ಶ್ರಾವಣ ಮಾಸದಲ್ಲಿ ಅಧ್ಯಾತ್ಮ ಪ್ರಸಾರದ ದೃಷ್ಟಿಯಿಂದ ಮುಂದಿನಂತೆ ಪ್ರಯತ್ನಿಸಿ ಗುರುಕೃಪೆ ಪಡೆಯಿರಿ !

೧೭.೮.೨೦೨೩ ರಂದು ಶ್ರಾವಣ ಮಾಸ ಆರಂಭವಾಗಿದೆ. ಈ ಸಮಯದಲ್ಲಿ ನಾಗರಪಂಚಮಿ, ನೂಲುಹುಣ್ಣಿಮೆ, ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆಯ ಹಬ್ಬಗಳು ಬರುತ್ತವೆ. ಆಗ ಅಧ್ಯಾತ್ಮಪ್ರಸಾರದ ದೃಷ್ಟಿಯಿಂದ ಮುಂದಿನಂತೆ ಪ್ರಯತ್ನಿಸಬಹುದು.

೧. ದೇವಸ್ಥಾನಗಳಲ್ಲಿ ಗ್ರಂಥ ಪ್ರದರ್ಶನಿ ಆಯೋಜಿಸುವುದು

ಅ. ಸೋಮವಾರ, ಮಂಗಳವಾರ ಮುಂತಾದ ವಾರದ ದಿನಗಳಲ್ಲಿ ಆಯಾ ದೇವರ ದೇವಸ್ಥಾನದಲ್ಲಿ ಸನಾತನ ಸಂಸ್ಥೆಯಿಂದ ಪ್ರಕಾಶಿತವಾದ ಗ್ರಂಥಗಳು, ಕಿರುಗ್ರಂಥಗಳು ಹಾಗೂ ಸಾತ್ತ್ವಿಕ ಉತ್ಪಾದನೆಗಳ ಪ್ರದರ್ಶಿನಿ ಹಾಕಬೇಕು. ಆ ಸಮಯದಲ್ಲಿ ಆ ದೇವತೆಯ ಆಧ್ಯಾತ್ಮಿಕ ಶಾಸ್ತ್ರದ ಮಾಹಿತಿ ನೀಡುವ ಫಲಕಗಳನ್ನು ಸಹ ಹಾಕಬಹುದು. ಸೋಮವಾರ ಶಿವನ ದೇವಸ್ಥಾನದಲ್ಲಿ ಬಹಳ ಜನ ಸೇರುತ್ತಾರೆ. ವಿವಿಧ ಸ್ಥಳಗಳಲ್ಲಿರುವ ಶಿವನ ದೇವಸ್ಥಾನಗಳಲ್ಲಿ ಪ್ರಾಧಾನ್ಯತೆಯಿಂದ ಗ್ರಂಥ ಪ್ರದರ್ಶನದ ಆಯೋಜನೆ ಮಾಡಬಹುದು.

ಆ. ದೇವತೆಗಳ ನಾಮಪಟ್ಟಿಗಳು, ಫೋಟೋಗಳು, ಗ್ರಂಥಗಳು, ಕಿರುಗ್ರಂಥಗಳು ಮತ್ತು ಪದಕಗಳು (ಲಾಕೆಟ್) ಇಂತಹ ಬೇರೆ ಬೇರೆ ಆಕರ್ಷಕ ವಸ್ತುಗಳ ಸೆಟ್‌ಗಳನ್ನು ತಯಾರಿಸಿ ಗ್ರಂಥ ಪ್ರದರ್ಶನಿಯಲ್ಲಿ ವಿತರಣೆಗೆ ಇಡಬಹುದು.

ಇ. ಗ್ರಂಥ ಪ್ರದರ್ಶನಕ್ಕೆ ಭೇಟಿ ನೀಡುವ ಜಿಜ್ಞಾಸುಗಳಿಗೆ ಸನಾತನ ಪಂಚಾಂಗದ ಮಹತ್ವ ತಿಳಿಸಿ ೨೦೨೪ ರ ಪಂಚಾಂಗದ ಬೇಡಿಕೆ ಪಡೆದುಕೊಳ್ಳಬಹುದು.

