ಹಿಂದೂ ಆಗಿರುವ ಬಗ್ಗೆ ಅಭಿಮಾನ ಇರುವ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ವಿವೇಕ ರಾಮಸ್ವಾಮಿ ಇವರ ಕುರಿತು ‘ರಾಷ್ಟ್ರವಾದಿ’ ಕ್ರೈಸ್ತ ಪಾದ್ರಿಯಿಂದ ಟೀಕೆ !
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿ ಮುಂದಿನ ವರ್ಷ ನಡೆಯುವ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಎಂದು ಡೋನಾಲ್ಡ ಟ್ರಂಪ್ ಇವರ ಬದಲು ಭಾರತೀಯ ಮೂಲದ ವಿವೇಕ ರಾಮಸ್ವಾಮಿ ಇವರ ಹೆಸರಿನ ಚರ್ಚೆ ನಡೆಯುತ್ತಿದೆ. ಕೆಲವು ಜನರು ಇದಕ್ಕಾಗಿ ರಾಮಸ್ವಾಮಿಯವರಿಗೆ ಬೆಂಬಲ ಕೂಡ ನೀಡಿದ್ದಾರೆ. ರಾಮಸ್ವಾಮಿ ಹಿಂದೂ ಆಗಿದ್ದರಿಂದ ಅನೇಕ ಕ್ರೈಸ್ತ ಪಾದ್ರಿಗಳು ಅವರನ್ನು ವಿರೋಧಿಸಿದ್ದಾರೆ. ಇಂತಹದರಲ್ಲಿ ಟ್ರಂಪ್ ಬೆಂಬಲಿಗ ಪಾದ್ರಿ ಹ್ಯಾಕ್ ಕುನ್ನೆಮನ್ ಇವರು, ರಾಮಸ್ವಾಮಿ ಏನಾದರೂ ಆಯ್ಕೆಯಾದರೆ, ನಮಗೆ ವೈಟ್ ಹೌಸ್ ನಲ್ಲಿ ವಿಚಿತ್ರ ರೀತಿಯ ಹಿಂದೂ ದೇವತೆಗಳ ಪ್ರತಿಮೆ ನೋಡಲು ಸಿಗಲಿದೆ ಎಂದು ಹೇಳಿದರು.
विवेक रामास्वामी भारतीय मूल के अमेरिकी हैं जो अमेरिकी राष्ट्रपति चुनावों में रिपब्लिकन उम्मीदवार है. #VivekRamaswami #DonaldTrump https://t.co/KulwLumeMy
— AajTak (@aajtak) August 25, 2023
೧. ‘ದ ರೋಲಿಂಗ್ ಸ್ಟೋನ್’ ಈ ಮಾಸಿಕದಲ್ಲಿ ಪ್ರಕಾಶಿತವಾಗಿರುವ ಒಂದು ಲೇಖನದ ಪ್ರಕಾರ ಕುನ್ನೆಮನ್ ಇವರು ರಾಮಸ್ವಾಮಿ ಇವರ ವಿರುದ್ಧ ಅವರು ಹಿಂದೂ ಆಗಿರುವುದರ ಕುರಿತು ಬಹಳಷ್ಟು ಹೇಳಿಕೆಗಳು ನೀಡಿದ್ದಾರೆ. ಕುನ್ನೇಮನ್ ಇವರು, ”ರಾಮಸ್ವಾಮಿ ಇವರ ರೂಪದಲ್ಲಿನ ‘ಹೊಸ ಯುವ ಶಕ್ತಿ’ಯ ಅಪಾಯ ನಮಗಿದೆ. ಆ ವ್ಯಕ್ತಿ ಏನಾದರೂ ಪ್ರಭು ಯೇಸುವಿನ ಸೇವೆ ಮಾಡದಿದ್ದರೇ ನಿಮ್ಮ ಈಶ್ವರ ನಿಮ್ಮ ಮೇಲೆ ಅಪ್ರಸನ್ನನಾಗುವನು. ನೀವು ಏನು ಮಾಡುತ್ತೀರೋ ? ನಾವು ಯಾವ ವ್ಯಕ್ತಿಗೆ ಬೈಬಲ್ ಬದಲು ಇತರ ಯಾವುದೋ ಧರ್ಮ ಗ್ರಂಥದ ಮೇಲೆ ಕೈ ಇಡಲು ಬಿಡುತ್ತೀರಾ ?
