ಶಿಕ್ಷಕಿ ಹೇಳಿದಕ್ಕೆ ಮುಸಲ್ಮಾನ ವಿದ್ಯಾರ್ಥಿಗೆ ಇತರ ವಿದ್ಯಾರ್ಥಿಗಳಿಂದ ಥಳಿತ !

  • ಮುಜಫರನಗರ (ಉತ್ತರಪ್ರದೇಶ)ನ ಘಟನೆ

  • ಹೋಮ್ ವರ್ಕ್ ಮಾಡದಿದ್ದರಿಂದ ಶಿಕ್ಷೆ : ಶಿಕ್ಷಕಿಯ ವಿರುದ್ಧ ದೂರು ದಾಖಲು

ಮುಜಫ್ಫರನಗರ (ಉತ್ತರಪ್ರದೇಶ) – ಇಲ್ಲಿಯ ಖುಬ್ಬಾರಪುರ ಗ್ರಾಮದಲ್ಲಿನ ನೇಹಾ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ಹೋಮ್ ವರ್ಕ್ ಮಾಡದಿರುವ ಒಬ್ಬ ಮುಸಲ್ಮಾನ ವಿದ್ಯಾರ್ಥಿಗೆ ಶಿಕ್ಷಕಿಯು ಬೇರೆ ವಿದ್ಯಾರ್ಥಿಗಳಿಂದ ಹೊಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರ ನಂತರ ಮುಸಲ್ಮಾನ ನಾಯಕರು, ಸಂಘಟನೆಗಳು ಹಾಗೂ ಜಾತ್ಯತೀತ ರಾಜಕೀಯ ಪಕ್ಷಗಳಿಂದ ಟೀಕಿಸಲಾಯಿತು. ಚಿತ್ರ ತ್ಯಾಗಿ ಎಂದು ಈ ಶಿಕ್ಷಕಿಯ ಹೆಸರಾಗಿದ್ದು ಈ ಶಾಲೆಯ ಒಡತಿ ಆಗಿದ್ದಾರೆ. ಈ ಪ್ರಕರಣದಲ್ಲಿ ಶಿಕ್ಷಕಿಯ ವಿರುದ್ಧ ದೂರು ದಾಖಲಿಸಲಾಗಿದ್ದು ಪೊಲೀಸ್ ಮತ್ತು ಶಿಕ್ಷಣ ಇಲಾಖೆಯಿಂದ ಈ ಘಟನೆಯ ವಿಚಾರಣೆ ನಡೆಯುತ್ತಿದೆ.

ಏನಿದೆ ವಿಡಿಯೋದಲ್ಲಿ ?

ಶಿಕ್ಷಕಿ ತ್ಯಾಗಿ ಇವರು ಮುಸಲ್ಮಾನ ವಿದ್ಯಾರ್ಥಿಯನ್ನು ಎಲ್ಲರೆದರೂ ನಿಲ್ಲಿಸಿ ತರಗತಿಯಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದೆ ಬಂದು ಈ ವಿದ್ಯಾರ್ಥಿಗೆ ಹೊಡೆಯಲು ಹೇಳಿದರು. ಜೊತೆಗೆ ‘ನಾನು ಈಗ ಹೇಳುವುದು, ಈ ಮುಸಲ್ಮಾನ ಹುಡುಗರು ಅವರ ಪ್ರದೇಶಕ್ಕೆ (ಮುಸಲ್ಮಾನ ಪ್ರದೇಶಕ್ಕೆ) ಹೋಗಲಿ.’ ತ್ಯಾಗಿ ಇವರು ಮುಸಲ್ಮಾನ ಹುಡುಗನಿಗೆ ಹೊಡೆಯುವ ಆದೇಶ ನೀಡಿದ ನಂತರ ತರಗತಿಯಲ್ಲಿನ ಒಬ್ಬ ಹುಡುಗನು ಮುಸಲ್ಮಾನ ವಿದ್ಯಾರ್ಥಿಯ ಕೆನ್ನೆಗೆ ಮೆಲ್ಲನೆ ಹೊಡೆದನು. ಅಗ ತ್ಯಾಗಿ ಇವರು ಆ ಹುಡುಗನಿಗೆ, ”ನೀನು ಹೀಗೆ ಏಕೆ ಹೊಡೆಯುತ್ತಿರುವೆ ? ಜೋರಾಗಿ ಹೊಡಿ.’ ಎಂದು ಹೇಳಿದರು. ಅದರ ನಂತರ ಇನ್ನೂ ಇಬ್ಬರೂ ಹುಡುಗರು ಎದ್ದು ಮುಸಲ್ಮಾನ ವಿದ್ಯಾರ್ಥಿಗೆ ಜೋರಾಗಿ ಹೊಡೆದರು.” ತ್ಯಾಗಿ, ”ಹೊಡೆಯುವುದರಲ್ಲಿ ಯಾರು ಬಾಕಿ ಉಳಿದಿದ್ದಾರೆ ? ಈಗ ಬೆನ್ನಿನ ಮೇಲೆ ಹೊಡೆಯಿರಿ. ಕೆನ್ನೆಗೆ ಹೊಡೆದರೆ ಅವನ ಕೆನ್ನೆ ಕೆಂಪಾಗುತ್ತಿದೆ, ಆದ್ದರಿಂದ ಕೆನ್ನೆಗೆ ಹೊಡೆಯಬೇಡಿ. ಎಂದು ಹೇಳುತ್ತಿದ್ದಾರೆ.

