ಧರ್ಮ, ಧರ್ಮನಿರಪೇಕ್ಷತೆ (ಜಾತ್ಯತೀತವಾದ) ಮತ್ತು ಸಂವಿಧಾನ !

ಶ್ರೀ. ಚೇತನ ರಾಜಹಂಸ

‘೨೪/೪೯ರ ಸಂಚಿಕೆಯಲ್ಲಿ ಮುದ್ರಣ ವಾದ ಲೇಖನದಲ್ಲಿ ‘ಭಾರತ ಸ್ವಯಂಭೂ ಹಿಂದೂ ರಾಷ್ಟ್ರವೇ ಆಗಿದೆ ; ಆದರೆ ಸಂವಿಧಾನದ ಮೂಲಕ ಅದು ಘೋಷಣೆಯಾಗುವುದು ಆವಶ್ಯಕ; ಧರ್ಮ, ಧರ್ಮನಿರಪೇಕ್ಷತೆ, ಸಂವಿಧಾನ ಮತ್ತು ‘ಸೆಕ್ಯುಲರ್’ ಶಬ್ದಗಳ ಅಧಿಕೃತ ಅರ್ಥಗಳು ಇಲ್ಲದಿರುವುದರಿದ ಆಗುತ್ತಿರುವ ಅನರ್ಥ’, ಈ ಭಾಗವನ್ನು ಓದಿದೆವು. ಈ ವಾರದಂದು ಈ ಲೇಖನದ ಕೊನೆಯ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

೪. ‘ಸಂವಿಧಾನದ ಅಡಿಪಾಯವೇ ‘ಸೆಕ್ಯುಲರ್’ ಆಗಿದೆ’, ಎಂದು ಹೇಳುವುದು ತಪ್ಪು ತಿಳುವಳಿಕೆ !

