೊನಪ

೧. ಪುರುಷರ ತಲೆಗೂದಲುಗಳಲ್ಲಿ ಸುಳಿಗಳು ಉಂಟಾಗುವುದರ ಹಿಂದಿನ ಅಧ್ಯಾತ್ಮಶಾಸ್ತ್ರ

‘ಪುರುಷರ ತಲೆಗೂದಲುಗಳಲ್ಲಿ ಸುಳಿಗಳು ಉಂಟಾಗುವ ಮೊದಲು ಹಂತಹಂತವಾಗಿ ಘಟಿಸುವ ಸೂಕ್ಷ್ಮ ಪ್ರಕ್ರಿಯೆಯನ್ನು ಮುಂದೆ ಕೊಡಲಾಗಿದೆ.

೧ ಅ. ಗರ್ಭದ ಚಿತ್ತವು ಜಾಗೃತಾವಸ್ಥೆಗೆ ಬಂದಾಗ ಅದರಲ್ಲಿದ್ದ ಹಿಂದಿನ ಜನ್ಮಗಳ ಸಂಸ್ಕಾರಗಳಿಂದ ‘ನಾನು ಎಲ್ಲಿದ್ದೇನೆ ? ಇಲ್ಲಿಂದ ಹೊರಗೆ ಹೇಗೆ ಹೋಗುವುದು ?’, ಈ ಸೂಕ್ಷ್ಮ ಸಂವೇದನೆಗಳು ಕಾರ್ಯ ಮಾಡತೊಡಗುತ್ತವೆ ಮತ್ತು ಅದಕ್ಕನುಸಾರ ಅದರಲ್ಲಿನ ಶಕ್ತಿಯಿಂದ ಗರ್ಭದ ಮಸ್ತಕದ (ತಲೆಯ) ನಿರ್ಮಿತಿಯ ಕಾರ್ಯ ಆರಂಭವಾಗುತ್ತದೆ : ಸ್ತ್ರೀಯ ಗರ್ಭಾಶಯದಲ್ಲಿ ಪುರುಷ-ಗರ್ಭದ ಬೆಳವಣಿಗೆ ಆಗಲು ಪ್ರಾರಂಭವಾಗುವಾಗ ಮೊದಲನೇ ತಿಂಗಳಲ್ಲಿ ಗರ್ಭದ ಚಿತ್ತವು ಸುಪ್ತ ಸ್ವರೂಪದಲ್ಲಿರುತ್ತದೆ. ಅನಂತರ ಅದು ಕ್ರಮೇಣ ಜಾಗೃತಾವಸ್ಥೆಗೆ ಬರತೊಡಗುತ್ತದೆ. ಗರ್ಭದ ಚಿತ್ತದ ಮೇಲೆ ಹಿಂದಿನ ಅನೇಕ ಜನ್ಮಗಳ ವಿವಿಧ ಸಂಸ್ಕಾರಗಳಿರುತ್ತವೆ. ಅದಕ್ಕನುಸಾರ ಅದರ ಚಿತ್ತ ದಲ್ಲಿ ಮುಂದಿನ ಸೂಕ್ಷ್ಮ ಸಂವೇದನೆಗಳು ಜಾಗೃತವಾಗುತ್ತವೆ, ‘ನಾನು ಎಲ್ಲಿದ್ದೇನೆ ? ಇಲ್ಲಿಂದ ಹೊರಗೆ ಹೇಗೆ ಹೋಗುವುದು ?’ ಚಿತ್ತದಲ್ಲಿನ ಸೂಕ್ಷ್ಮ ಸಂವೇದನಗಳಿಂದ ಗರ್ಭದಲ್ಲಿರುವ ಶಕ್ತಿ ಕಾರ್ಯನಿರತವಾಗುತ್ತದೆ. ಇದರ ಪರಿಣಾಮದಿಂದ ಗರ್ಭದಲ್ಲಿ ಇತರ ಅವಯವಗಳೊಂದಿಗೆ ಮಸ್ತಕ (ತಲೆ) ತಯಾರಾಗಲು ಪ್ರಾರಂಭವಾಗುತ್ತದೆ. ಮೊದಲು ಗರ್ಭದ ಅಂತರ್ಮನಸ್ಸು ಮತ್ತು ಅನಂತರ ಸ್ವಲ್ಪ ಸಮಯದ ನಂತರ ಬಾಹ್ಯಮನಸ್ಸು ಜಾಗೃತಾವಸ್ಥೆಗೆ ಬರುತ್ತದೆ.

