ಬ್ರಿಟನ್‌ನಲ್ಲಿ 7 ನವಜಾತ ಶಿಶುಗಳ ಹತ್ಯೆಯ ಪ್ರಕರಣದಲ್ಲಿ ನರ್ಸ್ ತಪ್ಪಿತಸ್ಥೆ

ಲಂಡನ್ (ಬ್ರಿಟನ್) – ಬ್ರಿಟನ್ ನ ನ್ಯಾಯಾಲಯವು ನರ್ಸ್ ಲೂಸಿ ಲೆಟಬಿ (ವಯಸ್ಸು 33 ವರ್ಷಗಳು) ಇವಳನ್ನು 7 ನವಜಾತ ಶಿಶುಗಳ ಹತ್ಯೆ ಮತ್ತು ಇತರ 6 ಮಕ್ಕಳ ಹತ್ಯೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿದೆ. ಲೂಸಿಗೆ ಆಗಸ್ಟ್ 21 ರಂದು ಶಿಕ್ಷೆಯನ್ನು ವಿಧಿಸಲಿದೆ. ಯಾವ ಮಕ್ಕಳ ಹತ್ಯೆಯ ಪ್ರಕರಣದಲ್ಲಿ ಲೂಸಿಯನ್ನು ದೋಷಿಯೆಂದು ನಿರ್ಧರಿಸಲಾಗಿದೆಯೋ, ಅವರಲ್ಲಿ ಕೆಲವು ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರು, ಕೆಲವರು ಅಕಾಲಿಕವಾಗಿ ಜನಿಸಿದವರಾಗಿದ್ದರು. ಅವಳು ಜೂನ್ 2015 ಮತ್ತು ಜೂನ್ 2016 ರ ಕಾಲಾವಧಿಯಲ್ಲಿ ವಾಯುವ್ಯ ಇಂಗ್ಲೆಂಡ್‌ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ಹತ್ಯೆ ಮಾಡಿದ್ದಳು. ಆಕೆಯನ್ನು ಇದುವರೆಗೆ 3 ಬಾರಿ ಬಂಧಿಸಲಾಗಿದೆ. ಲೂಸಿಯ ಮನೆಯಲ್ಲಿ ಪೊಲೀಸರಿಗೆ ಒಂದು ಚೀಟಿ ಸಿಕ್ಕಿದೆ. ಚೀಟಿಯಲ್ಲಿ ಮೇಲೆ ‘ನಾನು ದುಷ್ಟಳಾಗಿದ್ದೇನೆ, ನಾನೇ ಇದನ್ನು ಮಾಡಿದ್ದೇನೆ’ ಎಂದು ಬರೆದಿದ್ದಳು.