೧೯೭೬ ರಲ್ಲಿ ಸಂವಿಧಾನದಲ್ಲಿ ‘ಸೆಕ್ಯುಲರ್’ ಶಬ್ದವನ್ನು ಸೇರಿಸಿದ್ದರೂ ಸಂವಿಧಾನದ ಅಡಿಪಾಯ ಮತ್ತು ರಚನೆಯು ಮೊದಲಿನಿಂದಲೂ ‘ಸೆಕ್ಯುಲರೇ ಆಗಿತ್ತು’ ಎಂದು ಅನೇಕರು ಹೇಳುತ್ತಾರೆ, ಇದೊಂದು ತಪ್ಪು ತಿಳುವಳಿಕೆಯಾಗಿದೆ. ಒಂದು ವೇಳೆ ಪರಿಚ್ಛೇದ ೨೫ ರಿಂದ ೨೮ ಇವು ‘ಸೆಕ್ಯುಲರಿಸಮ್‌’ನ ಅಡಿಪಾಯ (ಬೇಸಿಕ್ಸ್ ಆಫ್‌ ಸೆಕ್ಯುಲರಿಸಮ್) ಆಗಿವೆ ಎಂದು ಹೇಳಿದರೆ, ಅದರ ಮುಂದಿನ ಪರಿಚ್ಛೇದ ೨೯ ರಿಂದ ೩೦ ಇವು ‘ಸೆಕ್ಯುಲರಿಸಮ್‌ನ ವಿರುದ್ಧವಾಗಿವೆ (ಅಗೇನಸ್ಟ ಸೆಕ್ಯುಲರಿಸಮ್‌). ಉದಾಹರಣೆಯನ್ನು ಹೇಳುವುದಾದರೆ ಪರಿಚ್ಛೇದ ೨೮ ರಲ್ಲಿ, ಸರಕಾರಿ ಅಥವಾ ಸರಕಾರದಿಂದ ಅನುದಾನ ಪಡೆಯುವ ಯಾವುದೇ ಶಿಕ್ಷಣಸಂಸ್ಥೆಗಳು ಯಾವುದೇ ಧರ್ಮಶಿಕ್ಷಣವನ್ನು ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ. ಒಂದು ವೇಳೆ ಯಾವುದಾದರೊಂದು ಶಿಕ್ಷಣಸಂಸ್ಥೆ ಧರ್ಮಶಿಕ್ಷಣ ಕೊಡುತ್ತಿದ್ದರೆ, ಅದರ ಶೈಕ್ಷಣಿಕ ಮನ್ನಣೆಯನ್ನು ರದ್ದುಗೊಳಿಸ ಲಾಗುವುದು ಎಂದೂ ಹೇಳಲಾಗಿದೆ. ಆದ್ದರಿಂದಲೇ ಶಾಲೆ-ಮಹಾವಿದ್ಯಾಲಯಗಳಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಇತ್ಯಾದಿಗಳನ್ನು ಕಲಿಸಲು ಆಗುವುದಿಲ್ಲ. ಈ ಪರಿಚ್ಛೇದ ಮೇಲ್ನೋಟಕ್ಕೆ ‘ಸೆಕ್ಯುಲರ್’ ಅನಿಸುತ್ತದೆ; ಆದರೆ ಪರಿಚ್ಛೇದ ೩೦ ಅನ್ನು ಓದಿದರೆ ಪರಿಚ್ಛೇದ ೨೮ ಕೇವಲ ಬಹುಸಂಖ್ಯಾತ ಹಿಂದೂಗಳಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ತಿಳಿಯುತ್ತದೆ. ಪರಿಚ್ಛೇದ ೩೦ ರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ, ಶಾಲೆಗಳನ್ನು ಆರಂಭಿಸುವ, ಅವುಗಳನ್ನು ನಡೆಸುವ ಮತ್ತು ಅವುಗಳಲ್ಲಿ ಅವರ ಧಾರ್ಮಿಕ ಶಿಕ್ಷಣ (ರಿಲಿಜಿಯಸ್‌ ಎಜ್ಯುಕೇಶನ್‌)ವನ್ನು ನೀಡುವ ಅಧಿಕಾರವಿದೆ ಎಂದು ಹೇಳಲಾಗಿದೆ. ಅದೇ ರೀತಿ ಅವಶ್ಯಕತೆಗನುಸಾರ ಸರಕಾರ ಈ ಶಿಕ್ಷಣಸಂಸ್ಥೆಗಳಿಗೆ ಅನುದಾನವನ್ನೂ ನೀಡುವುದು ಎಂದೂ ಹೇಳಲಾಗಿದೆ. ಇದರರ್ಥವೇನೆಂದರೆ ಮದರಸಾ ಆಗಿದ್ದಲ್ಲಿ ಕುರಾನ್‌ ಮತ್ತು ಹದೀಸ ಕಲಿಸಬಹುದು. ಚರ್ಚ್‌ಗಳ ‘ಕಾನ್ವೆಂಟ್’ ಶಾಲೆಗಳು ಎಂದಾದರೆ ಅವುಗಳಲ್ಲಿ ಬೈಬಲ್‌ ಕಲಿಸಬಹುದು. ಆವಶ್ಯಕವೆನಿಸಿದರೆ ಸರಕಾರ ಈ ಧಾರ್ಮಿಕ ಶಿಕ್ಷಣಸಂಸ್ಥೆಗಳಿಗೆ ಅನುದಾನ ನೀಡುವುದು. ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ನಿರ್ಬಂಧ ಮತ್ತು ಅಲ್ಪಸಂಖ್ಯಾತರಿಗೆ ಧರ್ಮಶಿಕ್ಷಣ ನೀಡಲು ಸಂವಿಧಾನದ ವ್ಯವಸ್ಥೆ, ಇದೆಂತಹ ‘ಸೆಕ್ಯುಲರ್‌’ವಾದ ?