೧ ಆ. ಗರ್ಭದಲ್ಲಿನ ಹೆಚ್ಚಿನ ಶಕ್ತಿಯು ಮೇಲಿನ ದಿಶೆಯಲ್ಲಿ ಪ್ರವಹಿಸಿ ಅದರಿಂದ ಅತ್ಯಂತ ಸೂಕ್ಷ್ಮ ‘ಮೆದುಳು’ ಮತ್ತು ‘ಮಸ್ತಕ’ದ ನಿರ್ಮಿತಿಯಾಗುತ್ತದೆ : ಗರ್ಭದ ಚಿತ್ತದಲ್ಲಿ ‘ನಾನು ಎಲ್ಲಿದ್ದೇನೆ ? ಇಲ್ಲಿಂದ ಹೊರಗೆ ಹೇಗೆ ಹೋಗುವುದು ?’, ಎಂಬ ಸೂಕ್ಷ್ಮ ಸಂವೇದನೆಗಳು ಹೆಚ್ಚು ತೀವ್ರವಾಗತೊಡಗುತ್ತವೆ, ಆಗ ಚಿತ್ತಕ್ಕೆ ಈ ಸೂಕ್ಷ್ಮ ಸಂವೇದನೆಗಳಿಗೆ ಯೋಗ್ಯ ಮಾರ್ಗವನ್ನು ತೋರಿಸುವ ಜೊತೆಗಾರನ, ಅಂದರೆ ಬುದ್ಧಿಯ ಆವಶ್ಯಕತೆಯ ಅರಿವಾಗುತ್ತದೆ. ಆಗ ಗರ್ಭದಲ್ಲಿನ ಹೆಚ್ಚಿನ ಶಕ್ತಿಯು ಮೇಲಿನ ದಿಶೆಯಲ್ಲಿ, ಅಂದರೆ ಊರ್ಧ್ವಗಾಮಿಯಾಗಿ ಪ್ರವಹಿಸುತ್ತದೆ. ಇದರಿಂದ ಅತ್ಯಂತ ಸೂಕ್ಷ್ಮವಾಗಿರುವ ಮೆದುಳು ಮತ್ತು ಮಸ್ತಕ ತಯಾರಾಗುತ್ತದೆ. ಶರೀರದಲ್ಲಿನ ಇತರ ಅವಯವಗಳ ತುಲನೆಯಲ್ಲಿ ‘ಮೆದುಳು’ ತಯಾರಾಗಲು ಗರ್ಭದಲ್ಲಿನ ಶಕ್ತಿಯು ದೊಡ್ಡ ಪ್ರಮಾಣದಲ್ಲಿ ವ್ಯಯವಾಗುತ್ತದೆ.

೧ ಇ. ಗರ್ಭದ ಮಸ್ತಕ ತಯಾರಾಗುವಾಗ ಶಕ್ತಿಯ ಸುಳಿಯಂತಹ ವೇಗ ಮತ್ತು ಅದರ ಸಾಮರ್ಥ್ಯ ಇವುಗಳಿಂದ ತಲೆಗೆ ಸಂಬಂಧಿಸಿದ ಕೋಶಗಳ ಮೇಲೆ ಪರಿಣಾಮವಾಗುವುದರಿಂದ ಅಲ್ಲಿ ಸುಳಿಗಳ ಆಕಾರ ತಯಾರಾಗುತ್ತದೆ : ಗರ್ಭದಲ್ಲಿನ ಶಕ್ತಿಯಿಂದ ಮಸ್ತಕವನ್ನು (ತಲೆಯನ್ನು) ತಯಾರಿಸುವ ಕಾರ್ಯ ಪೂರ್ಣವಾಗುತ್ತದೆ, ಆಗ ಆ ಶಕ್ತಿಯು ಇತರ ಅವಯವಗಳ ತಯಾರಿಗಾಗಿ ಮೇಲಿನಿಂದ ಕೆಳಗಿನ ದಿಶೆಯಲ್ಲಿ, ಅಂದರೆ ಅಧೋಗಾಮಿಯಾಗಿ ಪ್ರವಹಿಸುತ್ತದೆ. ಈ ಪ್ರಕ್ರಿಯೆ ಘಟಿಸುತ್ತಿರುವಾಗ ತಲೆಯಲ್ಲಿ ಶಕ್ತಿಯ ಸುಳಿಗಳಂತಹ ವೇಗ ಮತ್ತು ಸಾಮರ್ಥ್ಯ ಇವುಗಳ ಒಟ್ಟು ಪ್ರಭಾವ ಮಸ್ತಕಕ್ಕೆ ಸಂಬಂಧಿಸಿದ ಕೋಶಗಳ ಮೇಲೆ ಬೀಳುತ್ತದೆ. ಅದರ ಪರಿಣಾಮದಿಂದ ತಲೆಯ ಮೇಲೆ ಸುಳಿಗಳ ಆಕಾರ ತಯಾರಾಗುತ್ತದೆ.

