‘ಓಂ ನಮೋ ಭಗವತೇ ವಾಸುದೇವಾಯ |’ ಜಪದಲ್ಲಿನ ‘ವಾಸುದೇವ’ ಎಂಬುದು ಶ್ರೀಕೃಷ್ಣನ ಹೆಸರು. ಈ ಪದವು ‘ವಾಸು’ ಮತ್ತು ‘ದೇವ್’ ಎಂಬ ಎರಡು ಪದಗಳು ಸೇರಿ ಬಂದ ಶಬ್ದ. ಸಂಸ್ಕೃತ ಪದ ‘ವಾಸಃ’ ಎಂದರೆ ಸ್ಥಿತಿ. ಜೀವಸೃಷ್ಟಿಗೆ ಒಂದು ನಿರ್ದಿಷ್ಟ ಸ್ಥಿತಿಯು ಪ್ರಾಪ್ತವಾಗಬೇಕಾದರೆ ಬೇಕಾಗುವ ಆವಶ್ಯಕ ಲಹರಿಗಳನ್ನು ನೀಡುವ ‘ದೇವ’ (ದೇವತೆ) ಅಂದರೆ ವಾಸುದೇವ, ಅಂದರೆ ಶ್ರೀಕೃಷ್ಣ.