ನೂಹ (ಹರಿಯಾಣಾ)ನ ಹಿಂಸಾಚಾರ ಪ್ರಕರಣ
ನೂಹ (ಹರಿಯಾಣ) – ಇಲ್ಲಿ ಜುಲೈ 31 ರಂದು ಬ್ರಜಮಂಡಲ ಜಲಾಭಿಷೇಕ ಯಾತ್ರೆಯ ಸಮಯದಲ್ಲಿ ಮತಾಂಧ ಮುಸ್ಲಿಮರು ಮಾಡಿದ ಹಿಂಸಾಚಾರದ ಪ್ರಕರಣದಲ್ಲಿ ಪೋಲಿಸರು ನಹ್ಲಡ ಊರಿನ ಮಹಮದ ಪುರಿಯಾ ಈ ಮಸೀದಿಯ ಇಮಾಮನ ವಿರುದ್ಧ ಅಪರಾಧ ದಾಖಲಿಸಿದ್ದಾರೆ. ಫಜರೂ ಮಿಯಾ ಎಂಬ ಹೆಸರಿನ ಈ ಇಮಾಮನು ಜುಲೈ ೩೧ ರಂದು ಮಸೀದಿಯ ಧ್ವನಿವರ್ಧಕದ ಮೂಲಕ ‘ಹಿಂದುಗಳು ಇಲ್ಲಿಯ ನಹ್ಲಡ ದೇವಸ್ಥಾನದ ಹತ್ತಿರ ಇರುವ ಮುಸ್ಲಿಮರ ಅಂಗಡಿಗಳನ್ನು ಲೂಟಿಮಾಡುತ್ತಿದ್ದಾರೆ’, ಹೀಗೆ ಸುಳ್ಳು ಹೇಳಿದನು. ಆನಂತರ ಮುಸ್ಲೀಮ ಯುವಕರು ಬಹಳಷ್ಟು ಸಂಖ್ಯೆಯಲ್ಲಿ ಅಲ್ಲಿ ಒಟ್ಟುಗೂಡಿ ಹಿಂದುಗಳ ವಾಹನಗಳಿಗೆ ಬೆಂಕಿ ಹಚ್ಚಿದರು ಹಾಗು ಹಿಂದುಗಳ ಅಂಗಡಿಗಳನ್ನು ಲೂಟಿ ಮಾಡಿದರು.
मस्जिद में लगे लाउड स्पीकर से इमाम ने फैलाई थी दुकान लूटने की अफवाह, पुलिस ने बनाया आरोपित #NuhViolence #Nuh #SpreadRumor #Mosque #Haryanahttps://t.co/znsPcra5lP
— Dainik Jagran (@JagranNews) August 17, 2023
ಸಂಪಾದಕೀಯ ನಿಲುವುಮಸೀದಿಯ ಧ್ವನಿವರ್ಧಕದ ಉಪಯೋಗ ಹೇಗೆ ಮಾಡಲಾಗುತ್ತದೆ ಮತ್ತು ಭವಿಷ್ಯದಲ್ಲಿ ಹಿಂದುಗಳ ವಿರುದ್ಧ ಏನು ನಡೆಯಲಿದೆ ?, ಎಂಬುವುದು ಇದರಿಂದ ತಿಳಿದು ಬರುತ್ತದೆ. ಆದ್ದರಿಂದ ದೇಶದ ಎಲ್ಲ ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆಗೆಯುವುದು ಎಷ್ಟು ಅವಶ್ಯಕವಾಗಿದೆ ?, ಎಂಬುವುದನ್ನು ಪೋಲೀಸ ಮತ್ತು ಆಡಳಿತವು ತಿಳಿದುಕೊಳ್ಳಬೇಕು ! ೧೯೯೦ ರಲ್ಲಿ ಕಾಶ್ಮೀರನಲ್ಲಿ ಮಸೀದಿಯ ಧ್ವನಿವರ್ಧಕಗಳ ಮೂಲಕವೇ ‘ಹಿಂದು ಪುರುಷರು ತಮ್ಮ ಹೆಂಡತಿ ಮತ್ತು ಆಸ್ತಿಯನ್ನು ಬಿಟ್ಟು ಕಾಶ್ಮೀರದಿಂದ ತೊಲಗಬೇಕು’ ಎಂದು ಬೆದರಿಕೆ ಕೊಡಲಾಗಿತ್ತು, ಇದು ಹಿಂದುಗಳು ಮರೆಯಬಾರದು ! |