ಸಹಜವಾಗಿ ಯೋಗಸಾಧನೆ ಮಾಡಿಸುವ ಸಂಸ್ಕೃತ ಭಾಷೆ !

ಆಗಸ್ಟ್ ೩೦ ರಂದು ಇರುವ ‘ಸಂಸ್ಕೃತದಿನ’ದ ನಿಮಿತ್ತ …

ಕೆಳಗೆ ಕೊಟ್ಟ ಸಂಸ್ಕೃತ ಭಾಷೆಯ ವೈಶಿಷ್ಟ್ಯಗಳು ಇತರ ಎಲ್ಲ ಭಾಷೆಗಳಿಗಿಂತ ಶ್ರೇಷ್ಠವಾಗಿದೆ.

೧. ಅನುಸ್ವಾರ (ಅಂ) ಮತ್ತು ವಿಸರ್ಗ (ಅಃ)

ಅನುಸ್ವಾರ ಮತ್ತು ವಿಸರ್ಗವು ಸಂಸ್ಕೃತ ಭಾಷೆಯ ಮಹತ್ವಪೂರ್ಣ ಮತ್ತು ಲಾಭದಾಯಕ ವ್ಯವಸ್ಥೆಯಾಗಿದೆ !

೧ ಅ. ವಿಸರ್ಗಾಂತ ಶಬ್ದಗಳು : ಪುಲ್ಲಿಂಗದಲ್ಲಿ ಹೆಚ್ಚಿನ ಶಬ್ದಗಳು ವಿಸರ್ಗಾಂತವಿರುತ್ತವೆ. ಉದಾಹರಣೆಗೆ ರಾಮಃ, ಬಾಲಕಃ, ಹರಿಃ, ಭಾನುಃ

೧ ಆ. ಅನುಸ್ವರಾಂತ ಶಬ್ದಗಳು : ನಪುಂಸಕ ಲಿಂಗದಲ್ಲಿ ಹೆಚ್ಚಿನ ಶಬ್ದಗಳು ಅನುಸ್ವರಾಂತವಾಗಿರುತ್ತವೆ. ಉದಾಹರಣೆಗೆ ಜಲಂ, ವನಂ, ಫಲಂ, ಪುಷ್ಪಂ

೨. ವಿಸರ್ಗ ಮತ್ತು ಅನುಸ್ವಾರ ಇವುಗಳಿಗೆ ಪ್ರಾಣಾಯಾಮದೊಂದಿಗೆ ನಿಕಟ ಸಂಬಂಧವಿರುವುದು

೨ ಅ. ಸಂಸ್ಕೃತದಲ್ಲಿ ‘ವಿಸರ್ಗ’ವನ್ನು ಉಚ್ಚರಿಸುವುದರಿಂದ ಸಹಜವಾಗಿ ‘ಕಪಾಲಭಾತಿ ಪ್ರಾಣಾಯಾಮ’ದ ಲಾಭವಾಗುತ್ತದೆ : ಸಂಸ್ಕೃತದಲ್ಲಿ ‘ವಿಸರ್ಗ’ವನ್ನು ಉಚ್ಚರಿಸುವುದರಿಂದ ಮತ್ತು ‘ಕಪಾಲಭಾತಿ ಪ್ರಾಣಾಯಾಮ’ ಈ ಎರಡರಲ್ಲಿಯೂ ಉಸಿರನ್ನು (ಶ್ವಾಸ) ಹೊರಗೆ ತಳ್ಳಲಾಗುತ್ತದೆ. ಅಂದರೆ ಎಷ್ಟು ಬಾರಿ ವಿಸರ್ಗವನ್ನು ಉಚ್ಚರಿಸುತ್ತೇವೆಯೋ, ಅಷ್ಟು ಬಾರಿ ಸಹಜವಾಗಿ ಕಪಾಲಭಾತಿ ಪ್ರಾಣಾಯಾಮ ಆಗುತ್ತದೆ. ಅದು ಕೇವಲ ಸಂಸ್ಕೃತದಲ್ಲಿನ ವಿಸರ್ಗವನ್ನು ಉಚ್ಚರಿಸುವುದರಿಂದ ಆಗುತ್ತದೆ.

