ದೇವತೆಗಳ ಪಾತ್ರಧಾರಿ ಕಲಾವಿದರನ್ನು ಆಧ್ಯಾತ್ಮಿಕ ಸ್ತರದಲ್ಲಿ ಅಭ್ಯಾಸ ಮಾಡುವಾಗ ಗಮನಕ್ಕೆ ಬಂದ ಅಂಶಗಳು

‘ಗಾಯಕನು ಹಾಡಿನ ಮೂಲಕ ದೇವರಿಗೆ ಮೊರೆ ಇಡುತ್ತಾನೆ. ನೃತ್ಯಕಲಾವಿದನು ದೇವರಿಗಾಗಿ ನೃತ್ಯವನ್ನು ಮಾಡಿ ನೃತ್ಯದ ಮೂಲಕ ಅವನ ಭಾವ ವನ್ನು ವ್ಯಕ್ತ ಮಾಡಬಹುದು, ಆದರೆ ಕಲಾವಿದನು ‘ಅಭಿನಯದ’ ಮೂಲಕ ಪ್ರತ್ಯಕ್ಷ ಈಶ್ವರಸ್ಬರೂಪನಾಗಬಹುದು’, ಎನ್ನುತ್ತಾರೆ. ಇತಿಹಾಸದಲ್ಲಿ ಹೀಗೆ ಅನೇಕ ಉದಾಹರಣೆಗಳು ಸಿಗುತ್ತವೆ. ವರ್ಷ ೧೯೩೬ ರಲ್ಲಿ ಪ್ರದರ್ಶಿತವಾದ ‘ಸಂತ ತುಕಾರಾಮ’ ಚಲನಚಿತ್ರದ ಶ್ರೀ. ವಿಷ್ಣುಪಂತ ಪಾಗನೀಸ ಇವರು ಮಾಡಿದ ಸಂತ ತುಕಾರಾಮರ ಪಾತ್ರ ಅಜರಾಮರವಾಯಿತು. ರಾಮಕೃಷ್ಣ ಪರಮಹಂಸರು ಸಣ್ಣವರಿದ್ದಾಗ ಒಂದು ಬಂಗಾಲಿ ನಾಟಕದಲ್ಲಿಅವರಿಗೆ ಶಿವನ ಪಾತ್ರವು ಸಿಕ್ಕಿತ್ತು. ಆ ಪಾತ್ರವನ್ನು ಮಾಡುವಾಗ ‘ಅವರು ಧ್ಯಾನಾವಸ್ಥೆಗೆ ಹೋಗಿದ್ದರು’, ಹೀಗೆ ಅನ್ನುತ್ತಾರೆ. ದೇವರ ಪಾತ್ರಗಳನ್ನು ಮಾಡುವ ಕಲಾವಿದರಲ್ಲಿ ಮೂಲತಃ ಸಾತ್ತ್ವಿಕತೆ ಇರುವುದರಿಂದ ಅವರ ಅಭಿನಯದಿಂದ ದೇವತೆಯ ತತ್ವದ ಅರಿವಾಗುತ್ತಿತ್ತು. ಅನೇಕ ಕಲಾವಿದರಿಗೆ ದೇವತೆಗಳ ಪಾತ್ರವನ್ನು ಮಾಡುವಾಗ ಅನೇಕ ದೈವೀ ಅನುಭೂತಿಗಳು ಬಂದಿವೆ. ಅನಂತರ ಅವರು ಸಾಧನೆ ಮಾಡಲು ಪ್ರಾರಂಭಿಸಿದ್ದಾರೆ. ಈ ಲೇಖನದಲ್ಲಿ ‘ಶ್ರೀಕೃಷ್ಣ’ ನ ಪಾತ್ರ ವಹಿಸಿದ ಹಿಂದಿನ ಮತ್ತು ಈಗಿನ ಕೆಲವು ದೂರದರ್ಶನ ಧಾರಾವಾಹಿಗಳ ತುಲನಾತ್ಮಕ ಅಭ್ಯಾಸವನ್ನು ಮಾಡಿದ್ದೇವೆ.

