ಮುಂಬಯಿ ಪೊಲೀಸ್ ಆಯುಕ್ತರಿಗೆ ಗಣೇಶೋತ್ಸವ ಸಮನ್ವಯ ಸಮಿತಿಯಿಂದ ದೂರು !
ಮುಂಬಯಿ – ಪರಳನಲ್ಲಿರುವ ಮೂರ್ತಿಶಾಲೆಯಿಂದ ನೀಡುವ ಶ್ರೀ ಗಣೇಶ ಮೂರ್ತಿಗಳ ದರ್ಶನಕ್ಕಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಈ ವಿಷಯದಲ್ಲಿ ಸ್ಥಳೀಯ ಭೋಯಿವಾಡ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಜನಸಂದಣಿಯನ್ನು ನಿಯಂತ್ರಿಸುವ ಬದಲು ಭಕ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಗಣೇಶೋತ್ಸವ ಸಮನ್ವಯ ಸಮಿತಿ ಮುಂಬಯಿ ಪೊಲೀಸ್ ಆಯುಕ್ತ ವಿವೇಕ ಫಣಸಳಕರ ಅವರಿಗೆ ದೂರು ನೀಡಿದ್ದಾರೆ. ಸಮಿತಿಯು ಪೊಲೀಸರ ಈ ಕ್ರಮಕ್ಕೆ ಅಸರ್ಮಾನ ವ್ಯಕ್ತಪಡಿಸಿದ್ದು, ಈ ಪ್ರಕರಣವನ್ನು ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ.
ಲಾಲಬಾಗ್-ಪರಳ ಪ್ರದೇಶದಲ್ಲಿ ಅನೇಕ ವಿಗ್ರಹ ಶಾಲೆಗಳಿವೆ. ಗಣೇಶೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿರುವುದರಿಂದ ಕೊನೆಯ ಕ್ಷಣದಲ್ಲಿ ಜನಸಂದಣಿಯಾಗುವುದನ್ನು ತಪ್ಪಿಸಲು ಹಲವು ಸಾರ್ವಜನಿಕ ಮಂಡಳಿಗಳು ಈಗಾಗಲೇ ಗಣೇಶನ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಿವೆ. ಈ ಮೂರ್ತಿಗಳನ್ನು ತೆಗೆದುಕೊಂಡು ಹೋಗಲು ಸಾರ್ವಜನಿಕ ಮಂಡಳಿಗಳ ಉತ್ಸಾಹಿ ಯುವಕರ ಗದ್ದಲವಿರುತ್ತದೆ. ಕಳೆದ ಕೆಲ ದಿನಗಳಿಂದ ಕೆಲವು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಕಾರ್ಯಕರ್ತರು ಸಮನ್ವಯ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ವಾಲಾವಲ್ಕರ್ ಅವರಲ್ಲಿ ಪೊಲೀಸರ ಲಘು ಲಾಠಿ ಪ್ರಹಾರದ ಬಗ್ಗೆ ದೂರು ನೀಡಿದ್ದರು. ಈ ದೂರುಗಳನ್ನು ಗಮನಿಸಿದ ಗಿರೀಶ ವಾಲಾವಲ್ಕರ್ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಪರಿಸ್ಥಿತಿಯನ್ನು ವಿವರಿಸಿದ್ದರು. ಇನ್ನೂ ಹಲವು ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋಗುವುದು ಬಾಕಿ ಉಳಿದಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಬಹುದು. ಆದ್ದರಿಂದ ಜನಸಂದಣಿ ನಿರ್ವಹಣೆಗೆ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿಯು ದೂರಿನಲ್ಲಿ ತಿಳಿಸಿದೆ.
ಸಂಪಾದಕರ ನಿಲುವು* ಕಾನೂನು ಸುವ್ಯವಸ್ಥೆಗೆ ಯಾವಾಗಲೂ ಸಹಕಾರ ನೀಡುವ ಹಿಂದೂಗಳ ಮೇಲೆ ಲಾಠಿ ಚಾರ್ಜ್ ಮಾಡುವ ಪೊಲೀಸರು ಹಬ್ಬ ಹರಿದಿನಗಳ ಜನಸಂದಣಿಯನ್ನು ಏಕೆ ಸಮರ್ಪಕವಾಗಿ ನಿಯಂತ್ರಿಸುವುದಿಲ್ಲ ? ಸಹಿಷ್ಣು ಹಿಂದೂಗಳ ಮೇಲೆ ಲಾಠಿ ಪ್ರಹಾರ ಮಾಡುವ ಪೋಲೀಸರು ಅನ್ಯ ಧರ್ಮದವರ ಧಾರ್ಮಿಕ ಹಬ್ಬಗಳಲ್ಲಿ ಹಸ್ತಕ್ಷೇಪ ಮಾಡಲು ಹೆದರುತ್ತಾರೆ, ಇದೇ ವಸ್ತುಸ್ಥಿತಿಯಾಗಿದೆ ! |