೪ ಅ. ಧರ್ಮ ಕಲಿಯದ ಕಾರಣದಿಂದಾದ ದುಷ್ಪರಿಣಾಮ ! : ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಒಂದನೇ ತರಗತಿಯಿಂದ ಧಾರ್ಮಿಕ ಶಿಕ್ಷಣವನ್ನು ಪಡೆಯುತ್ತಾರೆ ಮತ್ತು ದೊಡ್ಡವರಾಗುವಾಗ ಧರ್ಮಾಚರಣೆಯಲ್ಲಿ ಕಟ್ಟರ್‌ರಾಗುತ್ತಾರೆ. ಅದೇ ಹಿಂದೂಗಳ ಮಕ್ಕಳು ಒಂದನೇ ತರಗತಿಯಿಂದ ಧರ್ಮಶಿಕ್ಷಣ ಸಿಗದೇ ಮಹಾವಿದ್ಯಾಲಯದ ಶಿಕ್ಷಣ ಪೂರ್ಣ ವಾಗುವಾಗ ನಾಸ್ತಿಕವಾದಿಗಳಾಗುತ್ತಾರೆ. ಇದು ಹಿಂದೂ ಸಮಾಜದ ಮೇಲಿನ ಅನ್ಯಾಯವಾಗಿದೆ, ಇದನ್ನು ಗಮನದಲ್ಲಿಡಿ !

ಕೇವಲ ಧರ್ಮವೊಂದೇ ವ್ಯಕ್ತಿಗೆ ಶುಭಕರ್ಮ ಮತ್ತು ಪಾಪ ಕರ್ಮಗಳು ಯಾವುವು ? ಉಚಿತಕರ್ಮ ಯಾವುದು ಮತ್ತು ಅನುಚಿತಕರ್ಮ ಯಾವುದು ? ನೈತಿಕಕರ್ಮ ಯಾವುದು ಮತ್ತು ಅನೈತಿಕಕರ್ಮ ಯಾವುದು ? ಎಂಬುದನ್ನು ಕಲಿಸುವಂತಹ ವಿಷಯವಾಗಿದೆ. ಇಂದಿನ ಅಧರ್ಮಿ ರಾಜ್ಯ ವ್ಯವಸ್ಥೆಯು ಕಳೆದ ೭೫ ವರ್ಷಗಳಲ್ಲಿ ಹಿಂದೂಗಳಿಗೆ ಧರ್ಮವನ್ನು ಕಲಿಸದ ಕಾರಣ ಅನೇಕ ಜನರು ಪಾಪಾಚರಣೆ ಮಾಡುತ್ತಿದ್ದಾರೆ. ಅದರ ಪರಿಣಾಮದಿಂದ ಎಲ್ಲೆಡೆ ಭ್ರಷ್ಟಾಚಾರ ಮತ್ತು ಅನೈತಿಕತೆ ಇವುಗಳು ಹೆಚ್ಚಾಗಿದೆ.

೫. ಅಧರ್ಮಿ ವ್ಯವಸ್ಥೆಯಲ್ಲಿನ ಕಾನೂನುಗಳೂ ಅಧರ್ಮಿಯಾಗಿರುತ್ತವೆ !

‘ಸದ್ಯ ಕಾನೂನಿನ ರಾಜ್ಯವಿದೆ’, ಎಂದು ನಾವು ಹೇಳುತ್ತೇವೆ, ಹೇಗೆ ಕಾನೂನುಗಳು ಇರುತ್ತವೆಯೋ, ಹಾಗೆಯೇ ರಾಜ್ಯ ಇರುತ್ತದೆ; ಎಂದಾದರೆ

  • ಕಾನೂನುಗಳು ವಿದೇಶಿಯಾಗಿದ್ದರೆ, ರಾಜ್ಯ ಹೇಗಿರಬಹುದು ? – ವಿದೇಶಿ ರಾಜ್ಯ
  • ಕಾನೂನು ಸ್ವದೇಶಿ ಆಗಿದ್ದರೆ ರಾಜ್ಯ ಹೇಗಿರುವುದು ? – ಸ್ವದೇಶಿ ರಾಜ್ಯ
  • ಕಾನೂನು ಅನ್ಯಾಯಕರವಾಗಿದ್ದರೆ, ರಾಜ್ಯ ಹೇಗಿರಬಹುದು ? – ಅನ್ಯಾಯದ ರಾಜ್ಯ
  • ಕಾನೂನು ಚೆನ್ನಾಗಿದ್ದರೆ, ರಾಜ್ಯ ಹೇಗಿರಬಹುದು ? – ಉತ್ತಮ
  • ಕಾನೂನು ಅಧರ್ಮಿ ಆಗಿದ್ದರೆ ರಾಜ್ಯ ಹೇಗಿರಬಹುದು ? – ಅಧರ್ಮಿ

‘ಇಂದಿನ ರಾಜ್ಯ ಅಧರ್ಮಿಯಾಗಿದೆ’, ಎಂಬುದಕ್ಕೆ ನಾನು ಕೆಲವು ಕಾನೂನುಗಳ ಉದಾಹರಣೆಗಳನ್ನು ನೀಡುತ್ತೇನೆ.