೨. ಓಕ್ಲಾಹೋಮಾನ್ ನ ಪಾದ್ರಿ ಜಾನ್ ಬೆನೆಟ್ ಇವರು ರಾಮಸ್ವಾಮಿ ಇವರ ಕುರಿತು ಸುಳ್ಳು ಹೇಳಿಕೆ ನೀಡುತ್ತಾ, ಕ್ರೈಸ್ತರ ಮತಗಳು ಪಡೆಯುವುದಕ್ಕಾಗಿ ರಾಮಸ್ವಾಮಿ ಇವರು ಕ್ರೈಸ್ತರಾಗಿರುವ ದಾವೆ ಮಾಡಿದ್ದಾರೆ ಎಂದು ಹೇಳಿದರು. ನಿಜವೆಂದರೆ ರಾಮಸ್ವಾಮಿ ಇವರು ಈ ರೀತಿ ಎಂದು ದಾವೆ ಮಾಡಿಲ್ಲ.
೩. ‘ದ ನ್ಯೂಯಾರ್ಕ್ ಟೈಮ್ಸ್’ ನಲ್ಲಿ ಪ್ರಕಾಶಿತಗೊಂಡಿರುವ ಒಂದು ಲೇಖನದ ಪ್ರಕಾರ ರಾಮಸ್ವಾಮಿ ಇವರ ನಂತರ ಇರುವ ಎರಡನೆಯ ಸ್ಥಾನದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡಿ. ಸಾಟಿಸ್ ಇವರು ರಾಮಸ್ವಾಮಿ ಇವರಿಗೆ ಅವರ ಧರ್ಮ ಮತ್ತು ಹಿನ್ನೆಲೆ ಇದರ ಬಗ್ಗೆ ಗುರಿ ಮಾಡಬಹುದು. ಇದರ ಮೂಲಕ ಅವರು ಕ್ರೈಸ್ತ ಮೂಲಭೂತವಾದಿಗಳ ಮತ ಪಡೆಯಬಹುದು ಎಂದು ಹೇಳಿದೆ.
ನನಗಾಗಿ ಹಿಂದೂ ಧರ್ಮ ಅಡಚಣೆಯಾಗಿರದೇ ಒಂದು ಅದ್ವಿತೀಯ ಲಾಭವಾಗಿದೆ ! – ವಿವೇಕ ರಾಮಸ್ವಾಮಿ
೧. ರಾಮಸ್ವಾಮಿ ಇವರ ತಾಯಿ-ತಂದೆ ಭಾರತದಿಂದ ಅಮೆರಿಕಾಗೆ ಹೋಗಿ ನೆಲೆಸಿದರು. ರಾಮಸ್ವಾಮಿ ಇವರು ಕೂಡ ತಮ್ಮಲ್ಲಿ ಹಿಂದೂ ಶ್ರದ್ಧೆಯನ್ನು ಉಳಿಸಿಕೊಂಡಿದ್ದಾರೆ.
೨. ಅವರು, ನನಗಾಗಿ ಹಿಂದೂ ಧರ್ಮ ಅಡಚಣೆಯಾಗಿರದೇ ಒಂದು ಅದ್ವಿತೀಯ ಲಾಭವಿದೆ. ನಾನು ಧರ್ಮದ ಪುನರುದ್ಧಾರಕ್ಕಾಗಿ ಯಾವುದೇ ಭಯವಿಲ್ಲದೆ ಎಂದಿಗೂ ನಿಲ್ಲುತ್ತೇನೆ.