ಕು. ರೇಣುಕಾ ಕುಲಕರ್ಣಿ

೧. ಹಿಂದಿನ ಕೆಲವು ನಿರ್ದೇಶಕರ, ಲೇಖಕರ ಮತ್ತು ನಿರ್ಮಾಪಕರಲ್ಲಿರುವ ಭಕ್ತಿಭಾವ ಮತ್ತು ಕಲಾವಿದರ ದೇವರ ಮೇಲಿನ ಶ್ರದ್ಧೆಯಿಂದ ಆ ಚಲನಚಿತ್ರ ಮತ್ತು ಧಾರಾವಾಹಿಯನ್ನು ಜನರು ಮೆಚ್ಚುತ್ತಿದ್ದರು : ವರ್ಷ ೧೯೮೭ ರಿಂದ ೧೯೯೦ ರ ಕಾಲದಲ್ಲಿ ರಾಮಾನಂದ ಸಾಗರ ಮತ್ತು ಬಿ.ಆರ್. ಚೋಪ್ರಾ ಇವರು ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದ ‘ರಾಮಾಯಣ’ ಮತ್ತು ‘ಮಹಾಭಾರತ’ ಈ ಧಾರ್ಮಿಕ ಧಾರಾವಾಹಿಗಳು ಬಹಳ ಜನಪ್ರಿಯವಾದವು. ಜನರು ಅವುಗಳನ್ನು ತುಂಬ ಮೆಚ್ಚಿದರು. ಈ ಧಾರಾವಾಹಿಗಳ ನಿರ್ಮಾಪಕ ಮತ್ತು ನಿರ್ದೇಶಕರ ಮನಸ್ಸಿನಲ್ಲಿ ದೇವರ ಬಗ್ಗೆ ಭಕ್ತಿ ಮತ್ತು ಶ್ರದ್ಧೆ ಇತ್ತು. ‘ಸಮಾಜದಲ್ಲಿ ಭಕ್ತಿಭಾವ ಹೆಚ್ಚಗಬೇಕೆಂಬುದು ಅವರ ಉದ್ದೇಶವಾಗಿತ್ತು. ಈ ಧಾರಾವಾಹಿಯ ಕಥೆಯನ್ನು ಬರೆಯುವಾಗ ಅವರು ಅನೇಕ ಪೌರಾಣಿಕ ಗ್ರಂಥಗಳ ಅಭ್ಯಾಸವನ್ನು ಮಾಡಿದ್ದರು.

ಕು. ಮೃಣ್ಮಯಿ ಕೇಳಶೀಕರ

೨. ಹಿಂದಿನ ನಿರ್ದೇಶಕರ ಪ್ರವೃತ್ತಿ ಸಾತ್ತ್ವಿಕ ಆಗಿದ್ದುದದರಿಂದ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಕಲಾವಿದರೂ ಸಾತ್ತ್ವಿಕರಾದರು : ಕಲಾವಿದನು ನಿರ್ದೇಶಕ, ಸಾಹಿತಿ ಮತ್ತು ‘ರಿಸರ್ಚ ಕ್ರೂ’ (ಸಂಶೋಧನೆ ಮಾಡುವ ಸಮೂಹ) ಇವರ ಮಾರ್ಗದರ್ಶನ ದಂತೆ ಕೊಟ್ಟ ಪಾತ್ರವನ್ನು ಮಾಡುತ್ತಾನೆ. ಹಿಂದಿನ ನಿರ್ದೇಶಕರು ಸಾತ್ತ್ವಿಕ ವೃತ್ತಿಯವರಾಗಿದ್ದರು. ಆದುದರಿಂದ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಕಲಾವಿದರೂ ಸಾತ್ತ್ವಿಕರಾಗತೊಡಗಿದರು. ಅದರ ಪರಿಣಾಮವೆಂದು ಜನರಿಗೆ ಅವರಲ್ಲಿ ದೇವತೆಯ ರೂಪ ಕಾಣತೊಡಗಿತು. ನಿರ್ದೇಶಕ ಮತ್ತು ನಿರ್ಮಾಪಕ ಶ್ರೀ. ರಾಮಾನಂದ ಸಾಗರ ಅವರ ‘ರಾಮಯಣ’ ಧಾರಾವಾಯಿ ಯಲ್ಲಿ ಶ್ರೀ. ಅರುಣ ಗೋವಿಲ ಇವರು ಮಾಡಿದ ‘ರಾಮ’ನ ಪಾತ್ರವನ್ನು ನೋಡಿ ಜನರು ಅವರಿಗೆ ನಮಸ್ಕಾರ ಮಾಡುತ್ತಿದ್ದರು.