೫ ಅ. ‘ಪ್ಲೇಸಸ್‌ ಆಫ್‌ ವರ್ಶಿಪ್‌ ಎಕ್ಟ್ ೧೯೯೧’ (ಪ್ರಾರ್ಥನಾ ಸ್ಥಳಗಳ ಕಾನೂನು) : ಈ ಕಾನೂನನ್ನು ೧೯೯೧ ರಲ್ಲಿ ಕಾಂಗ್ರೆಸ್‌ ಸರಕಾರವು ಜಾರಿಗೊಳಿಸಿತು. ಇಂದು ‘ದೇಶದ ‘ಸೆಕ್ಯುಲರಿಸಮ್‌’ನ ಕೊಡುಗೆ ಎಂದು ಈ ಕಾನೂನನ್ನು ಪ್ರಶಂಸಿಸಲಾಗುತ್ತಿದೆ. ರಾಮಮಂದಿರದ ಆಂದೋಲನ ರಭಸದಿಂದ ನಡೆಯುವಾಗ ಇತರ ಕಡೆಗಳಲ್ಲಿ ಇಂತಹ ಆಂದೋಲನಗಳು ಆಗಬಾರದೆಂದು, ಕಾಂಗ್ರೆಸ್‌ ಈ ಕಾನೂನನ್ನು ಮಾಡಿತು. ಅದರಲ್ಲಿ ‘ಅಯೋಧ್ಯೆಯಲ್ಲಿನ ರಾಮ ಮಂದಿರವನ್ನು ಹೊರತುಪಡಿಸಿ ಭಾರತದ ಉಳಿದ ಧಾರ್ಮಿಕ ಸ್ಥಳಗಳ ಸ್ವರೂಪವು ೧೯೪೭ ರಲ್ಲಿ ಹೇಗಿತ್ತೊ, ಹಾಗೆಯೇ ಇರುವುದು’, ಎಂದು ಸ್ಪಷ್ಟಪಡಿಸಲಾಗಿದೆ. ಅದೇ ರೀತಿ ‘ಈ ವಿಷಯದಲ್ಲಿ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಬರುವುದಿಲ್ಲ್ಲ’, ಎಂಬ ಏರ್ಪಾಡನ್ನು ಸಹ ಮಾಡಲಾಗಿದೆ. ಹಿಂದೂಗಳ ಶ್ರದ್ಧಾಸ್ಥಾನ ಗಳಾಗಿರುವ ಕಾಶಿ-ಮಥುರಾ ಇವುಗಳ ಮುಕ್ತಿಗಾಗಿಯೂ ನ್ಯಾಯಾಲಯಕ್ಕೆ ಹೋಗದಂತೆ ನಿರ್ಬಂಧ ಹೇರಿದಂತಹ ಕಾನೂನು ಇದಾಗಿದೆ. ಅನ್ಯಾಯ ಆದವರು ನ್ಯಾಯಾಲಯಕ್ಕೆ ಹೋಗದಂತೆ ತಡೆಯುವ ಕಾನೂನು ಸಿದ್ಧವಾಗಲು ಆರಂಭ ವಾದರೆ ಈ ದೇಶದಲ್ಲಿ ಏನಾಗಬಹುದು ? ಅರಾಜಕತೆ ಹರಡಬಹುದು ! ಹಿಂದೂಗಳ ಜೀವನದಲ್ಲಿ ಕಾಶಿಯ ಮುಕ್ತೇಶ್ವರನಿಗೆ ಅಸಾಧಾರಣ ಮಹತ್ವವಿದೆ. ಮುಕ್ತೇಶ್ವರನ ಹೊರತು ಮೋಕ್ಷಪ್ರಾಪ್ತಿ ಹೇಗಾಗುವುದು ? ಹಿಂದೂಗಳ ಮೋಕ್ಷ ಮಾರ್ಗದಲ್ಲಿಯೆ ಅಡ್ಡಗಾಲಿಡುವ ಕಾನೂನು ಇದಾಗಿದೆ.

