ಗಂಗಾ ಸ್ನಾನ, ಶ್ರೀ ಹರಿಯ ನಾಮಸ್ಮರಣೆಯು ಮನುಷ್ಯರನ್ನು ಪಾಪಮುಕ್ತಗೊಳಿಸುತ್ತದೆಯೇ?

|| ಶ್ರೀ ಕೃಷ್ಣಾಯ ನಮಃ||

ಪ್ರಶ್ನೆ : ’ಗಂಗಾ ನದಿಯಲ್ಲಿ ಸ್ನಾನವನ್ನು ಮಾಡುವುದರಿಂದ ಎಲ್ಲಾ ಪಾಪಗಳು ತೊಳೆದು ಹೋಗುತ್ತದೆ ಎಂದು ಹೇಳಲಾಗುತ್ತದೆ. ಕೇವಲ ಶ್ರೀಹರಿ ಎಂಬ ಹೆಸರಿನ ವ್ಯಕ್ತಿಯ ಹೆಸರನ್ನು ತೆಗೆದುಕೊಂಡರೂ ಸಕಲ ಪಾಪಗಳು ನಾಶವಾಗುತ್ತವೆ ಎಂದು ಭಾಗವತ ಪುರಾಣದಲ್ಲಿ ಹೇಳಲಾಗಿದೆ. ಇಷ್ಟು ಸುಲಭ ಪರಿಹಾರ ಇರುವಾಗ ಬೇರೆ ಬೇರೆ ಸಾಧನೆಯನ್ನು ಏಕೆ ಮಾಡಬೇಕು?

ಉತ್ತರ: ’ನಾನು ಗಂಗೆಯಲ್ಲಿ ಮುಳುಗಿ ಸ್ನಾನ ಮಾಡಿದೆ, ಈಗ ನನ್ನ ಎಲ್ಲಾ ಪಾಪಗಳು ತೊಳೆದು ಹೋದವು ಅಥವಾ ನಾನು ಶ್ರೀ ಹರಿಯ ನಾಮಜಪವನ್ನು ಜಪಿಸಿದೆನು ಈಗ ನನ್ನ ಎಲ್ಲಾ ಪಾಪಗಳು ನಾಶವಾದವು’ ಎಂಬಂತಹ ದೃಢ ವಿಶ್ವಾಸವು ಎಷ್ಟು ಜನರಲ್ಲಿದೆ ? ಖಂಡಿತವಾಗಿ ಯಾರಲ್ಲಿಯೂ ಇರುವುದಿಲ್ಲ. ಎಲ್ಲರ ಮನಸ್ಸಿನಲ್ಲಿಯೂ ಸಂಶಯವಿರುತ್ತದೆ. ಶ್ರದ್ಧೆ ಮತ್ತು ವಿಶ್ವಾಸವೇ ಇಲ್ಲದಿದ್ದರೆ ಫಲ ಸಿಗಬಹುದೇ? ಭಗವಾನ್ ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ “ಸಂಶಯೀ ವ್ಯಕ್ತಿಯು ನಾಶವಾಗುತ್ತಾನೆ” ಎಂಬುದಾಗಿ ತಿಳಿಸಿದ್ದಾನೆ.

ಅಜ್ಯಶ್ಚಾಶ್ರದ್ಧಾನಶ್ಚ ಸಂಶಯಾತ್ಮಾ ವಿನಶ್ಯತಿ |
ನಾಯಂ ಲೋಕೋಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ || ಅ.೪ ಶ್ಲೋಕ ೪೦

ಅರ್ಥ – ಅಜ್ಞಾನ ಮತ್ತು ಶ್ರದ್ಧಾರಹಿತ ಮತ್ತು ಸಂಶಯಗ್ರಸ್ತನು (ಮನುಷ್ಯ) ನಾಶವಾಗುತ್ತಾನೆ. ಸಂದೇಹವಿರುವ ವ್ಯಕ್ತಿಗೆ ಇಹಲೋಕವೂ ಇಲ್ಲ (ಲಾಭದಾಯಕ), ಪರಲೋಕವೂ ಇಲ್ಲ (ಲಾಭದಾಯಕ) ಮತ್ತು ಸುಖವು ಸಿಗುವುದಿಲ್ಲ.