೩. ಅವರು ಕೆಲವು ದಿನಗಳ ಹಿಂದೆ ಅಮೇರಿಕಾವು ಭಾರತದ ಜೊತೆಗೆ ಸಹಯೋಗ ಹೆಚ್ಚಿಸುವ ಕುರಿತು ಸಮರ್ಥನೆ ನೀಡಿದ್ದರು. ಅವರು, ಭಾರತ ಮತ್ತು ಅಮೆರಿಕಾ ಇವರಲ್ಲಿ ಅವಿಶ್ವಾಸದ ಸಂಬಂಧವಿದೆ; ಕಾರಣ ಅಮೆರಿಕಾದಿಂದ ಎರಡು ದೇಶಗಳಲ್ಲಿ ವಿಶ್ವಾಸ ಆಧಾರಿತ ಸಂವಾದ ನಡೆದಿಲ್ಲ. ನಾನು ಏನಾದರೂ ನನ್ನ ಕಾರ್ಯದಲ್ಲಿ ಎರಡು ದೇಶದ ವಿಶ್ವಾಸ ಪಡೆಯದೇ ಇದ್ದರೆ, ಆಗ ನಾನು ನನ್ನನ್ನು ವಿಫಲವಾಗಿದ್ದೇನೆ ಎಂದು ತಿಳಿಯುತ್ತೇನೆ ಎಂದು ಹೇಳಿದರು.
೪. ರಾಮಸ್ವಾಮಿ ಇವರು, ಸಮಾಜದಲ್ಲಿ ವಿಭಜನೆಯ ವಿಚಾರ ಇದು ಹಿಂದೂ, ಕ್ರೈಸ್ತ ಅಥವಾ ಜ್ಯೂ ಧರ್ಮದಲ್ಲಿನ ಜನರಲ್ಲಿ ಇಲ್ಲ, ಆದರೆ ಯಾವ ಜನರು ನಿಜವಾದ ಈಶ್ವರನ ಮೇಲೆ ವಿಶ್ವಾಸ ಇಡುತ್ತಾರೆ ಮತ್ತು ಯಾರು ‘ವೋಕಿಜ್ಮ’ (ಕಥಿತ ಉದಾರ ಪ್ರಗತಿಪರರ ವಿಚಾರಧಾರೆ) ಹೆಸರಿನಲ್ಲಿ ಧರ್ಮಕ್ಕೆ ಜಲವಾಯುವಾದ ಮತ್ತು ಸಮಲಿಂಗ ಹೊಸ ವಿಚಾರಧಾರೆಯ ರೂಪದಲ್ಲಿ ಬದಲಾಯಿಸಲು ಪ್ರಯತ್ನ ಮಾಡುತ್ತಾರೆ, ಆದ್ದರಿಂದಲೇ ವಿಭಜನೆ ಆಗುತ್ತಿದೆ ಎಂದು ಅವರ ಅಭಿಪ್ರಾಯವಾಗಿದೆ.
ಸಂಪಾದಕೀಯ ನಿಲುವುಹಿಂದೂಗಳನ್ನೂ ದ್ವೇಷಿಸುವ ಅಮೆರಿಕಾ ! ಹಾಗೆ ನೋಡಿದರೆ, ಅಮೇರಿಕಾದ ಹಿಂದೂ ರಿಪಬ್ಲಿಕನ್ ಪಕ್ಷದ ಮತದಾರರನ್ನು ಸಾಂಪ್ರದಾಯಿಕ ಎಂದು ನಂಬಲಾಗಿದೆ. ಆದ್ದರಿಂದ ಯಾರಾದರೂ ಹಿಂದೂ ವ್ಯಕ್ತಿ ರಾಷ್ಟ್ರಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾದರೆ, ರಾಷ್ಟ್ರವಾದಿ ಎಂದು ತಿಳಿಯುವ ಕ್ರೈಸ್ತ ಪಾದ್ರಿಗೆ ಹೊಟ್ಟೆ ನೋವು ಏಕೆ ? ಇದರಿಂದ ಈ ಪಕ್ಷದ ಹಿಂದುಗಳ ಕುರಿತಾದ ಕಪಟ ಪ್ರೇಮ ಗಮನಕ್ಕೆ ಬರುತ್ತದೆ ! ಹಿಂದೂ ಧರ್ಮದ ಬಗ್ಗೆ ನರ ನರಗಳಲ್ಲಿ ದ್ವೇಷ ತುಂಬಿರುವ ಕಾಂಗ್ರೆಸ್ ಪಕ್ಷ ಎಲ್ಲಿ ಮತ್ತು ವಿವೇಕ ರಾಮಸ್ವಾಮಿ ಇವರಂತಹ ಹಿಂದೂ ಧರ್ಮಪ್ರೇಮಿಯಲ್ಲಿ ? |