೫ ಆ. ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಕಾನೂನು ೨೦೧೩ : ಈ ಕಾನೂನನ್ನು ಮಹಾರಾಷ್ಟ್ರದಲ್ಲಿ ತರಲಾಯಿತು. ಈ ಕಾನೂನಿನ ಮೂಲ ಮಸೂದೆಯಲ್ಲಿ ಶರೀರಕ್ಕೆ ತೊಂದರೆ ನೀಡಿ ಧರ್ಮಾಚರಣೆ ಮಾಡುವುದೆಂದರೆ ಅಂಧಶ್ರದ್ಧೆ ಎಂದು ನಿರ್ಣಯಿಸಲಾಗಿತ್ತು. ಅದಕ್ಕನುಸಾರ ಕಾಲ್ನಡಿಗೆಯಿಂದ ಯಾತ್ರೆ ಮಾಡುವುದೆಂದರೆ ಶರೀರಕ್ಕೆ ತೊಂದರೆ ಕೊಡುವುದಾಗುತ್ತದೆ. ಮಹಾರಾಷ್ಟ್ರದಲ್ಲಿ ಪಂಢರಪುರದ ಯಾತ್ರೆಯನ್ನು ಕಾಲ್ನಡಿಗೆ ಯಿಂದಲೇ ಮಾಡುತ್ತಾರೆ. ಕಾಶಿಗೆ ಪ್ರದಕ್ಷಿಣೆ ಹಾಕುವ ಯಾತ್ರೆ ಯನ್ನು ಇಂದು ಕೂಡ ಅನೇಕ ಜನರು ಕಾಲ್ನಡಿಗೆಯಿಂದ ಮಾಡುತ್ತಾರೆ. ಇದಕ್ಕೆ ಅಂಧಶ್ರದ್ಧೆ ಎಂದು ಹೇಳಬೇಕೇ ? ಈ ಕಾನೂನಿನ ಮಸೂದೆಯಲ್ಲಿ ಸಣ್ಣ ಮಕ್ಕಳ ಕಿವಿ ಚುಚ್ಚುವುದೆಂದರೆ, ಅವರಿಗೆ ಶಾರೀರಿಕ ಯಾತನೆಗಳನ್ನು ನೀಡುವುದು, ಎಂದು ಹೇಳಲಾಗಿತ್ತು. ಇವು ಅಂತಹ ಅಧರ್ಮಿ ಕಾನೂನುಗಳಾಗಿದ್ದವು. ದೇವತಾನುಗೃಹದಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಸೇರಿ ಈ ಕಾನೂನುಗಳನ್ನು ವಿರೋಧಿಸಿ ಇದರಲ್ಲಿನ ೧೫ ಅಧರ್ಮಿ ಕಲಮ್‌ಗಳನ್ನು ಸರಕಾರವು ರದ್ದುಪಡಿಸುವಂತೆ ಮಾಡಿತು. ಆದರೆ ಇಂದಿನ ವ್ಯವಸ್ಥೆಯೇ ಅಧರ್ಮಿ ಆಗಿರುವುದರಿಂದ ಈಗಲೂ ಭಾರತದಲ್ಲಿ ಇಂತಹ ಅನೇಕ ಅಧರ್ಮಿ ಕಾನೂನುಗಳು ಬರುತ್ತಿವೆ !

೬. ‘ಸೆಕ್ಯುಲರ್’ ಶಬ್ದವನ್ನು ಸಂವಿಧಾನದಿಂದ ತೆಗೆದುಹಾಕುವುದು ಆವಶ್ಯಕ !

