|
ಬೆಂಗಳೂರು – ಇಲ್ಲಿಯ ನೇಹಾ ಅಲಿಯಾಸ್ ಮೆಹರ್ ಮತ್ತು ಆಕೆಯ ಮುಸಲ್ಮಾನ ಸಹಚರ ಸೇರಿಕೊಂಡು ೧೨ ಹಿಂದೂ ಪುರುಷರನ್ನು ಬಲೆಗೆ ಸಿಲುಕಿಸಿ ಮತಾಂತರ, ಸುನ್ನತ ಮತ್ತು ವಿವಾಹ ಮಾಡಿಕೊಳ್ಳುವ ಷಡ್ಯಂತ್ರ ರಚಿಸಲಾಗಿತ್ತು. ಒಬ್ಬ ಸಂತ್ರಸ್ತ ಇಂಜಿನಿಯರ್ ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಮೂರು ಜನರನ್ನು ಬಂಧಿಸಲಾಯಿತು. ಹಾಗೂ ‘ಮಾಡೆಲ್’ ಆಗಿರುವ ಮೆಹೆರ್ ಪರಾರಿಯಾಗಿದ್ದಳು. ಬೆಂಗಳೂರು ಪೊಲೀಸರು ಆಗಸ್ಟ್ ೧೬ ರಂದು ಆಕೆಯನ್ನು ಬಂಧಿಸಿದ್ದಾರೆ.
Karnataka: Mumbai-based model arrested in honey trapping case involving extortion and threats in Bengaluru – https://t.co/S9N2zveWSk
— PGurus (@pGurus1) August 16, 2023
೧. ಮೂಲತಃ ಮುಂಬಯಿಯ ಮೆಹೆರ್ ಕಥಿತ ‘ಮಾಡೆಲ್’ ೨೦ ರಿಂದ ೫೦ ವರ್ಷದ ಹಿಂದೂ ಪುರುಷರನ್ನು ಟೆಲಿಗ್ರಾಂ ಮೂಲಕ ಪ್ರೀತಿಯ ಬಲೆಗೆ ಸಿಲುಕಿಸುತ್ತಿದ್ದಳು. ಅವಳು ತನ್ನ ಪರಿಚಯ ‘ನೇಹ’ ಎಂದು ಹೇಳುತ್ತಿದ್ದಳು.
೨. ಮುಂದೆ ಆಕೆ ಅವರ ಜೊತೆಗೆ ಶಾರೀರಿಕ ಸಂಬಂಧ ಬೆಳೆಸಲು ಅವಳ ಬೆಂಗಳೂರಿನ ಜೆಪಿ ನಗರದಲ್ಲಿ ಇರುವ ತನ್ನ ಮನೆಗೆ ಕರೆಸುತ್ತಿದ್ದಳು. ತುಂಡು ಬಟ್ಟೆ ಧರಿಸಿ ಮೆಹರ್ ಪುರುಷರನ್ನು ಬಲವಂತವಾಗಿ ಹತ್ತಿರ ಎಳೆದು ಅವರ ಜೊತೆಗೆ ಅಶ್ಲೀಲ ಹಾವಭಾವದಲ್ಲಿ ವರ್ತಿಸುತ್ತಿದ್ದಳು. ಆ ಸಮಯದಲ್ಲಿ ಮನೆಯಲ್ಲಿ ಅಡಗಿ ಕುಳಿತಿರುವ ಮೇಹರನ ಸಹಚರ ಆ ಛಾಯಾ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದರು.
೩. ಅದರ ನಂತರ ತಕ್ಷಣ ಮೇಹರ್ ಮತ್ತು ಆಕೆಯ ಸಹಚರ ಸಂತ್ರಸ್ತ ಪುರುಷನ ಮೊಬೈಲ್ ಕಸಿದುಕೊಂಡು ಅದರಲ್ಲಿನ ಅವರ ಕುಟುಂಬದವರ ಮತ್ತು ಸ್ನೇಹಿತರ ಫೋನ್ ನಂಬರ್ ಗಳನ್ನು ಪಡೆಯುತ್ತಿದ್ದರು. ಅದರ ನಂತರ ಪುರುಷರನ್ನು ಬೆದರಿಸುವ ಕೆಲಸ ಆರಂಭಿಸುತ್ತಿದ್ದರು.