ಶಿಕ್ಷಕಿಯ ಸ್ಪಷ್ಟೀಕರಣ

ಶಿಕ್ಷಕಿ ಚಿತ್ರ ತ್ಯಾಗಿ ಇವರು ಈ ಪ್ರಕರಣದಲ್ಲಿ, ಈ ಘಟನೆಗೆ ಧಾರ್ಮಿಕ ಬಣ್ಣ ನೀಡುವುದು ತಪ್ಪಾಗಿದೆ. ನಮ್ಮ ಶಾಲೆಯಲ್ಲಿ ಅನೇಕ ಮುಸಲ್ಮಾನ ವಿದ್ಯಾರ್ಥಿ ಕಲಿಯುತ್ತಾರೆ. ಯಾವ ವಿದ್ಯಾರ್ಥಿಗೆ ಹೊಡೆಯಲಾಗಿದೆ, ಅವನು ಹೋಮ್ ವರ್ಕ್ ಮಾಡಿರಲಿಲ್ಲ. ಅದರಿಂದ ಅವನಿಗೆ ಶಿಕ್ಷೆ ನೀಡಲಾಯಿತು. ಇದಕ್ಕೆ ಬೇರೆ ರೂಪ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಈ ಘಟನೆಯ ವಿಡಿಯೋ ತಪ್ಪಾದ ರೀತಿಯಲ್ಲಿ ಸಂಕಲನ ಮಾಡಿ ಪ್ರಸಾರ ಮಾಡಲಾಗಿದೆ. ಹುಡುಗನ ಕುಟುಂಬದವರು ನನಗೆ ಹುಡುಗನ ವಿಷಯದಲ್ಲಿ ಕಠೋರವಾಗಿರಲು ಹೇಳಿದ್ದರು ಆದ್ದರಿಂದ ನಾವು ಕಠೋರವಾಗಿರಲು ಪ್ರಯತ್ನ ಮಾಡಿದೆವು. ನಾನು ಅಂಗವಿಕಲೆ ಆಗಿದ್ದೇನೆ. ಜಾಗದಿಂದ ಏಳಲು ಸಾಧ್ಯವಿಲ್ಲದೆ ಇರುವುದರಿಂದ, ಬೇರೆ ವಿದ್ಯಾರ್ಥಿಗಳಿಗೆ ಹೊಡೆಯಲು ಹೇಳಿದ್ದೆ. ಅವನಿಗೆ ಶಿಕ್ಷೆ ನೀಡುವ ಉದ್ದೇಶ ‘ಅವನು ಅಭ್ಯಾಸ ಮಾಡಬೇಕು’, ಎಂದೇ ಆಗಿತ್ತು. ನಾನು ಮುಸಲ್ಮಾನ ಎಂಬ ಪದ ಉಚ್ಚರಿಸಿರುವುದು ತಪ್ಪಾಗಿದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ; ಆದರೆ ನನ್ನ ಉದ್ದೇಶ ಬೇರೆ ಆಗಿತ್ತು ಎಂದು ಹೇಳಿದರು.

ಈ ಘಟನೆಗೆ ಧಾರ್ಮಿಕ ಬಣ್ಣ ನೀಡಬಾರದು ! – ಮುಸಲ್ಮಾನ ವಿದ್ಯಾರ್ಥಿಯ ತಂದೆಯ ಮನವಿ

ಈ ಘಟನೆಯ ಬಗ್ಗೆ ಈ ಮುಸಲ್ಮಾನ ವಿದ್ಯಾರ್ಥಿಯ ತಂದೆ, ”ಈ ಘಟನೆಗೆ ಧಾರ್ಮಿಕ ಬಣ್ಣ ನೀಡುವುದು ತಪ್ಪಾಗಿದೆ ನಾವು ಗ್ರಾಮದಲ್ಲಿ ಎಲ್ಲರೂ ಸಹೋದರರಂತೆ ವಾಸಿಸುತ್ತೇವೆ. ಹುಡುಗನು ಒಳ್ಳೆಯ ರೀತಿ ಅಭ್ಯಾಸ ಮಾಡಬೇಕೆಂದು ಅವನ ಸಂದರ್ಭದಲ್ಲಿ ಕಠೋರವಾಗಿರಲು ನಾನೇ ಶಿಕ್ಷಕಿ ತ್ಯಾಗಿ ಇವರಿಗೆ ಹೇಳಿದ್ದೆ; ಆದರೆ ಇದರ ಅರ್ಥ ಈ ರೀತಿ ಹೊಡೆಯುವುದಲ್ಲ ಶಾಲೆಯ ಬಳಿ ದೂರು ನೀಡಿದ್ದೇನೆ ಆದರೆ ನಮಗೆ ಹೇಳಿರುವುದು, ಶಾಲೆಯ ನಿಯಮ ಹೀಗೆ ಇದೆ ಈ ನಿಯಮ ಯೋಗ್ಯವಲ್ಲ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ನಾನು ಒತ್ತಾಯಿಸಿದ್ದೇನೆ ಎಂದು ಹೇಳಿದರು.