ಸ್ವಲ್ಪದರಲ್ಲಿ ಹೇಳುವುದಾದರೆ, ಭಾರತದ ಅಧರ್ಮಿ ವ್ಯವಸ್ಥೆ ಮತ್ತು ಅಧರ್ಮಿ ಕಾನೂನುಗಳಿಗೆ ಸಂವಿಧಾನದಲ್ಲಿನ ‘ಸೆಕ್ಯುಲರ್’ ಈ ಶಬ್ದವೇ ಮೂಲವಾಗಿದೆ. ಇದೇ ಶಬ್ದವು ಹಿಂದೂ ರಾಷ್ಟ್ರದ ಸ್ಥಾಪನೆಯ ಮುಖ್ಯ ಅಡಚಣೆಯಾಗಿದೆ, ದೇಶಭಕ್ತರು ಇದನ್ನು ತಿಳಿದುಕೊಳ್ಳಬೇಕು ! ಭಾರತದಲ್ಲಿನ ಜಿಹಾದಿ, ಮಿಶನರಿ, ಸಾಮ್ಯವಾದಿ (ಕಮ್ಯುನಿಸ್ಟ) ಮತ್ತು ನಾಸ್ತಿಕವಾದಿ ಶಕ್ತಿಗಳು ಈ ಸೆಕ್ಯುಲರ್’ ಶಬ್ದವನ್ನು ಉಪಯೋಗಿಸಿ ಹಿಂದೂಗಳನ್ನು ಗುರಿ ಮಾಡುತ್ತಿವೆ. ಆದ್ದರಿಂದಲೆ ನಾವು ‘ಸೆಕ್ಯುಲರ್’ ಶಬ್ದವನ್ನು ವಿರೋಧಿಸಬೇಕು. ‘ಸೆಕ್ಯುಲರ್’ ಶಬ್ದದ ಅರ್ಥ ‘ಧರ್ಮನಿರಪೇಕ್ಷ’ ಅಲ್ಲ; ಏಕೆಂದರೆ ಅಧರ್ಮ ಇದು ಧರ್ಮದ ವಿರುದ್ಧ ಶಬ್ದವಾಗಿದೆ, ಧರ್ಮನಿರಪೇಕ್ಷ ಎಂಬ ಶಬ್ದವೇ ಇಲ್ಲ.

೭. ‘ಸೆಕ್ಯುಲರ್’ ಶಬ್ದದ ವಿರುದ್ಧ ಸಂವಿಧಾನದ ಮಾಧ್ಯಮದಿಂದ ಹೋರಾಡಿರಿ !