೨ ಆ. ಸಂಸ್ಕೃತದಲ್ಲಿನ ‘ಅನುಸ್ವಾರ’ವನ್ನು ಉಚ್ಚರಿಸುವುದರಿಂದ ಸಹಜವಾಗಿ ‘ಭ್ರಾಮರಿ ಪ್ರಾಣಾಯಾಮ’ದ ಲಾಭ ವಾಗುತ್ತದೆ: ಅದೇ ರೀತಿ ‘ಅನುಸ್ವಾರ’ದ ಉಚ್ಚಾರ ಮತ್ತು ‘ಭ್ರಾಮರಿ ಪ್ರಾಣಾಯಾಮ’ ಇವೆರಡೂ ಒಂದೇ ಕ್ರಿಯೆಯಾಗಿವೆ. ಭ್ರಾಮರಿ ಪ್ರಾಣಾಯಾಮದಲ್ಲಿ ಮೂಗಿನ ಹೊಳ್ಳೆಯಿಂದ ಉಸಿರಾಡುವಾಗ ದುಂಬಿಯಂತೆ ಗುಂಯ್‌ …. ಎನ್ನಬೇಕಾಗುತ್ತದೆ ಮತ್ತು ಅನುಸ್ವಾರವನ್ನು ಉಚ್ಚರಿಸುವಾಗಲೂ ಇದೇ ಕ್ರಿಯೆ ಆಗುತ್ತದೆ. ಆದ್ದರಿಂದ ಎಷ್ಟು ಬಾರಿ ಅನುಸ್ವಾರವನ್ನು ಉಚ್ಚರಿಸುತ್ತೇವೆಯೋ, ಅಷ್ಟು ಬಾರಿ ಭ್ರಾಮರಿ ಪ್ರಾಣಾಯಾಮವು ಸಹಜವಾಗಿ ಆಗುತ್ತದೆ.

೩. ಕೇವಲ ಸಂಸ್ಕೃತ ಭಾಷೆಯಲ್ಲಿ ಮಾತನಾಡುವುದರಿಂದ ‘ಉಕ್ತ ಪ್ರಾಣಾಯಾಮ’ವು ತನ್ನಿಂದತಾನೇ ಆಗುವುದು ಕನ್ನಡದಲ್ಲಿನ ಒಂದು ವಾಕ್ಯವನ್ನು ನೋಡೋಣ – ‘ರಾಮನು ಹಣ್ಣನ್ನು ತಿನ್ನುತ್ತಿದ್ದಾನೆ.’ ಇದೇ ವಾಕ್ಯವನ್ನು ಸಂಸ್ಕೃತದಲ್ಲಿ ‘ರಾಮಃ ಫಲಂ ಖಾದತಿ’, ಎಂದು ಹೇಳಲಾಗುತ್ತದೆ.

‘ರಾಮನು ಹಣ್ಣನ್ನು ತಿನ್ನುತ್ತಿದ್ದಾನೆ’, ಎಂದು ಕನ್ನಡದಲ್ಲಿ ಮಾತನಾಡುವುದರಿಂದ ಉದ್ದೇಶವು ಸಾಧ್ಯವಾಗುತ್ತದೆ; ಆದರೆ ‘ರಾಮಃ ಫಲಂ ಖಾದತಿ’ ಎಂದು ಮಾತನಾಡುವುದರಿಂದ ಅನುಸ್ವಾರ ಮತ್ತು ವಿಸರ್ಗರೂಪಿ ಎರಡು ಪ್ರಾಣಾಯಾಮ ಗಳಾಗುತ್ತವೆ. ಇದೇ ಸಂಸ್ಕೃತ ಭಾಷೆಯ ರಹಸ್ಯವಾಗಿದೆ. ಸಂಸ್ಕೃತ ಭಾಷೆಯಲ್ಲಿ ‘ಅನುಸ್ವಾರ ಮತ್ತು ವಿಸರ್ಗ’, ಇಲ್ಲದಿರುವ ಒಂದೇ ಒಂದು ವಾಕ್ಯ ಸಿಗುವುದಿಲ್ಲ. ಆದ್ದರಿಂದ ಸಂಸ್ಕೃತ ಭಾಷೆಯಲ್ಲಿ ಮಾತನಾಡುವುದೆಂದರೆ ಸಹಜವಾಗಿ ಮಾಡುವ ಯೋಗ ಸಾಧನೆಯಾಗಿದೆ.’

(ಆಧಾರ : ಅಜ್ಞಾತ)