೪. ‘ಮೇಹಾರ್ ಇವಳು ಮುಸಲ್ಮಾನ ಆಗಿದ್ದು ಆಕೆಯ ಜೊತೆ ನೀನು ‘ವಿವಾಹ’ ಮಾಡಿಕೊಳ್ಳದಿದ್ದರೆ ಸಂಬಂಧಿಕರಿಗೆ ನಿನ್ನ ಅಶ್ಲೀಲ ಛಾಯಾ ಚಿತ್ರಗಳನ್ನು ಕಳಿಸುವೆವು. ಹಾಗೂ ಮೆಹರ್ ಈಗೆ ಮುಸಲ್ಮಾನ ಆಗಿರುವುದರಿಂದ ನೀನು ಇಸ್ಲಾಂ ಸ್ವೀಕರಿಸಿ ಸುನ್ನತ ಮಾಡಿಕೊಳ್ಳಬೇಕು’, ಈ ರೀತಿ ಸಂತ್ರಸ್ತ ಪುರುಷರ ಮೇಲೆ ಒತ್ತಡ ಹೇರುತ್ತಿದ್ದರು. ಆ ಸಮಯದಲ್ಲಿ ಸಂತ್ರಸ್ತ ಪುರುಷರು ಆಕೆಯಿಂದ ಬಿಡುಗಡೆ ಪಡೆಯುವುದಕ್ಕಾಗಿ ಆಕೆಗೆ ಕೇಳಿದಷ್ಟು ಹಣ ನೀಡುತ್ತಿದ್ದರು.
೫. ಒಬ್ಬ ಯುವಕ ಈ ಗುಂಪಿನ ಮುಖವಾಡ ಕಳಚಿದನು. ಅವನು ಧೈರ್ಯ ತೋರಿಸಿ ಪೊಲೀಸರಿಗೆ ದೂರು ನೀಡಿದನು. ಇದರಿಂದ ಅಬ್ದುಲ್ ಖಾದರ್, ಯಾಸೀನ್ ಮತ್ತು ಇನ್ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ನದೀಮ ಎಂಬ ಆರೋಪಿಯನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ.
‘Model’ Meher arrested by Karnataka Police for running sextortion racket, forcing men to convert to Islam & undergo circumcision, aides Sharana, Abdul, Yasin also nabbedhttps://t.co/sgyebLPiHD
— OpIndia.com (@OpIndia_com) August 17, 2023
ಸಂಪಾದಕೀಯ ನಿಲುವು‘ಭಗವಾ ಲವ್ ಟ್ರಾಪ್’ ಇಂತಹ ಷಡ್ಯಂತ್ರಗಳನ್ನು ರೂಪಿಸಿ ಹಿಂದೂ ಪುರುಷರನ್ನು ಮುಸಲ್ಮಾನ ಮಹಿಳೆಯರ ಪತಿ ಅಥವಾ ಪ್ರಿಯಕರನೆಂದು ಅವರ ಮೇಲೆ ನಿಯೋಜಿತ ದಾಳಿ ನಡೆಸುವ ಮತಾಂಧ ಮುಸಲ್ಮಾನರು ಈಗ ಈ ರೀತಿಯ ಕೃತ್ಯವೆಸಗಿ ಅವರ ಜೀವನ ಹಾಳುಮಾಡಲು ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ. ನಾಳೆ ಲವ್ ಜಿಹಾದ್ ನ ವಿರೋಧದಲ್ಲಿ ದೇಶಾದ್ಯಂತ ಕಾನೂನು ಜಾರಿಯಾದರೆ ಆಗ ಇಂತಹ ಪ್ರಕರಣಗಳನ್ನು ಸರಕಾರ ಹೇಗೆ ಅಂಕುಶವಿಡಬಹುದು ? ಹಿಂದೂ ಸಮಾಜವು ಸಾಧನೆ ಮಾಡದೇ ಇರುವುದರಿಂದ ರಜ ತಮದ ಹಳ್ಳದಲ್ಲಿ ಬೀಳುತ್ತಿದ್ದಾರೆ. ಇಂತಹ ಮತ್ತೆ ಮತ್ತೆ ಘಟಿಸುತ್ತಿರುವ ಘಟನೆಗಳು ತಿಳಿಸಿಕೊಡುತ್ತಿದೆ. ಆದ್ದರಿಂದ ಈಗ ಷಡ್ಯಂತ್ರಕಾರಿ ಜಿಹಾದಿಗಳಿಂದ ಸ್ವಂತದ ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಕೇವಲ ಹಿಂದೂ ಮಹಿಳೆಯರು ಅಷ್ಟೇ ಅಲ್ಲದೆ, ಪುರುಷರು ಕೂಡ ಸಾಧನೆ ಮಾಡುವುದು ಅತ್ಯಾವಶ್ಯಕವಾಗಿದೆ, ಇದನ್ನು ತಿಳಿದುಕೊಳ್ಳಿ ! |