ನಾಮಜಪದ ಬಗ್ಗೆ ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಮಾರ್ಗದರ್ಶನ

ವೈಖರಿ ವಾಣಿ

ಸಾಧನೆಯ ಆರಂಭದಲ್ಲಿ ಸಾಧಕನ ನಾಮಜಪವು ವೈಖರಿ ವಾಣಿಯಿಂದಾಗುತ್ತದೆ; ಆದರೆ ವೈಖರಿಯಿಂದ ಮಧ್ಯಮಾ ಮತ್ತು ಪಶ್ಯಂತಿವಾಣಿಗೆ ಹೋಗಲು ಸಾಧಕನಿಂದ ಸತತ ಪ್ರಯತ್ನವಾಗಬೇಕು.

ಸದ್ಗುರು (ಡಾ.) ಚಾರುದತ್ತ ಪಿಂಗಳೆ

೧. ವೈಖರಿಯಲ್ಲಿನ ನಾಮಜಪ ವೈಯಕ್ತಿಕ : ಸಾಧನೆಯ ಆರಂಭದಲ್ಲಿ ನಮ್ಮ ಸ್ವೇಚ್ಛೆ ಜಾಗೃತವಾಗಿರುತ್ತದೆ. ನಾವು ನಮ್ಮನ್ನು ಸ್ವಕೋಶದಲ್ಲಿ ಕಟ್ಟಿ ನಾಮಜಪದ ಸಾಧನೆಯನ್ನು ಪ್ರಾರಂಭಿಸುತ್ತೇವೆ. ಸಾಧಕನು ಸಾಧನೆ ಅಥವಾ ನಾಮಜಪ ಮಾಡುವಾಗಲೂ ತನ್ನ ವ್ಯಕ್ತಿತ್ವವನ್ನು ಸಂಕುಚಿತವಾಗಿಡುತ್ತಾನೆ. ಇಂತಹ ಸಾಧಕನ ವೈಖರಿವಾಣಿಯು ಅವನ ವೈಯಕ್ತಿಕವಾಣಿ ಯಾಗುತ್ತದೆ. ಅದರಲ್ಲಿ ಈಶ್ವರನ ಮಹತ್ವ ಹೆಚ್ಚಿರುವುದಿಲ್ಲ.

೨. ಸ್ವೇಚ್ಛೆ ಅಥವಾ ಸ್ವಾರ್ಥ ಜಾಗೃತವಿರುವ ವೈಖರಿಯು ಈಶ್ವರನ ದೃಷ್ಟಿಯಿಂದ ಸತ್ಯವಲ್ಲದಿರುವುದು : ನಮ್ಮ ಸ್ವೇಚ್ಛೆ ಅಥವಾ ಸ್ವಾರ್ಥವನ್ನು ಜಾಗೃತವಾಗಿಟ್ಟು ವೈಖರಿವಾಣಿಯಲ್ಲಿ ನಾಮಜಪ ಮಾಡುವ ಸಾಧಕನು ಈಶ್ವರನ (ಗುರುಗಳ) ಪಟ್ಟಿಯಲ್ಲಿರುವುದಿಲ್ಲ. ಅವನು ಗುರುಕೃಪೆ ಅಥವಾ ಈಶ್ವರಕೃಪೆಯ ಪ್ರಾಪ್ತಿಯಿಂದ ದೂರವಾಗಿರುತ್ತಾನೆ. ಆದ್ದರಿಂದ ‘ಈಶ್ವರನ ದೃಷ್ಟಿಯಲ್ಲಿ ಆ ವೈಖರಿ ಸತ್ಯವಾಗಿರುವುದಿಲ್ಲ’, ಎನ್ನಬಹುದು; ಆದರೆ ವೈಖರಿಯಿಂದ ನಾಮಜಪ ಮತ್ತು ಸಾಧನೆಯನ್ನು ಆರಂಭಿಸಿ ನಾಮಜಪದ ವಾಣಿಯನ್ನು ಉನ್ನತ ಗೊಳಿಸುವುದೂ ಆವಶ್ಯಕವಾಗಿರುತ್ತದೆ. ಅದಕ್ಕಾಗಿ ಸ್ವೇಚ್ಛೆ ಮತ್ತು ಸ್ವಾರ್ಥದ ಬಂಧನಗಳನ್ನು ತೊರೆದು ಸಾಧನೆ ಅಥವಾ ನಾಮ ಜಪವನ್ನು ಮಾಡಲು ಪ್ರಯತ್ನಿಸುವುದು ಅವಶ್ಯಕವಾಗಿದೆ.

೩. ಸ್ವೇಚ್ಛೆ ಮತ್ತು ಸ್ವಾರ್ಥದ ತ್ಯಾಗ ಆವಶ್ಯಕ : ವ್ಯಾವಹಾರಿಕ ಜೀವನವಿರಲಿ ಅಥವಾ ಸಾಧನಾಪ್ರವಾಸ ವಾಗಿರಲಿ, ನಮ್ಮ ಸ್ವಾರ್ಥ ಅಥವಾ ನಮ್ಮ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುವುದರಿಂದ ನಮ್ಮ ನಾಮಜಪದ ವಾಣಿಯು ವೈಖರಿಗಿಂತ ಮುಂದೆ ಹೋಗುವುದಿಲ್ಲ. ಆದ್ದರಿಂದ ಸಾಧನೆ ಯನ್ನು ಆರಂಭಿಸಿ ಸ್ವೇಚ್ಛೆ ಮತ್ತು ಸ್ವಾರ್ಥ ತ್ಯಾಗದ ಪ್ರಯತ್ನಗಳಿಂದಲೇ ನಮ್ಮ ನಾಮಜಪದ ವಾಣಿಯನ್ನು ವೈಖರಿಯಿಂದ ಮುಂದೆ ಮುಂದೆ ಒಯ್ಯುವುದು ಅತ್ಯಂತ ಮಹತ್ವದ ಪ್ರಯತ್ನವಾಗಿದೆ.’

– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗ ದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (೧೩.೧.೨೦೨೩)