ಪ್ರಧಾನಮಂತ್ರಿ ನರೇಂದ್ರ ಮೋದಿ ಯುರೋಪಿನಲ್ಲಿನ ಗ್ರೀಸ್ ಪ್ರವಾಸ !

೪೦ ವರ್ಷಗಳ ನಂತರ ಗ್ರೀಸ್ ಗೆ ಭೇಟಿ ನೀಡುವ ಭಾರತದ ಪ್ರಧಾನಮಂತ್ರಿ ಮೋದಿ ಇವರು ಮೊದಲಿಗರು !

ಗ್ರೀಸ್ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿ ಖರೀದಿಸುವ ಸಾಧ್ಯತೆ !

ಪ್ರಧಾನಮಂತ್ರಿ ನರೇಂದ್ರ ಮೋದಿ

ಅಥೆನ್ಸ್ (ಗ್ರೀಸ್) – ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರು ಆಗಸ್ಟ್ ೨೫ ರಂದು ಯುರೋಪಿನಲ್ಲಿನ ಗ್ರೀಸ್ ಗೆ ತಲುಪಿದ್ದಾರೆ. ಅವರು ಗ್ರೀಸ್ ನ ರಾಷ್ಟ್ರಪತಿ ಕ್ಯಾಟ್ರಿನ ಎನ್. ಸಕೆಲಾರೋಪೋಲು ಇವರನ್ನು ಭೇಟಿ ಮಾಡಿದರು. ೪೦ ವರ್ಷಗಳ ನಂತರ ಭಾರತದ ಪ್ರಧಾನಮಂತ್ರಿ ಗ್ರೀಸ್ ಗೆ ಭೇಟಿ ನೀಡಿದರು. ಈ ಹಿಂದೆ ೧೯೮೩ ರಲ್ಲಿ ಇಂದಿರಾ ಗಾಂಧಿ ಗ್ರೀಸ್ ಗೆ ಹೋಗಿದ್ದರು. ಪ್ರಧಾನಮಂತ್ರಿ ಮೋದಿ ಇವರ ಜೊತೆಗೆ ೧೨ ಭಾರತೀಯ ಉದ್ಯಮಿಗಳು ಕೂಡ ಗ್ರೀಸ್ ಗೆ ಹೋಗಿದ್ದಾರೆ. ಗ್ರೀಸ್ ನಲ್ಲಿ ಓರ್ವ ಉದ್ಯಮಿಯ ಜೊತೆಗೆ ಅವರ ಬೈಠಕ್ ನಡೆಯುವುದು ಹಾಗೂ ಎರಡು ದೇಶಗಳಲ್ಲಿನ ವ್ಯಾಪಾರ, ತಂತ್ರಜ್ಞಾನದಿಂದ ರಕ್ಷಣ ಸಹಕಾರದವರೆಗೆ, ಎಲ್ಲಾ ವಿಷಯಗಳು ಬಗ್ಗೆ ಚರ್ಚೆ ನಡೆಯುವುದು. ಗ್ರೀಸ್ ಅನೇಕ ದಿನದಿಂದ ಭಾರತದ ‘ಬ್ರಹ್ಮೋಸ್’ ‘ಕ್ರೂಜ’ ಕ್ಷಿಪಣಿ ಖರೀದಿಯಲ್ಲಿ ಆಸಕ್ತಿ ತೋರುತ್ತಿತ್ತು. ಈ ಕುರಿತು ಪ್ರಧಾನಮಂತ್ರಿ ಮೋದಿ ಇವರು ಅವರ ಪ್ರವಾಸದಲ್ಲಿ ಕ್ಷಿಪಣಿಯ ಮಾರಾಟ ಒಪ್ಪಂದ ಮಾಡಬಹುದು.

ಪ್ರಧಾನಮಂತ್ರಿ ಮೋದಿ ಗ್ರೀಸ್ ಗೆ ಹೋಗಿರುವದರ ಹಿಂದಿನ ರಣತಂತ್ರ !

ಕಾಶ್ಮೀರ ಪ್ರಶ್ನೆಯ ಕುರಿತು ಭಾರತದ ವಿರೋಧದಲ್ಲಿ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ. ಗ್ರೀಸ್ ಇದು ಟರ್ಕಿಯ ನೆರೆಯ ದೇಶವಾಗಿದೆ. ಈ ಎರಡು ದೇಶಗಳಲ್ಲಿ ಶತ್ರುತ್ವ ಇದೆ. ಗ್ರೀಸ್ ಕಾಶ್ಮೀರ ಪ್ರಶ್ನೆಯ ಕುರಿತು ಭಾರತಕ್ಕೆ ಬೆಂಬಲ ನೀಡಿದೆ. ಗ್ರೀಸ್ ಕೂಡ ವಿಶ್ವ ಸಂಸ್ತೆಯ ಭದ್ರತಾ ಪರಿಷತ್ತಿನಲ್ಲಿ ಭಾರತದ ಸ್ಥಾಯಿಸ್ಥಾನಕ್ಕೆ ಬೆಂಬಲಿಸಿದೆ. ‘ಶತ್ರುವಿನ ಶತ್ರು ನಮ್ಮ ಮಿತ್ರ’ ಈ ನೀತಿಯ ಪ್ರಕಾರ ಭಾರತೀಯ ವಾಯುದಳದ ಮುಖ್ಯಸ್ಥ ವಿ ಆರ್. ಚೌದರಿ ಇವರು ಕಳೆದ ವರ್ಷ ಆಗಸ್ಟ ತಿಂಗಳಲ್ಲಿ ಗ್ರೀಸ್ ಗೆ ಹೋಗಿದ್ದರು. ಏಪ್ರಿಲ್ ೨೦೨೩ ರಲ್ಲಿ ಟರ್ಕಿಯು ಪಾಕಿಸ್ತಾನಕ್ಕೆ ‘ಬಾಯರಕ್ತಾರ್ ಟಿಬಿ 2’ ಈ ಡ್ರೋನ್ ನೀಡಿತ್ತು. ಈ ಡ್ರೋನ್ ರಷ್ಯಾ-ಯುಕ್ರೇನ್ ಯುದ್ಧದಲ್ಲಿ ಮಹತ್ವದ ಕಾರ್ಯಾ ಮಾಡಿದೆ. ಪಾಕಿಸ್ತಾನಕ್ಕೆ ಈ ಡ್ರೋನ್ ಸಿಗುವುದು ಭಾರತಕ್ಕಾಗಿ ಅಪಾಯಕಾರಿಯಾಗಿದೆ.