ಬಲಾತ್ಕಾರಕ್ಕೆ ವಿರೋಧ, ಮಹಮ್ಮದ್ ಅಬ್ಬಾಸನಿಂದ ಅಪ್ರಾಪ್ತ ನೇಪಾಳಿ ಹಿಂದೂ ಹುಡುಗಿಯ ಹತ್ಯೆ !

ಸಿಲಿಗುಡಿ ( ಬಂಗಾಲ ) ಇಲ್ಲಿಯ ಘಟನೆ !

೨ ಮಹಿಳೆಯರ ಪತಿಯಾಗಿರುವ ಅಬ್ಬಸನ ಬಂಧನ; ಈ ಹಿಂದೆ ಕೂಡ ಒಬ್ಬ ಮಹಿಳೆಯ ಮೇಲೆ ಬಲಾತ್ಕಾರ ಮಾಡಿರುವುದರಿಂದ ಅವನನ್ನು ಬಂಧಿಸಲಾಗಿತ್ತು !

ಅಬ್ಬಾಸನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಮೃತ ಹುಡುಗಿಯ ಕುಟುಂಬದವರು ಆಗ್ರಹಿಸಿದ್ದಾರೆ !

ಸಿಲಿಗುಡಿ (ಬಂಗಾಲ) – ಇಲ್ಲಿಯ ಮಾಟಿಗಾರಾದಲ್ಲಿ ರವೀಂದ್ರ ಪಲ್ಲಿ ಪ್ರದೇಶದ ಶಾಲೆಯ ಸಮವಸ್ತ್ರದಲ್ಲಿ ಓರ್ವ ೧೭ ವರ್ಷದ ನೇಪಾಳಿ ಹಿಂದೂ ಹುಡುಗಿಯ ಶವ ಪತ್ತೆಯಾಗಿದೆ. ಮಹಮ್ಮದ್ ಅಬ್ಬಾಸ್ ಎಂಬ ಕಾಮುಕ ಆಕೆಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ್ದನು. ಅದನ್ನು ವಿರೋಧಿಸಿದ್ದರಿಂದ ಅಬ್ಬಾಸನು ಆಕೆಯ ಮುಖ ಇಟ್ಟಿಗೆಯಿಂದ ಜಜ್ಜ್ ಹತ್ಯೆ ಮಾಡಿದ್ದಾನೆ. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಆಕೆಯ ಶವವನ್ನು ವಶಪಡಿಸಿಕೊಂಡಿದ್ದಾರೆ. ಈ ಹುಡುಗಿ ಹತ್ತಿರದ ನೇಪಾಳಿ ಶಾಲೆಯಲ್ಲಿ ಓದುತ್ತಿದ್ದಳು. ಪೊಲೀಸರು ಅಬ್ಬಾಸನನ್ನು ಬಂಧಿಸಿದ್ದು ಅವನು ತನ್ನ ಅಪರಾಧ ಒಪ್ಪಿಕೊಂಡಿದ್ದಾನೆ. ಸಂತ್ರಸ್ತೆಯ ತಾಯಿ ಮತ್ತು ಸಹೋದರ ಅಬ್ಬಾಸನ ವಿರುದ್ಧ ನ್ಯಾಯಾಲಯದಲ್ಲಿ ತ್ವರಿತವಾಗಿ ಮೊಕದ್ದಮೆ ನಡೆಸಿ ಅವನಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯಿಸಿದ್ದಾರೆ.

೨೨ ವರ್ಷದ ಅಬ್ಬಾಸನಿಗೆ ೨ ಪತ್ನಿಯರು ಇರುವರು. ಈ ಹಿಂದೆ ಕೂಡ ಅವನು ಒಬ್ಬ ಮಹಿಳೆಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಬಂದಿಸಲಾಗಿತ್ತು. ಸಂತ್ರಸ್ತೆ ಶಾಲೆಯಿಂದ ಮನೆಗೆ ಹಿಂತಿರುಗುವಾಗ ಅಬ್ಬಾಸನು ಆಕೆಯನ್ನು ಹಿಂಬಾಲಿಸಿ ಬಲವಂತವಾಗಿ ಹತ್ತಿರದ ನಿರ್ಜನ ಕಟ್ಟಡಕ್ಕೆ ಕರೆದುಕೊಂಡು ಹೋದನು ಮತ್ತು ಆಕೆಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನ ಮಾಡಿದನು. ಆ ಸಮಯದಲ್ಲಿ ಆಕೆ ಕೂಗಾಡಲು ಆರಂಭಿಸಿದ ನಂತರ ಅವನು ಇಟ್ಟಿಗೆಯಿಂದ ಅವಳ ಮುಖ ಜಜ್ಜಿದನು. ಕುಗಾಡುವ ಧ್ವನಿ ಕೇಳಿ ಹತ್ತಿರದ ಜನರು ಘಟನಾ ಸ್ಥಳಕ್ಕೆ ಬಂದರು. ಅಲ್ಲಿ ಆಕೆ ರಕ್ತದ ಮಡುವಿನಲ್ಲಿ ಕಂಡು ಬಂದಳು ಹಾಗೂ ಅಬ್ಬಾಸ್ ಓಡಿ ಹೋಗುತ್ತಿದ್ದನು.