ಪೂ. ಅನಂತ ಆಠವಲೆ

ಇನ್ನೊಂದೆನೆಂದರೆ ಹರಿನಾಮವನ್ನು ಜಪಿಸುವುದರಿಂದ ಮಾನವನ ಪಾಪಗಳು ನಾಶವಾಗುತ್ತವೆ ಎಂದು ಭಾಗವತ ಪುರಾಣದಲ್ಲಿ ಉಲ್ಲೇಖಿಸಲಾದ ವಿಷಯವು ಸತ್ಯವೇ ಆಗಿದೆ. ಆದರೆ ಆ ವ್ಯಕ್ತಿಯ ಪ್ರವೃತ್ತಿಯು ಸುಧಾರಿಸಲ್ಪಡುವುದು, ಅವನ ಸ್ವಭಾವದಲ್ಲಿ ಪರಿವರ್ತನೆಯಾಗುವುದು, ಅವನ ಚಿತ್ತವು ಶುದ್ಧಿಯಾಗುವುದು ಎಂದು ಅಲ್ಲಿ ಹೇಳಲಾಗಿಲ್ಲ. ಆಗ ಮೊದಲ ಪಾಪಗಳು ನಾಶವಾದವು ಎಂದು ಒಪ್ಪಿಕೊಂಡರೂ, ಮೂಲ ಸ್ವರೂಪವು ಹಾಗೆಯೇ ಉಳಿದಿರುವುದರಿಂದ ಅವನಿಂದ ಮತ್ತೆ ಪಾಪಗಳು ಘಟಿಸುತ್ತವೆ.

ಪಾಪಗಳು ಆಗಬಾರದು ಎಂದಿದ್ದರೆ ಅದಕ್ಕಾಗಿ ಸ್ವಭಾವವನ್ನು ಸುಧಾರಿಸಬೇಕಾಗುತ್ತದೆ, ಚಿತ್ತಶುದ್ಧಿಯನ್ನು ಮಾಡಿಕೊಳ್ಳಬೇಕಾಗುತ್ತದೆ ಮತ್ತು ಅದಕ್ಕಾಗಿ ಸಾಧನೆಯನ್ನು ಮಾಡಬೇಕಾಗುತ್ತದೆ. ಸಾಧನೆಗೆ ಬೇರೆ ಪರ್ಯಾಯವಿಲ್ಲ, ಯಾವುದೇ ಸುಗಮ , ಅಡ್ಡದಾರಿ ( shoಡಿಣ ಛಿuಣ) ಇರುವುದಿಲ್ಲ. ಮನಸ್ಸಿನ ( ಚಿತ್ತ) ಶುದ್ಧಿಗಾಗಿ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ ಇತ್ಯಾದಿಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದಕ್ಕನುಸಾರ ಆಚರಣೆ ಮಾಡಿದರೆ ತುಂಬಾ ಲಾಭವಾಗುತ್ತದೆ; ಕೇವಲ ಗಂಗಾಸ್ನಾನ ಅಥವಾ ಹರಿ ನಾಮಸ್ಮರಣೆ ಮಾಡುವುದರಿಂದ ಅಂತಹ ಲಾಭವಾಗುವುದಿಲ್ಲ.

– ಅನಂತ ಆಠವಲೆ.(೨೨.೦೪.೨೦೨೩)

|| ಶ್ರೀ ಕೃಷ್ಣಾರ್ಪಣಮಸ್ತು||

ಪೂ ಅನಂತ ಆಠವಲೆಯವರ ಲೇಖನದ ಚೈತನ್ಯ ಕಡಿಮೆಯಾಗದಂತೆ ವಹಿಸಲಾದ ಜಾಗರೂಕತೆ

ಲೇಖಕ ಪೂ. ಅನಂತ ಆಠವಲೆಯವರ ಬರವಣಿಗೆಯ ವಿಧಾನ, ಭಾಷೆ ಮತ್ತು ವ್ಯಾಕರಣದ ಚೈತನ್ಯ ಕಡಿಮೆಯಾಗಬಾರದು; ಆದ್ದರಿಂದ ಅವರ ಲೇಖನವನ್ನು ಯಾವುದೇ ಬದಲಾವಣೆಗಳಿಲ್ಲದೆ ಪ್ರಕಟಿಸಲಾಗಿದೆ. – ಸಂಕಲನಕಾರ