೩. ಕಲಾವಿದನು ದೇವತೆಯ ಪಾತ್ರವನ್ನು ಮಾಡುವುದರ ಹಿಂದಿನ ಆಧ್ಯಾತ್ಮಿಕ ಕಾರಣ !

೩ ಅ. ಕಲಾವಿದನಲ್ಲಿ ಯಾವುದಾದರೊಂದು ದೇವತೆಯ ತತ್ತ್ವವು ಕೆಲವು ಅಂಶ ಇದ್ದರೆ ದೇವತೆಯ ಪಾತ್ರ ಮಾಡುವುಕ್ಕಾಗಿ ಈಶ್ವರನೇ ಅವನ ಆಯ್ಕೆ ಮಾಡುತ್ತಿರುತ್ತಾನೆ. ಆದರೆ ‘ಆಧ್ಯಾತ್ಮಿಕ ಸ್ತರದಲ್ಲಿ ಅದರ ಲಾಭ ಹೇಗೆ ಮಾಡಿಕೊಳ್ಳಬೇಕು ?’, ಅದೆಲ್ಲ ಆ ಕಲಾವಿದನ ಕೈಯಲ್ಲಿರುತ್ತದೆ :

ಸಂಸ್ಕ್ರತದಲ್ಲಿ ‘ಶಿವೋ ಭೂತ್ವಾ ಶಿವಂ ಯಜೇತ |’, ಅಂದರೆ ‘ಶಿವಸ್ವರೂಪವಾಗಿ ಶಿವನ ಆರಾಧನೆ ಮಾಡಬೇಕು’, ಹೀಗೆನ್ನುತ್ತಾರೆ. ಆದುದರಿಂದ ದೇವತೆಯ ಪಾತ್ರ ಮಾಡಲು ತನ್ನಲ್ಲಿ ದೇವತ್ವ ತರುವುದು ಮತ್ತು ಸಾಧನೆ ಮಾಡುವುದು ಮಹತ್ವದಾಗಿದೆ. ಅದಕ್ಕಾಗಿ ಮನಸ್ಸಿನ ಶುದ್ಧತೆ, ಅಲ್ಪ ಅಹಂ ಇತ್ಯಾದಿ ಗುಣಗಳು ಕಲಾವಿದನಲ್ಲಿದ್ದರೆ, ಅವನು ಮಾಡಿದ ಪಾತ್ರದಲ್ಲಿ ಹೆಚ್ಚು ಚೈತನ್ಯ ಬರುತ್ತದೆ. ಆದರೆ ಕಲಾವಿದನಲ್ಲಿ ಸ್ವಭಾವದೋಷ ಮತ್ತು ಅಹಂ ಇವುಗಳು ಹೆಚ್ಚಿದ್ದರೆ ಮತ್ತು ಅವನಲ್ಲಿ ಭಕ್ತಿಭಾವ ಇಲ್ಲದ್ದಿದ್ದರೆ, ಅವನು ಎಷ್ಟೇ ಚೆನ್ನಾಗಿ ನಟಿಸಿದರೂ ಅವನ ಅಭಿನಯದಲ್ಲಿ ದೇವತ್ವ ಕಾಣುವುದಿಲ್ಲ. ‘ಕಲಾವಿದರ ಹಿಂದಿನ ಜನ್ಮದ ಸಾಧನೆ, ಪುಣ್ಯಬಲ ಮತ್ತು ದೇವತೆಯ ಪಾತ್ರ ಮಾಡುವುದಕ್ಕಾಗಿ ಕಲಾವಿದನಲ್ಲಿ ಮೂಲತಃ ಆ ದೇವತೆಯ ತತ್ತ್ವವು ಕೆಲವು ಅಂಶ ಇರುವುದರಿಂದ ಆ ಕಲಾವಿದನೇ ಆ ದೇವತೆಯ ಪಾತ್ರ ಮಾಡಬೇಕೆಂದು ದೇವರೇ ಅವರನ್ನು ಆಯ್ಕೆ ಮಾಡುತ್ತಾನೆ’, ಹೀಗೆ ನಮಗೆ ಅನಿಸುತ್ತದೆ.