ಈ ಘಟನೆಯ ವಿರುದ್ಧ ಸಿಲಿಗುಡಿ ನಾರಿಶಕ್ತಿ ಮತ್ತು ಬಜರಂಗದಳದ ಕಾರ್ಯಕರ್ತರು ಪೊಲೀಸ ಠಾಣೆಯ ಹೊರಗೆ ಪ್ರತಿಭಟನೆ ನಡೆಸುತ್ತಾ ಅಬ್ಬಾಸನ ವಿರುದ್ಧ ನ್ಯಾಯಾಲಯದಲ್ಲಿ ತ್ವರಿತವಾಗಿ ಮೊಕದ್ದಮೆ ನಡೆಸಲು ಒತ್ತಾಯಿಸಿದ್ದಾರೆ.

‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿರುವ ಬಲತ್ಕಾರಿಗಳಿಗೆ ೨ – ೩ ದಿನದಲ್ಲಿಯೇ ಜಾಮೀನು ದೊರೆಯುತ್ತದೆ ! – ಸಿಲಿಗುಡಿ ನಾರಿಶಕ್ತಿ ಸಂಘಟನೆ

ಹಿಂದೂ ಹುಡುಗಿಯರ ಪ್ರಾಣದ ಯಾವುದೇ ಬೆಲೆ ಇಲ್ಲದೆ ಇರುವ ಮಮತಾ ಬ್ಯಾನರ್ಜಿ ಇವರ ತೃಣಮೂಲ ಕಾಂಗ್ರೆಸ್ಸಿನ ರಾಜ್ಯದಲ್ಲಿ ಇದಕ್ಕಿಂತ ಬೇರೆ ಏನು ಆಗಲು ಸಾಧ್ಯ ?

ಈ ಸಮಯದಲ್ಲಿ ಸಿಲಿಗುಡಿ ನಾರಿಶಕ್ತಿ ಸಂಘಟನೆಯ ಓರ್ವ ವರಿಷ್ಟ ಮಹಿಳಾ ಸದಸ್ಯೆಯು, ಪೊಲೀಸ ಮತ್ತು ನ್ಯಾಯಾಲಯದ ನಿರ್ಲಕ್ಷದಿಂದ ‘ಪೋಕ್ಸೋ’ ಕಾನೂನಿನ ಅಂತರ್ಗತ ಬಂಧಿಸಿರುವ ಬಲಾತ್ಕಾರಿಗಳಿಗೆ ೨- ೩ ದಿನದಲ್ಲಿಯೇ ಜಾಮೀನು ದೊರೆಯುತ್ತದೆ. ಈ ಪ್ರದೇಶದಲ್ಲಿ ಅನೇಕ ಮುಸಲ್ಮಾನ ಜನರು ನೇಪಾಳಿ ಹಿಂದೂ ಹುಡುಗಿಯರನ್ನು ಗುರಿ ಮಾಡುತ್ತಿದ್ದಾರೆ. ಪೊಲೀಸರಿಂದ ಇಂತಹ ಘಟನೆಗಳಲ್ಲಿ ಸಮಯದಲ್ಲಿಯೇ ಕಡಿವಾಣ ಹಾಕದಿದ್ದರೆ, ನಮ್ಮ ಸಂಘಟನೆ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತದೆ ಎಂದು ಹೇಳಿದರು.

ಸಂಪಾದಕರ ನಿಲುವು

* ಬಲಾತ್ಕಾರಿಗಳಿಗೆ ತಕ್ಷಣ ಗಲ್ಲು ಶಿಕ್ಷೆ ವಿಧಿಸುವ ಕಾನೂನು ರೂಪಿಸುವ ಅನಿವಾರ್ಯತೆ ಈಗಲಾದರೂ ಸರಕಾರಿ ವ್ಯವಸ್ಥೆಗೆ ಗಮನಕ್ಕೆ ಬರುವುದೇ ?