ಸ್ವಾರ್ಥದಿಂದ ತುಂಬಿ ತುಳುಕುತ್ತಿರುವ ಅಮೇರಿಕಾದ ಮಾಜಿ ಅಧ್ಯಕ್ಷರಿಂದ ಭಾರತಕ್ಕೆ ಬೆದರಿಕೆ !ಅಮೇರಿಕಾದಲ್ಲಿ ಭಾರತೀಯ ಉತ್ಪಾದನೆಗಳನ್ನು ಕನಿಷ್ಠ ತೆರಿಗೆಯೊಂದಿಗೆ ಮಾರಾಟ ಮಾಡುತ್ತಿರುವ ಪ್ರಕರಣ |
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಮತ್ತೊಮ್ಮೆ ಅಮೇರಿಕಾದಲ್ಲಿ ಭಾರತದ ಉತ್ಪನ್ನಗಳ ಮೇಲೆ ವಿಧಿಸಲಾಗುವ ಹೆಚ್ಚಿನ ತೆರಿಗೆಯ ಅಂಶವನ್ನು ಎತ್ತಿದ್ದಾರೆ. ಅವರು ಭಾರತಕ್ಕೆ ಎಚ್ಚರಿಕೆಯನ್ನು ನೀಡುತ್ತಾ, ಮುಂದಿನ ವರ್ಷ ನಾನು ಅಧಿಕಾರಕ್ಕೆ ಬಂದ ನಂತರ ಭಾರತಕ್ಕೆ ತೆರಿಗೆ ವಿಧಿಸುವೆ. ಇದನ್ನು ನೀವು ಸೇಡು ಎನ್ನಿರಿ ಅಥವಾ ಇನ್ನೇನಾದರೂ ಕರೆಯಿರಿ ! ಎಂದು ಹೇಳಿದರು. ಟ್ರಂಪ್ ಅವರು ರಾಷ್ಟ್ರಾಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರತವನ್ನು ‘ತೆರಿಗೆ ರಾಜಾ’ ಎಂದು ಹೇಳಿದ್ದರು. ‘ಭಾರತ ಅಮೇರಿಕೆಗೆ ತನ್ನ ಮಾರುಕಟ್ಟೆಗಳನ್ನು ನ್ಯಾಯಯುತ ಮತ್ತು ಸಮಂಜಸವಾದ ರೀತಿಯಲ್ಲಿ ತಲುಪಲು ಅವಕಾಶ ನೀಡಿಲ್ಲ’ ಎಂದು ಅವರು ಈ ಹಿಂದೆ ಟೀಕಿಸಿದ್ದರು.
Trump Warns Of Reciprocal Tax On India If Elected US President Againhttps://t.co/RqLC7gcY6t
— ABP LIVE (@abplive) August 21, 2023
ಟ್ರಂಪ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ,
1. ಅಮೇರಿಕಾವು ಭಾರತಕ್ಕೆ ತೆರಿಗೆಗಳಲ್ಲಿ ಅನೇಕ ವಿನಾಯಿತಿಗಳನ್ನು ನೀಡಿದೆ, ಆದರೆ ಭಾರತ ಅಮೇರಿಕಾದ ಉತ್ಪಾದನೆಗಳ ಮೇಲೆ ಅಧಿಕ ತೆರಿಗೆಯನ್ನು ವಿಧಿಸುತ್ತದೆ. ಎರಡೂ ದೇಶಗಳಿಂದ ಏಕರೂಪದ ತೆರಿಗೆಯನ್ನು ವಿಧಿಸಬೇಕು.
2. `ಹಾರ್ಲೆ ಡೇವಿಡ್ಸನ್’ ಈ ಬೈಕ್ಗಳ ಮಾರಾಟದ ಮೇಲೆ ಭಾರತ ಭಾರಿ ತೆರಿಗೆಯನ್ನು ವಿಧಿಸುತ್ತದೆ. ಮತ್ತೊಂದೆಡೆ, ಭಾರತೀಯ ಬೈಕ್ ಗಳಿಗೆ ಯಾವುದೇ ತೆರಿಗೆ ಇಲ್ಲದೆ ಅಮೇರಿಕಾದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದರು.
ಸಂಪಾದಕರ ನಿಲುವು* ಅಮೇರಿಕಾದ ಇಂತಹ ಗೂಂಡಾಗಿರಿಗೆ ಭಾರತ ಸೊಪ್ಪು ಹಾಕುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ ! ಭಾರತದ ಮಾರುಕಟ್ಟೆ ಅಮೇರಿಕೆಗೆ ಬೇಕು ಎನ್ನುವುದು ಭಾರತಕ್ಕೆ ತಿಳಿದಿದೆ ! |