ಕೊರೋನ ಪೀಡಿತ ಯಾವ ರೋಗಿಗಳಿಗೆ ನಂತರ ತೊಂದರೆ ಆಯಿತೋ, ಅವರ ಸಾವಿನ ಸಾಧ್ಯತೆ ೩ ಪಟ್ಟು ಹೆಚ್ಚಾಗಿದೆ !

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಂಶೋಧನೆ

ನವ ದೆಹಲಿ – ಕೊರೊನಾ ವಾಸಿಯಾಗಿರುವ ರೋಗಿಗಳಿಗೆ ಕೊರೋನ ನಂತರ (ಪೋಸ್ಟ್ ಕೋವಿಡ್) ತೊಂದರೆ ಆಯಿತು, ಅವರ ಮೃತ್ಯುವಿನ ಸಾಧ್ಯತೆ ೩ ಪಟ್ಟು ಹೆಚ್ಚಾಗಿದೆ, ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (‘ಐ.ಸಿ.ಎಂ.ಆರ್.’) ನಿಷ್ಕರ್ಷ ತೆಗೆದಿದೆ. ಹಾಗೂ ಕೊರೋನಾ ಸಂಕ್ರಮಣ ಆಗಿರುವ ಶೇಕಡ ೬.೫ ರಷ್ಟು ಮಧ್ಯಮದಿಂದ ಗಂಭೀರ ರೋಗಿಗಳು ವರ್ಷದಲ್ಲಿಯೇ ಮೃತಪಟ್ಟಿದ್ದಾರೆಂದು ನಿಷ್ಕರ್ಷ ತೆಗೆದಿದೆ. ‘ಯಾರಿಗೆ ಕಡಿಮೆ ಪ್ರಮಾಣದಲ್ಲಿ ಸಂಕ್ರಮಣಕ್ಕೆ ಒಳಗಾದರೋ ಅವರಿಗೆ ಈ ನಿಷ್ಕರ್ಷ ಅನ್ವಯಿಸುವುದಿಲ್ಲ’, ಹೀಗೆ ಐ.ಸಿ.ಎಂ.ಆರ್. ಗೆ ಸಂಬಂಧಿತ ಓರ್ವ ಹಿರಿಯ ಅಧಿಕಾರಿ ಹೇಳಿದರು. ೩೧ ಆಸ್ಪತ್ರೆಗಳಲ್ಲಿನ ೧೪ ಸಾವಿರದ ೪೧೯ ರೋಗಿಗಳ ಸಂಶೋಧನೆಯಿಂದ ಈ ನಿಷ್ಕರ್ಷ ತೆಗೆಯಲಾದಿಗೆ. ‘ಇಂಡಿಯನ್ ಎಕ್ಸ್ಪ್ರೆಸ್’ ಇದರ ಸಂದರ್ಭದಲ್ಲಿ ವಾರ್ತೆ ಪ್ರಸಾರ ಮಾಡಿದೆ.

೧. ಈ ಸಂಶೋಧನೆಯಿಂದ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ೬೦ ವಯಸ್ಸಿನ ಮೇಲ್ಪಟ್ಟ ಪುರುಷರಲ್ಲಿ ವರ್ಷದಲ್ಲಿ ಮೃತ್ಯುವಿನ ಅಪಾಯ ಹೆಚ್ಚಾಗಿತ್ತು. ಕೊರೊನಾದಿಂದ ವಾಸಿ ಆದ ನಂತರ ಯಾರು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರೂ, ಅವರ ಮೃತ್ಯುವಿನ ಅಪಾಯ ಶೇಕಡ ೪೦ ರಷ್ಟು ಕಡಿಮೆ ಆಗಿತ್ತು.

೨. ಐ.ಸಿ.ಎಂ.ಆರ್.ನ ಅಧಿಕಾರಿಗಳು, ಕೊರೊನಾದ ಜೊತೆಗೆ ಬೇರೆ ಕಾಯಿಲೆ ಇರುವ ರೋಗಿಗಳ ಸಾವು ಕೋವಿಡದಿಂದ ಸಂಭವಿಸುತ್ತದೆ. ಇದರ ಅರ್ಥ ಪಿತ್ತಕೋಶ ಮತ್ತು ಮೂತ್ರಪಿಂಡಕ್ಕೆ ಸಂಬಂಧ ಪಟ್ಟ ಕಾಯಿಲೆಗಳಲ್ಲಿ ಜನರು ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯಕವಾಗಿದೆ.

೩. ಕೊರೋನಾದ ಸಂಕ್ರಮಣದಿಂದ ದೀರ್ಘಕಾಲದವರೆಗೆ ಉರಿ, ಅನೇಕ ಅವಯವಗಳ ನಿಷ್ಕ್ರಿಯತೆ, ಶ್ವಾಸಕೋಶದ ನಿಷ್ಕ್ರಿಯತೆಯಿಂದ ಈ ಸಾವು ಆಗಿರಬಹುದು, ಎಂದೂ ಕೂಡ ಈ ಸಂಶೋಧನೆಯಲ್ಲಿ ಹೇಳಲಾಗಿದೆ.