೨. ಸಾರ್ವಜನಿಕ ಸ್ಥಳಗಳಲ್ಲಿ ಪ್ರವಚನಗಳ ಆಯೋಜನೆ

ದೇವಸ್ಥಾನ, ಶಾಲೆ, ಕಾಲೇಜು, ಹಿರಿಯ ನಾಗರಿಕರ ಸಂಘ, ಮಹಿಳಾ ಮಂಡಳಿಗಳು, ವಸತಿ ಸಮುಚ್ಚಯಗಳು ಮುಂತಾದ ಸ್ಥಳಗಳಲ್ಲಿ ಶ್ರಾವಣ ಮಾಸದ ಮಹತ್ವ ಇದರ ಬಗ್ಗೆ ಹಾಗೂ ದೇವತೆಗಳ ಅಧ್ಯಾತ್ಮಶಾಸ್ತ್ರಿಯ ಮಾಹಿತಿ ನೀಡುವ ಪ್ರವಚನಗಳನ್ನು ಆಯೋಜಿಸಬಹುದು, ‘ಆದರ್ಶ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?’ ಇದರ ಬಗ್ಗೆಯೂ ಉಪಸ್ಥಿತರಿಗೆ ತಿಳಿಸಿ ಹೇಳಬಹುದು.

೩. ವಿವಿಧ ಕಾರ್ಯಕ್ರಮಗಳಿಂದ ಅಧ್ಯಾತ್ಮ ಪ್ರಸಾರ

ಅ. ಚಾತುರ್ಮಾಸದ ಪ್ರಯುಕ್ತ ವಿವಿಧ ದೇವಸ್ಥಾನಗಳಲ್ಲಿ ಕೀರ್ತನೆ, ಪ್ರವಚನಗಳನ್ನು ಆಯೋಜಿಸಲಾಗಿರುತ್ತದೆ. ಅಂತಹ ಸ್ಥಳದಲ್ಲಿ ಗ್ರಂಥ ಪ್ರದರ್ಶನ ಹಾಕಬಹುದು ಹಾಗೂ ಆಯೋಜಕರ ಅನುಮತಿ ಪಡೆದು ಚಾತುರ್ಮಾಸದ ಮಹತ್ವ ಮುಂತಾದ ವಿಷಯಗಳ ಬಗ್ಗೆ ಪ್ರವಚನ ನೀಡಬಹುದು.
ಆ. ಶ್ರಾವಣ ಮಾಸದಲ್ಲಿ ಮುತ್ತೈದೆಯರು ಮಂಗಳ ಗೌರಿಯ ಪ್ರಯುಕ್ತ ಒಟ್ಟಾಗಿ ಸೇರುತ್ತಾರೆ. ಅವರಿಗಾಗಿ ಪ್ರವಚನ ಹಾಗೂ ಗ್ರಂಥ ಪ್ರದರ್ಶನಿಯ ಆಯೋಜನೆ ಮಾಡಬಹುದು ಹಾಗೂ ಅಲ್ಲಿ ಬರುವ ಸ್ತ್ರೀಯರಿಗೆ ಕಿರುಗ್ರಂಥ, ಗ್ರಂಥ ಅಥವಾ ಸಾತ್ತ್ವಿಕ ಉತ್ಪಾದನೆಗಳನ್ನು ಉಡುಗೊರೆಯಾಗಿ ನೀಡಬಹುದು.
ಇ. ಈ ಮಾಸದಲ್ಲಿ ಕೆಲವು ಜನರು ಮನೆಯಲ್ಲಿ ಪೂಜೆ ಮಾಡುತ್ತಾರೆ. ಅದಕ್ಕಾಗಿ ಧಾರ್ಮಿಕ ಕೃತಿಯ ಶಾಸ್ತ್ರ ತಿಳಿಸುವ ಗ್ರಂಥಗಳನ್ನು ಸಮಾಜದವರಿಗೆ ತಲುಪಿಸಬಹುದು.

೪. ಮನೆ ಮನೆಗೆ ಹೋಗಿ ಪ್ರಸಾರ

ಹಬ್ಬ ಉತ್ಸವ ಈ ವಿಷಯದ ಹಾಗೂ ವಿವಿಧ ದೇವತೆಗಳ ಮಾಹಿತಿ ನೀಡುವ ಗ್ರಂಥ ಮತ್ತು ಕಿರುಗ್ರಂಥಗಳನ್ನು ಮನೆ ಮನೆಗೆ ಹೋಗಿ ವಿತರಿಸಬಹುದು.

೫. ಫಲಕ ಪ್ರಸಿದ್ಧಿ

ಶ್ರಾವಣ ಮಾಸದ ಬಗ್ಗೆ ಹಾಗೂ ದೇವತೆಗಳ ಸಂದರ್ಭದಲ್ಲಿನ ಮಾಹಿತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಫಲಕದ ಮೇಲೆ ಬರೆದು ಫಲಕ ಪ್ರಸಿದ್ಧಿಯನ್ನು ಸಹ ಮಾಡಬಹುದು. (೯.೮.೨೦೨೩)