ಪ್ರಧಾನಿಯನ್ನು ಅವಮಾನಿಸಿದ ಶಿಕ್ಷಕ ಕರಣ್ ಸಾಂಗ್ವಾನ್ ಇವರು ‘ಅನ್ ಅಕಾಡೆಮಿ’ ಸಂಸ್ಥೆಯಿಂದ ವಜಾ !

‘ವಿದ್ಯಾವಂತ ಅಭ್ಯರ್ಥಿಗಳಿಗೆ ಮತ ನೀಡಿ’ ಎಂದು ಶಿಕ್ಷಕನು ವಿದ್ಯಾರ್ಥಿಗಳಿಗೆ ಹೇಳುವ ಮೂಲಕ ಪ್ರಧಾನಿ ಮೋದಿಯವರನ್ನು ಟೀಕಿಸಿದ ಪ್ರಕರಣ

ಕಾನೂನು ವ್ಯವಹಾರಗಳ ಶಿಕ್ಷಕ ಕರಣ್ ಸಾಂಗ್ವಾನ್

ನವ ದೆಹಲಿ – ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವ ‘ಅನ್ ಅಕಾಡೆಮಿ’ಯ ಶಿಕ್ಷಕ ಕರಣ್ ಸಾಂಗ್ವಾನ್ ಕೆಲ ದಿನಗಳ ಹಿಂದೆ, ‘ವಿದ್ಯಾವಂತ ಅಭ್ಯರ್ಥಿಗಳಿಗೆ ಮತ ನೀಡಿ. ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಯನ್ನು ಆರಿಸಿ ತನ್ನಿರಿ’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಸಾಂಗ್ವಾನ್ ನ ಗುರಿ ಪ್ರಧಾನಿ ಮೋದಿಯವರ ಮೇಲೆ ಇತ್ತು ಎಂದು ಹೇಳಲಾಗುತ್ತಿದೆ. ಇದರಿಂದ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ವಿಷಯದ ಗಂಭೀರತೆಯನ್ನು ಕಂಡು ‘ಅನ್ ಅಕಾಡೆಮಿ’ಯು ಸಾಂಗ್ವಾನ್ ಅವರನ್ನು ವಜಾಗೊಳಿಸಿತು.

(ಸೌಜನ್ಯ -NDTV)

ಸಂಸ್ಥೆಯ ಸಹಸಂಸ್ಥಾಪಕ ರೋಮನ ಸೈನಿ ಇವರು, ಈ ರೀತಿ ವೈಯಕ್ತಿಕ ನಿಲುವನ್ನು ವಿದ್ಯಾರ್ಥಿಗಳಿಗೆ ಮಂಡಿಸುವುದು ತಪ್ಪು. ನಾವು ಶಿಕ್ಷಣದ ವೇದಿಕೆಯಾಗಿದ್ದೇವೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಬದ್ಧತೆಯಾಗಿದೆ. ತರಗತಿಯು ಕೆಲವು ವೈಯಕ್ತಿಕ ಅಭಿಪ್ರಾಯಗಳನ್ನು ಪ್ರಸಾರ ಮಾಡುವ ಸ್ಥಳವಾಗಿರುವುದಿಲ್ಲ. ಅಂತೆಯೇ ಆಗಸ್ಟ್ 19 ರಂದು ರಾತ್ರಿ 8 ಗಂಟೆಗೆ ಕರಣ್ ಸಾಂಗ್ವಾನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶೇಷ ನಿಲುವನ್ನು ಮಂಡಿಸಲಿದ್ದಾರೆ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.