ಪಾಕಿಸ್ತಾನಿ ನಾಗರಿಕರು ಚಂದ್ರಯಾನದ ಯಶಸ್ಸಿನ ಬಗ್ಗೆ ಪಾಕಿಸ್ತಾನದ ಬಗ್ಗೆ ವಿಪರ್ಯಾಸದ ಟೀಕೆ
ಇಸ್ಲಾಮಬಾದ (ಪಾಕಿಸ್ತಾನ) – ಭಾರತದ ‘ಚಂದ್ರಯಾನ-3’ ಯಶಸ್ವಿಯಾಗಿ ಇಳಿದ ನಂತರ ಪಾಕಿಸ್ತಾನದಲ್ಲಿ ಕೂಡ ಒಳ್ಳೆಯ ಮತ್ತು ಕೆಟ್ಟದಾದ ಪ್ರತಿಕ್ರಿಯೆ ವ್ಯಕ್ತವಾಗಿವೆ. ಈ ಸಂದರ್ಭದಲ್ಲಿ ಅಲ್ಲಿಯ ಒಂದು ಯೂಟ್ಯೂಬ್ ಚಾನೆಲ್ ನ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಒಬ್ಬ ಪಾಕಿಸ್ತಾನಿ ನಾಗರಿಕ ‘ನಾವು ಚಂದ್ರನ ಮೇಲೆ ವಾಸಿಸುತ್ತಿದ್ದೇವೆ’ ಎಂದು ವಿಪರ್ಯಾಸದ ಹೇಳಿಕೆ ನೀಡುತ್ತಿರುವುದು, ಪಾಕಿಸ್ತಾನವನ್ನೇ ಟೀಕಿಸುತ್ತಿರುವುದು ಕಾಣುತ್ತಿದೆ.
ಈ ನಾಗರಿಕನು, ”ಭಾರತ ಹಣ ಖರ್ಚು ಮಾಡಿ ಚಂದ್ರನ ಮೇಲೆ ಹೋಗುತ್ತಿದೆ; ಆದರೆ ನಾವು ಹಿಂದಿನಿಂದಲೇ ಚಂದ್ರನ ಮೇಲೆ ವಾಸಿಸುತ್ತಿದ್ದೇವೆ; ಕಾರಣ ಚಂದ್ರನ ಮೇಲೆ ನೀರು ಇಲ್ಲ, ಹಾಗೆ ಇಲ್ಲಿಯೂ (ಪಾಕಿಸ್ತಾನದಲ್ಲಿ) ನೀರು ಇಲ್ಲ. ಚಂದ್ರನ ಮೇಲೆ ಗ್ಯಾಸ್ ಇಲ್ಲ, ಹಾಗೆಯೇ ಪಾಕಿಸ್ತಾನದಲ್ಲಿ ಕೂಡ ಗ್ಯಾಸ್ ಇಲ್ಲ. ಚಂದ್ರನ ಮೇಲೆ ವಿದ್ಯುತ್ ಇಲ್ಲ, ಹಾಗೆಯೇ ಇಲ್ಲಿಯೂ ಕೂಡ ವಿದ್ಯುತ್ ಇಲ್ಲ. ಆದ್ದರಿಂದ ನಾವು ಹಿಂದಿನಿಂದಲೇ ಚಂದ್ರನ ಮೇಲೆ ವಾಸಿಸುತ್ತಿದ್ದೇವೆ.’ (ಈಗ ಪಾಕಿಸ್ತಾನದಲ್ಲಿನ ನಾಗರಿಕರು ತಮ್ಮ ‘ಪಾಕಿಸ್ತಾನಿ’ ಎಂದು ಗುರುತು ಹೇಳುತ್ತಿದ್ದಾರೆ; ಆದರೆ ಮುಂದಿನ ಕೆಲವು ವರ್ಷಗಳಲ್ಲಿ ‘ಪಾಕಿಸ್ತಾನ’ ಎಂಬ ದೇಶ ಕೂಡ ಉಳಿಯುವುದಿಲ್ಲ. ಇದು ಅವರು ಗಮನದಲ್ಲಿ ಇಡಬೇಕು ! – ಸಂಪಾದಕರು)
(ಸೌಜನ್ಯ :Hindustan Times)
ಸಂಪಾದಕರ ನಿಲುವು* ಸ್ವಂತ ದೇಶದ ಬಗ್ಗೆ ಈ ರೀತಿ ಲೇವಡಿ ಮಾಡುವ ಸ್ಥಿತಿ ಬರುವವರೆಗೆ ಏನನ್ನು ಮಾಡದಿರುವ ಪಾಕಿಸ್ತಾನಿಗಳೆ ಈ ಹದಗೆಟ್ಟ ಪರಿಸ್ಥಿತಿಗೆ ಕಾರಣ ! |