೩ ಆ. ಕಲಾವಿದನ ಮುಖದಲ್ಲಿ ತೇಜಸ್ಸು ಅನಿಸಿ ದೇವತೆಯ ತತ್ತ್ವದ ಅನುಭೂತಿ ಬರುವುದು : ದೇವತೆಯ ಪಾತ್ರ ಮಾಡುವಾಗ ಕಲಾವಿದರಿಗೆ ಒಂದು ಕ್ಷಣವಾದರು ದೇವತೆಯ ತತ್ತ್ವದ ಅನುಭೂತಿ ಬರುತ್ತದೆ. ಬಿ.ಆರ್. ಚೋಪ್ರಾ ಇವರು ನಿರ್ದೇಶನ ಮಾಡಿದ ‘ಮಹಾಭಾರತ’ ಧಾರಾವಾಹಿಯಲ್ಲಿ ಶ್ರೀಕೃಷ್ಣನು ಕೌರವರ ಸಭೆಯಲ್ಲಿ ಶಾಂತಿ ಪ್ರಸ್ತಾವವನ್ನು ತೆಗೆದುಕೊಂಡು ಹೋಗುತ್ತಾನೆ. ಆಗ ದುರ್ಯೋಧನನು ಸಿಟ್ಟಿಗೆದ್ದು ‘ಇವನನ್ನು (ಶ್ರೀಕೃಷ್ಣನನ್ನು) ಬಂಧಿಸಿ’, ಹೀಗೆ ಆದೇಶ ಕೊಡುತ್ತಾನೆ. ಆಗ ಭಗವಾನ ಶ್ರೀಕೃಷ್ಣನು ವಿರಾಟರೂಪವನ್ನು ತಾಳಿ ಅವೇಶದಿಂದ ಹೇಳುತ್ತಾನೆ, ”ಒಮ್ಮೆ ನನ್ನನ್ನು ಬಂಧಿಸಲು ಪ್ರಯತ್ನಿಸಿ ನೋಡಿ !”

ಆಗ ಶ್ರೀಕೃಷ್ಣನ ಪಾತ್ರ ಮಾಡುವ ಶ್ರೀ. ನಿತೀಶ ಭಾರದ್ವಾಜರ ಮುಖವು ಎಂದಿಗಿಂತ ಹೆಚ್ಚು ತೇಜಸ್ವಿಯಾಗಿ ಕಂಡು ‘ಆ ಪ್ರಸಂಗದಲ್ಲಿ ಅವರಲ್ಲಿ ಎಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಕೃಷ್ಣ ತತ್ತ್ವವು ಅವತರಿಸಿತು’, ಎಂದು ನಮಗನಿಸಿತು.