ಹೇಗೆ ನಮ್ಮ ಸಂವಿಧಾನದಲ್ಲಿ ಹೊಸ ಶಬ್ದವನ್ನು ಹಾಕ ಬಹುದೋ, ಹಾಗೆಯೆ ಅದನ್ನು ಸಂವಿಧಾನಾತ್ಮಕ ಪದ್ದತಿಯಿಂದ ತೆಗೆಯಲೂಬಹುದು. ಈ ದೃಷ್ಟಿಯಿಂದ ಸಂವಿಧಾನದಲ್ಲಿನ ‘ಸೆಕ್ಯುಲರ್’ ಶಬ್ದವನ್ನು ತೆಗೆದುಹಾಕಲು ನಾವು ಪ್ರಜಾಪ್ರಭುತ್ವದ ಮಾರ್ಗದಿಂದ ಪ್ರಯತ್ನಿಸಬೇಕಾಗುವುದು. ಪ್ರಜಾಪ್ರಭುತ್ವದಲ್ಲಿ ಪರಿವರ್ತನೆಯ ೩ ಮಾರ್ಗಗಳನ್ನು ಹೇಳಲಾಗಿದೆ – ಆಂದೋಲನ, ಸಂಸತ್ತು ಮತ್ತು ಸರ್ವೋಚ್ಚ ನ್ಯಾಯಾಲಯ ! ಸಾಮಾನ್ಯ ಜನರಲ್ಲಿ ಮತ್ತು ಆಡಳಿತದಲ್ಲಿ ಜಾಗೃತಿ ಮೂಡಿಸಲು ರಸ್ತೆಗಿಳಿದು ಆಂದೋಲನ ಮಾಡಬೇಕಾಗುವುದು. ರಸ್ತೆಯ ಮೇಲೆ ಸಂವಿಧಾನದ ಯೋಗ್ಯ (ಕಾನೂನು) ಮಾರ್ಗದಿಂದ ಆಂದೋಲನ ಮಾಡಲು ಪ್ರಜಾಪ್ರಭುತ್ವ ಅನುಮತಿಯನ್ನು ಕೊಡುತ್ತದೆ. ನಾವು ಅದರ ಸಂಪೂರ್ಣ ಲಾಭವನ್ನು ಪಡೆದು ಕೊಳ್ಳಬೇಕು. ಸಂಸತ್ತಿನಲ್ಲಿ ಕಾನೂನುಗಳನ್ನು ಮಾಡಲು ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳಿಗೆ ಪ್ರಬೋಧನೆ ಮಾಡಬೇಕಾಗುವುದು. ಅವರಿಗೆ ಈ ಶಬ್ದದಿಂದ ಆಗುವ ಹಾನಿಯ ಬಗ್ಗೆ ತಿಳಿಸಿ ಹೇಳಬೇಕಾಗಬಹುದು. ‘ಸಂಸತ್ತಿನಲ್ಲಿ ಕುಳಿತುಕೊಳ್ಳುವ ವ್ಯಕ್ತಿಗಳೇ ಇದನ್ನು ಮಾಡಬಹುದು, ಎಂಬುದನ್ನು ಅವರಿಗೆ ಹೇಳಬೇಕಾಗುವುದು. ಆವಶ್ಯಕತೆ ಬಂದಲ್ಲಿ ಅವರಿಗೆ ನೀವು ಈ ಸುಧಾರಣೆಯನ್ನು ಮಾಡಿರಿ, ಇಲ್ಲವಾದರೆ ನಾವು ನಿಮಗೆ ಮತಗಳನ್ನು ಕೊಡುವುದಿಲ್ಲ ಎಂದು ನೇರವಾಗಿ ಹೇಳಬೇಕಾಗುವುದು. ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ವಕೀಲರು ಸೆಕ್ಯುಲರ್‌ ಈ ಶಬ್ದವನ್ನು ತೆಗೆದುಹಾಕಲು ಹೋರಾಟ ಮಾಡಬೇಕಾಗುವುದು. ಸುದೈವದಿಂದ ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ‘ಸೆಕ್ಯುಲರ್’ ಶಬ್ದವನ್ನು ತೆಗೆದುಹಾಕಲು ಒಂದು ಅರ್ಜಿ ದಾಖಲಾಗಿದೆ. ಇಂತಹ ಅರ್ಜಿಗಳನ್ನು ಸ್ಥಳೀಯ ಉಚ್ಚ ನ್ಯಾಯಾಲಯಗಳಲ್ಲಿಯೂ ದಾಖಲಿಸಬಹುದು.

‘ರಸ್ತೆ, ಸಂಸತ್ತು ಮತ್ತು ‘ಸರ್ವೋಚ್ಚ ನ್ಯಾಯಾಲಯ’ ಈ ೩ ಮಾರ್ಗಗಳನ್ನು ಗಮನದಲ್ಲಿಡಬೇಕು !

ಜನಜಾಗೃತಿ, ಜನಪ್ರತಿನಿಧಿಗಳಿಗೆ ಪ್ರಬೋಧನೆ ಮತ್ತು ನ್ಯಾಯಾಲಯದಲ್ಲಿ ಹೋರಾಟದಂತಹ ಎಲ್ಲ ಮಾರ್ಗಗಳಿಂದ ಸಂಘರ್ಷ ಮಾಡಿ ನಾವು ಸಂವಿಧಾನದಲ್ಲಿನ ‘ಸೆಕ್ಯುಲರ್’ ಶಬ್ದವನ್ನು ತೆಗೆದುಹಾಕಬೇಕಾಗಿದೆ ಮತ್ತು ಇದೇ ಮಾರ್ಗದಿಂದ ಭಾರತವನ್ನು ಸಂವಿಧಾನದ ಮೂಲಕ ಹಿಂದೂ ರಾಷ್ಟ್ರದ ಘೊಷಣೆಯನ್ನೂ ಮಾಡಲಿಕ್ಕಿದೆ !’

(ಮುಕ್ತಾಯ)

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ (೨೫.೫.೨೯೨೩)