ಜಗತ್ತಿನಾದ್ಯಂತದ ಮುಸ್ಲಿಮರಿಂದ ‘ಹಲಾಲ್ ಹಾಲಿಡೇಸ್’ ಗಳಿಗೆ ಹೆಚ್ಚುತ್ತಿರುವ ಬೇಡಿಕೆ !

ಲಂಡನ್ (ಬ್ರಿಟನ್) – ಜಗತ್ತಿನಾದ್ಯಂತವಿರುವ ಮುಸ್ಲಿಮರಿಂದ ‘ಹಲಾಲ್ ಹಾಲಿಡೇ’ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ರಜಾದಿನಗಳಿಗೆ ಮುಸ್ಲಿಮರು ಇಸ್ಲಾಮಿಕ್ ದೇಶಗಳಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಲಾಗುತ್ತದೆ.

1. ಬ್ರಿಟನ್ ನ ಪ್ರಭಾವಿ ವ್ಯಕ್ತಿಯಾಗಿರುವ ಮುಸ್ಲಿಂ ಮಹಿಳೆ ಜಾಹರಾ ರೋಸ್ ಅವರು, ಇದುವರೆಗೆ ಅವರು 30 ಕ್ಕೂ ಹೆಚ್ಚು ‘ಹಲಾಲ್ ಹಾಲಿಡೇಸ್’ ಅನುಭವಿಸಿದ್ದಾರೆ. ಅವರು, “ನನಗೆ, ಹಲಾಲ್ ರಜೆ ಮತ್ತು ಸಾಮಾನ್ಯ ರಜೆಯ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಏಕಾಂತತೆ” ಎಂದು ಹೇಳುತ್ತಾರೆ. ‘ಹಲಾಲ್ ಹಾಲಿಡೇಸ್ ಗಳಲ್ಲಿ’ ಹಲಾಲ್ ಆಹಾರವೂ ಸುಲಭವಾಗಿ ದೊರಕುತ್ತದೆಯೆಂದು ಜಾಹರಾ ರೋಸ್ ಹೇಳಿದರು.

2. ಇಸ್ತಾಂಬುಲ್ (ಟರ್ಕಿ)ನಲ್ಲಿನ 36 ವರ್ಷದ ಮುಸ್ಲಿಂ ಮಹಿಳೆ ಹೆಜರ್ ಸುಜೋಗಲು ಆದಿಗುಜಾಯಿ ಅವರು, ಟರ್ಕಿಯಲ್ಲಿ ‘ಹಲಾಲ್ ಹಾಲಿಡೇಸ್ ಗಳಿಗೆ’ ಸ್ಥಳವನ್ನು ಹುಡುಕಲು ಯಾವುದೇ ಸಮಸ್ಯೆ ಇಲ್ಲ; ಆದರೆ ಅವರ ಕುಟುಂಬದೊಂದಿಗೆ ಮುಸ್ಲಿಮೇತರ ದೇಶಗಳಿಗೆ ಪ್ರಯಾಣಿಸುವಾಗ ‘ಹಲಾಲ್ ಹೋಟೆಲ್’ ಹುಡುಕಾಡಲು ಕಷ್ಟಪಡಬೇಕಾಗುತ್ತದೆ ಎಂದು ಹೇಳಿದರು. ಆದಿಗುಜಾಯಿ ದಿನದಲ್ಲಿ 5 ಬಾರಿ ನಮಾಜ್ ಮಾಡುತ್ತಾಳೆ. ಅವಳು, “ಹಲಾಲ್ ಹೋಟೆಲ್”ನಲ್ಲಿ ನಮಾಜ್ಗೆ ಚಾಪೆಗಳನ್ನು ಒದಗಿಸುತ್ತಾರೆ. ನಮ್ಮ ಮಕ್ಕಳು ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಅನುಸರಿಸುವ ಜನರೊಂದಿಗೆ ಬದುಕಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು. ‘ಹಲಾಲ್ ಹಾಲಿಡೇಸ’ ಎಂಬ ಪರಿಕಲ್ಪನೆಯನ್ನು ಪ್ರವಾಸೋದ್ಯಮವು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ ಎಂದು ಆದಿಗುಜಾಯಿ ಅಭಿಪ್ರಾಯಪಟ್ಟಿದ್ದಾರೆ.

3. ‘ಗ್ಲೋಬಲ್ ಮುಸ್ಲಿಂ ಟ್ರಾವೆಲ್ ಇಂಡೆಕ್ಸ್’ ಪ್ರಕಾರ, 2022 ರಲ್ಲಿ ‘ಹಲಾಲ್ ಟ್ರಾವೆಲ್’ ವ್ಯವಹಾರವು 220 ಬಿಲಿಯನ್ ಡಾಲರ್ ತಲುಪಿದೆ. ಕೆಲವು ಕಂಪನಿಗಳು ‘ಹಲಾಲ್ ಪ್ರವಾಸೋದ್ಯಮ’ದಲ್ಲಿ ವಿಶೇಷ ಆಸಕ್ತಿಯನ್ನು ತೋರಿಸುತ್ತವೆ. ಆದರೆ ಇತರರು ಅದನ್ನು ಒಂದು ಪರ್ಯಾಯವೆಂದು ಮಾತ್ರ ನೋಡುತ್ತಾರೆ ಎಂದು ಹೇಳಿದೆ.

4. ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಡಾ. ಅಬ್ದುಲ್ಲಾ ಮೌಸೂಮ್ ಇವರು, “ಮಾಲ್ಡೀವ್ಸ್ ಮುಸ್ಲಿಂ ರಾಷ್ಟ್ರವಾಗಿದೆ ಮತ್ತು ನಮ್ಮಲ್ಲಿ ಮೊದಲಿನಿಂದಲೂ ಮುಸಲ್ಮಾನ ಸ್ನೇಹಿ ಪ್ರವಾಸೋದ್ಯಮವನ್ನು ಹೊಂದಿದ್ದೇವೆ. ಈ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅನೇಕ `ರೆಸಾರ್ಟ’ ಗಳಲ್ಲಿ ಕೊಠಡಿ ವಿತರಣೆ, ಕೋಣೆಗಳ ವಿನ್ಯಾಸ ಮತ್ತು ಆಹಾರದ ವಿಷಯದಲ್ಲಿ ಮುಸಲ್ಮಾನರಿಗೆ ಅನುಕೂಲವಾಗಿರುವ ವಾತಾವರಣವನ್ನು ಹೊಂದಿವೆ ಎಂದು ಹೇಳಿದರು.

“ಹಲಾಲ್ ಪ್ರವಾಸೋದ್ಯಮ”ದಲ್ಲಿ ಮಲೇಶಿಯಾ ಮಂಚೂಣಿಯಲ್ಲಿ !

‘ಗ್ಲೋಬಲ್ ಮುಸ್ಲಿಂ ಟ್ರಾವೆಲ್ ಇಂಡೆಕ್ಸ್’ ಪ್ರಕಾರ, ಹೆಚ್ಚಿನ ಮುಸ್ಲಿಂ ರಾಷ್ಟ್ರಗಳು ‘ಹಲಾಲ್ ಪ್ರವಾಸೋದ್ಯಮ’ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿವೆ. ಇದರಲ್ಲಿ ಇಂಡೋನೇಶಿಯಾ ಮತ್ತು ಮಲೇಶಿಯಾ ದೇಶಗಳು ಮಂಚೂಣಿಯಲ್ಲಿವೆ. ಈ ಪಟ್ಟಿಯಲ್ಲಿ ಸಿಂಗಾಪುರ (11ನೇ ಸ್ಥಾನ) ಮತ್ತು ಬ್ರಿಟನ್ (20ನೇ ಸ್ಥಾನ) ಈ 2 ಮುಸಲ್ಮಾನೇತರ ದೇಶಗಳೂ ಸ್ಥಾನ ಪಡೆದಿವೆ. ಲಂಡನ್ ನಲ್ಲಿರುವ ಪಂಚತಾರಾ ಹೋಟೆಲ್ ನಲ್ಲಿ ಈಗ ‘ಹಲಾಲ್ ಮಾಂಸ’ವನ್ನು ನೀಡಲಾಗುತ್ತದೆ. ಹೋಟೆಲ್ ಸಿಬ್ಬಂದಿಗೆ ಮಧ್ಯಪ್ರಾಚ್ಯದ ಧರ್ಮ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ವಿಶೇಷವಾಗಿ ತರಬೇತಿ ನೀಡಲಾಗುತ್ತದೆ.

ಸಂಪಾದಕೀಯ ನಿಲುವು

ಜೀವನದಲ್ಲಿ ಯಾವುದೇ ಕ್ಷಣದಲ್ಲಿ ಮುಸ್ಲಿಮರಿಗೆ ಅವರ ಧರ್ಮವೇ ಮೊದಲಾಗಿರುತ್ತದೆ, ಎನ್ನುವುದು ಇದು ತೋರಿಸುತ್ತದೆ !

ಹಿಂದೂಗಳು ‘ಹಿಂದೂ ಪ್ರವಾಸೋದ್ಯಮ’ವನ್ನು ಒತ್ತಾಯಿಸಿದರೆ, ಪ್ರವಾಸೋದ್ಯಮವನ್ನು ಕೇಸರಿಕರಣಗೊಳಿಸಲಾಗುತ್ತಿದೆ ಎಂದು ಜಗತ್ತಿನಾದ್ಯಂತವಿರುವ ದೇಶಗಳು ಕೂಗಾಡುತ್ತಿದ್ದವು; ಆದರೆ ಈಗ ಒಂದೇ ಒಂದು ದೇಶ ಪ್ರವಾಸೋದ್ಯಮವನ್ನು ಇಸ್ಲಾಮೀಕರಣಗೊಳಿಸಲಾಗುತ್ತಿರುವ ಬಗ್ಗೆ ಕೂಗಾಡುವುದಿಲ್ಲ ಎನ್ನುವುದು ಖಚಿತವೆಂದು ತಿಳಿಯಿರಿ !

‘ನಾಳೆ ಭಾರತದಲ್ಲಿ ‘ಹಲಾಲ್ ಪ್ರವಾಸೋದ್ಯಮ’ಕ್ಕೆ ಬೇಡಿಕೆ ಬಂದರೆ ಅಂತಹ ಸ್ಥಳಗಳು ಹಿಂದೂಗಳ ಮತಾಂತರದ ಹೊಸ ಕೇಂದ್ರಗಳಾಗಬಹುದು’ ಎಂದು ಯಾರಿಗಾದರೂ ಅನಿಸಿದರೆ, ಅದರಲ್ಲಿ ತಪ್ಪೇನಿದೆ ?