ನೇಪಾಳವನ್ನು ಹಿಂದೂ ರಾಷ್ಟ್ರ ನಿರ್ಮಾಣ ಬಗ್ಗೆ ನೀಡಿದ್ದ ಹೇಳಿಕೆ !
ಕಟ್ಮಾಂಡು (ನೇಪಾಳ) – ನೇಪಾಳದ ಪ್ರವಾಸದಲ್ಲಿರುವ ಮಧ್ಯಪ್ರದೇಶದಲ್ಲಿನ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರನ್ನು ಭೇಟಿ ಮಾಡಲು ನೇಪಾಳದ ರಾಷ್ಟ್ರಪತಿ ರಾಮಚಂದ್ರ ಪೌಡೆಲ ಮತ್ತು ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರು ನೇಪಾಳದಲ್ಲಿನ ಅವರ ಪ್ರವಚನದಲ್ಲಿ ನೇಪಾಳವನ್ನು ಮತ್ತೆ ಹಿಂದೂ ರಾಷ್ಟ್ರ ಮಾಡುವುದಾಗಿ ಹೇಳಿಕೆ ನೀಡಿದ್ದರು. ಇದರ ಬಗ್ಗೆ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಇವರು ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರನ್ನು ಭೇಟಿ ಮಾಡಲು ನಿರಾಕರಿಸಿರುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ನೇಪಾಳದಲ್ಲಿ ಹಿಂದೂದ್ವೇಷ ಕಮ್ಯುನಿಸ್ಟ್ ಪಾರ್ಟಿಯ ಸರಕಾರ ಇದೆ.
बागेश्वर बाबा ने नेपाल में भरी हिंदू राष्ट्र की हुंकार, चिढ़ी सरकार#bababageshwar #DhirendraShastri #Nepal https://t.co/mrELTLuKuQ
— Zee News (@ZeeNews) August 21, 2023
ಪ್ರಧಾನಮಂತ್ರಿ ಪ್ರಚಂಡ ಇವರು ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿಯವರನ್ನು ಭೇಟಿಯಾಗುವ ಕಾರ್ಯಕ್ರಮವಿತ್ತು; ಆದರೆ ನಂತರ ಬಿಡುವಿಲ್ಲದ ಕಾರಣ ನೀಡುತ್ತಾ ಪ್ರಚಂಡ ಇವರು ಭೇಟಿಯನ್ನು ನಿರಾಕರಿಸಿದರು. ಈ ಮೊದಲು ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಇವರನ್ನು ಭೇಟಿಯಾಗುವ ನಿಯೋಜನೆ ಇತ್ತು; ಆದರೆ ಪೌಡೆಲ್ ಇವರ ಅನಾರೋಗ್ಯದ ಕಾರಣ ಹೇಳಿ ಭೇಟಿಯನ್ನು ನಿರಾಕರಿಸಿದರು.
ನಾನು ಯಾರ ವಿರೋಧಿಯಾಗಿರದೇ ಸನಾತನ ಧರ್ಮದ ಬೆಂಬಲಿಗನಾಗಿದ್ದೇನೆ ! – ಧೀರೇಂದ್ರ ಕೃಷ್ಣ ಶಾಸ್ತ್ರಿ
ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರು ಶಾಶ್ವತಧಾಮದಲ್ಲಿನ ಒಂದು ಪ್ರವಚನದಲ್ಲಿ, ನೇಪಾಳ ಮತ್ತೆ ಹಿಂದೂ ರಾಷ್ಟ್ರ ಆಗಬೇಕು ಮತ್ತು ಸನಾತನ ಧರ್ಮದ ಪತಾಕೆ ಅಲ್ಲಿ ಯಾವಾಗಲೂ ಹಾರಾಡಬೇಕು. ನಾನು ಯಾರ ವಿರೋಧಿಯೂ ಅಲ್ಲ; ನಾನು ಕೇವಲ ಸನಾತನ ಧರ್ಮದ ಬೆಂಬಲಿಗನಾಗಿದ್ದೇನೆ. ನೇಪಾಳ ನಮ್ಮ ಆತ್ಮವಾಗಿದೆ. ಒಂದು ದಿನ ಸಂಪೂರ್ಣ ಜಗತ್ತಿನಲ್ಲಿ ನೇಪಾಳ ಅದರ ಡಂಗೂರ ಸಾರಲಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುನೇಪಾಳದಲ್ಲಿ ಕಮಿನಿಸ್ಟ್ ಸರಕಾರ ಇರುವುದರಿಂದ ಅವರಿಗೆ ಹಿಂದೂ ಮತ್ತು ಹಿಂದೂ ರಾಷ್ಟ್ರದ ಅಲರ್ಜಿ ಇದೆ. ಆದ್ದರಿಂದ ಅವರು ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರನ್ನು ಭೇಟಿ ಮಾಡುವುದಕ್ಕೆ ನಿರಾಕರಿಸಿರುವುದರಲ್ಲಿ ಆಶ್ಚರ್ಯ ಏನೂ ಇಲ್ಲ ! ನೇಪಾಳದಲ್ಲಿನ ಹಿಂದೂ ಜನರು ಜಾಗೃತವಾಗಿ ಸಂಘಟಿತರಾಗಿ ಚೀನಾದ ಬಲೆಯಿಂದ ನೇಪಾಳವನ್ನು ಬಿಡಿಸಲು ಪ್ರಯತ್ನ ಮಾಡಬೇಕು ಆಗಲೇ ಅಲ್ಲಿಯ ಸ್ಥಿತಿ ಬದಲಾಗುವುದು ! |