೨. ಸ್ತ್ರೀಯರ ತಲೆಗೂದಲುಗಳಲ್ಲಿ ಸುಳಿಗಳು ಇಲ್ಲದಿರುವುದರ ಹಿಂದಿನ ಅಧ್ಯಾತ್ಮಶಾಸ್ತ್ರ : ಸ್ತ್ರೀ-ಗರ್ಭದ ಮಸ್ತಕದ ತಯಾರಿಗಾಗಿ ಘಟಿಸುವ ಸೂಕ್ಷ್ಮ ಪ್ರಕ್ರಿಯೆ ಮೇಲೆ ಕೊಟ್ಟಿರುವ ಪುರುಷ ಗರ್ಭದಂತೆಯೇ ಇರುತ್ತದೆ. ಯಾವಾಗ ಸ್ತ್ರೀ-ಗರ್ಭದಲ್ಲಿನ ಶಕ್ತಿಯ ಮಸ್ತಕ ತಯಾರಾಗುವ ಕಾರ್ಯ ಪೂರ್ಣವಾಗುತ್ತದೆಯೋ, ಆಗ ಅದು ಇತರ ಅವಯಗಳ ತಯಾರಿಗಾಗಿ ಮೇಲಿನಿಂದ ಕೆಳಗಿನ ದಿಶೆಯಲ್ಲಿ, ಅಂದರೆ ಅದು ಅಧೋಗಾಮಿ ಆಗುತ್ತದೆ. ಈ ಪ್ರಕ್ರಿಯೆ ಘಟಿಸುವಾಗ ಮಸ್ತಕದಲ್ಲಿ ಶಕ್ತಿಯ ಸುಳಿಯಂತೆ ವೇಗ ಇರುತ್ತದೆ; ಆದರೆ ಶಕ್ತಿಯ ವೇಗ ಮತ್ತು ಅದರ ಸಾಮರ್ಥ್ಯ ಪುರುಷ-ಗರ್ಭದ ತುಲನೆಯಲ್ಲಿ ಕಡಿಮೆ ಇರುತ್ತದೆ. ಆದ್ದರಿಂದ ಸ್ತ್ರೀಯ ಮಸ್ತಕವು ತಯಾರಾಗುವಾಗ ಅಲ್ಲಿನ ಕೋಶಗಳ ಮೇಲೆ ಶಕ್ತಿಯ ಪರಿಣಾಮ ಆಗದಿರುವುದರಿಂದ ಅವಳ ತಲೆಯ ಮೇಲೆ ಪುರುಷರಂತೆ ಸುಳಿಗಳು ತಯಾರಾಗುವುದಿಲ್ಲ.

೩. ಶ್ರೀ. ರಾಮ ಹೊನಪ ಇವರಿಗೆ ಲಭಿಸಿದ ಸೂಕ್ಷ್ಮ ಜ್ಞಾನದ ಪ್ರಕ್ರಿಯೆ

೨೪.೧೧.೨೦೨೧ ರಂದು ಬೆಳಗ್ಗೆ ಸ್ನಾನಕ್ಕೆ ಹೋಗುವ ಮೊದಲು ನನ್ನ ಮನಸ್ಸಿನಲ್ಲಿ ಮುಂದಿನ ಪ್ರಶ್ನೆ ಬಂದಿತು, ‘ಪರಾತ್ಪರ ಗುರು ಡಾ. ಆಠವಲೆಯವರು ಕೇಳಿದ ‘ಪುರುಷರ ತಲೆಯ ಮೇಲಿನ ಕೂದಲುಗಳಲ್ಲಿ ಸುಳಿಗಳು ಇರುವುದರ ಹಿಂದಿನ ಮತ್ತು ಸ್ತ್ರೀಯರ ತಲೆಗೂದಲುಗಳಲ್ಲಿ ಸುಳಿಗಳು ಇಲ್ಲದಿರುವುದರ ಹಿಂದಿನ ಅಧ್ಯಾತ್ಮಶಾಸ್ತ್ರ ಏನಿರಬಹುದು ?’ ಎಂಬ ವಿಚಾರ ಬಂದಿತು. ಸ್ನಾನವನ್ನು ಮಾಡುವಾಗ ನನಗೆ ಮೇಲಿನ ವಿಷಯದ ಸಂದರ್ಭದಲ್ಲಿನ ಸೂಕ್ಷ್ಮಜ್ಞಾನ ಪ್ರಾಪ್ತವಾಯಿತು ಮತ್ತು ಸ್ನಾನದ ನಂತರ ಮೇಲಿನ ಅಂಶಗಳನ್ನು ನಾನು ನೋಂದಣಿ ವಹಿಯಲ್ಲಿ ಬರೆದಿಟ್ಟೆನು.’

– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೯.೧೧.೨೦೨೧)