೪. ದೇವತೆಯ ಪಾತ್ರ ಮಾಡಿದ ನಂತರ ಕಲಾವಿದರ ಒಂದು ವಿಶಿಷ್ಟ ಚಿತ್ರಣ ನಿರ್ಮಾಣವಾದುದರಿಂದ ಅವರಿಗೆ ಬೇರೆ ತರಹದ ಪಾತ್ರಗಳು ಸಿಗದೇ ಇರುವುದು; ಆದರೆ ಅಧ್ಯಾತ್ಮದಲ್ಲಿ ಮಾತ್ರ ಅವರು ಮುಂದೆ ಮುಂದೆ ಹೋಗುವುದು : ಕಲಾವಿದನು ಯಾವುದಾದರೊಂದು ದೇವತೆಯ ಪಾತ್ರ ಮಾಡಿದ ನಂತರ ಜನರ ಮನಸ್ಸಿನಲ್ಲಿ ಕಲಾವಿದನ ಆ ಚಿತ್ರಣವೇ ಉಳಿಯುತ್ತದೆ. ಇಂತಹ ಕಲಾವಿದರಿಗೆ ಮುಂದೆ ಬೇರೆ ರೀತಿಯ ಪಾತ್ರಗಳು ಸಿಗುವುದಿಲ್ಲ ಅಥವಾ ಅವರು ಆ ಪಾತ್ರಗಳನ್ನು ಸ್ವೀಕರಿಸುವುದಿಲ್ಲ, ಉದಾ. ರಾಮಾನಂದ ಸಾಗರ ಇವರ ರಾಮಾಯಣ ಧಾರಾವಾಹಿಯಲ್ಲಿ ಪ್ರಭು ಶ್ರೀರಾಮನ ಪಾತ್ರ ಮಾಡಿದ ನಂತರ ಶ್ರೀ. ಅರುಣ ಗೋವಿಲ ಇವರ ಶ್ರೀರಾಮನ ಪಾತ್ರವೇ ಸಮಾಜದಲ್ಲಿ ಹೆಚ್ಚು ಪರಿಣಾಮ ಬೀರಿತು ಮತ್ತು ಅವರಿಗೂ ತಮ್ಮನ್ನು ‘ರಾಮ’ ಎನ್ನಿಸಿಕೊಳ್ಳುವುದರಲ್ಲೇ ಹೆಚ್ಚು ಆನಂದವೆನಿಸುತ್ತದೆ.’

೫. ರಾಮಾನಂದ ಸಾಗರ ಇವರ ‘ಶ್ರೀಕೃಷ್ಣ’ ಧಾರಾವಾಹಿಯಲ್ಲಿ ಕೆಲಸ ಮಾಡುವ ಅನೇಕ ಜನರು ಪರಸ್ಪರ ಅಧ್ಯಾತ್ಮ ಬಗ್ಗೆ ಮಾತನಾಡುತ್ತಿದ್ದರು : ರಾಮಾನಂದ ಸಾಗರ ಇವರ ‘ಶ್ರೀಕೃಷ್ಣ’ ಧಾರಾವಾಹಿಯಲ್ಲಿ ಕೆಲಸ ಮಾಡುವ ಅನೇಕ ಜನರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಮೂಡಿತು. ಈ ಧಾರಾವಾಹಿಯ ಚಿತ್ರೀಕರಣ ಮಾಡುವ ವ್ಯಕ್ತಿಯೂ (‘ಕ್ಯಾಮೆರಾಮ್ಯಾನ್‌’) ಅಧ್ಯಾತ್ಮದ ದಾರಿ ಹಿಡಿದನು. ಆ ಕಾಲದಲ್ಲಿ ‘ಸ್ಪಾಟಬಾಯ್’ ಕೂಡ ‘ಧ್ಯಾನ’, ‘ಯೋಗ’ ಇತ್ಯಾದಿ ವಿಷಯಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ಮಾಡುತ್ತಿದ್ದನು. ‘ರಾಮಾನಂದಸಾಗರ ಸ್ವಂತ ಆಧ್ಯಾತ್ಮಿಕ ವೃತ್ತಿಯವರಾದುದರಿಂದ ಅವರ ಜೊತೆ ಕೆಲಸ ಮಾಡುವ ಅನೇಕ ಕಲಾವಿದರಿಗೆ ಅಧ್ಯಾತ್ಮದ ಬಗ್ಗೆ ಆಸಕ್ತಿ ಉತ್ಪನ್ನವಾಯಿತು’, ಹೀಗೆನ್ನಬಹುದು. ಅವರ ಕಲೆಗೆ ಅಧ್ಯಾತ್ಮದ ತಿರುವು ಸಿಗುವುದರಿಂದ ಕಲೆಯ ನಿಜವಾದ ಉದ್ದೇಶ ಸಾಧ್ಯವಾಯಿತು.’

– ಕು. ರೇಣುಕಾ ಕುಲಕರ್ಣಿ (ಸಂಗೀತ ಅಭ್ಯಾಸಕಿ) ಮತ್ತು ಕು. ಮೃಣ್ಮಯಿ ಕೇಳಶೀಕರ (ನಾಟ್ಯ ಮತ್ತು ಸಂಗೀತ ಅಭ್ಯಾಸಕಿ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೭.೫.೨೦೨೨)