ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಅಮೂಲ್ಯ ವಚನಗಳು ಮತ್ತು ಮಾರ್ಗದರ್ಶನ !

೧. ಯಾವ ಸೇವೆ ಸಿಗುವುದೋ ಆ ಸೇವೆಯನ್ನು ಸ್ವೀಕರಿಸುವುದು

೧ ಅ. ತಾಂತ್ರಿಕ ಸೇವೆ ಮಾಡಲು ಇಷ್ಟಪಡುವ ಸಾಧಕನಿಗೆ ಇತರ ಸೇವೆ ಮಾಡಬೇಕಾಗುವುದು : ‘ಒರ್ವ ಸಾಧಕನು ಒಂದು ಪ್ರಸಂಗವನ್ನು ಹೇಳಿದನು, ‘ನನಗೆ ತಾಂತ್ರಿಕ (ಟೆಕ್ನಿಕಲ್) ಸೇವೆ ಇಷ್ಟವಾಗುತ್ತದೆ. ನಾನು ರಾಮನಾಥಿಯ (ಗೋವಾ) ಸನಾತನದ ಆಶ್ರಮಕ್ಕೆ ಹೋಗಿದ್ದೆನು ಆಗ ಅಲ್ಲಿ ನನಗೆ ತಾಂತ್ರಿಕ (ಟೆಕ್ನಿಕಲ್) ಸೇವೆಯ ಹೊರತಾಗಿ ಇತರ ಎಲ್ಲ ಸೇವೆಗಳು ಸಿಕ್ಕಿದವು. ಆಗ ‘ನನಗೇನು ಇಷ್ಟವೋ ಅದು ನನಗೆ ಸಿಗುವುದಿಲ್ಲ.’ ಎಂದು ತಿಳಿಯಿತು.

೧ ಆ. ‘ಯಾವ ಸೇವೆ ಸಿಗುವುದೋ, ಆ ಸೇವೆಯನ್ನೇ ಮಾಡಬೇಕು’, ಇದು ನಮ್ಮ ಧ್ಯೇಯವಾಗಿರಬೇಕು : ಆ ಸಾಧಕನಿಗೆ ಸದ್ಗುರು ಡಾ. ಪಿಂಗಳೆಕಾಕಾರವರು ಹೇಳಿದರು, ”ನನಗೆ ತಾಂತ್ರಿಕ (ಟೆಕ್ನಿಕಲ್) ಸೇವೆ ಇಷ್ಟವಾಗುತ್ತದೆ’, ಎಂಬ ವಿಚಾರ ಬರುವುದು ಸಹಜ; ಆದರೆ ‘ಇಗ ನನಗೆ ಯಾವ ಸೇವೆ ಸಿಕ್ಕಿದೆಯೋ ಆ ಸೇವೆಯನ್ನೇ ನಾನು ಮಾಡಬೇಕು’, ಎಂಬ ಧ್ಯೇಯ ನಮ್ಮಲ್ಲಿರಬೇಕು.”

ಸದ್ಗುರು (ಡಾ.) ಚಾರುದತ್ತ ಪಿಂಗಳೆ

೨. ಕೌಶಲ್ಯದಿಂದ ಪ್ರತಿಯೊಂದು ಸೇವೆಯ ನಿಯೋಜನೆಯನ್ನು ಮಾಡಿದರೆ ನಮ್ಮ ಸಾಧನೆ ಆಗುವುದು ನಮಗೆ ಸಾಧ್ಯವಾದಷ್ಟು ನಮ್ಮ ಸೇವೆಯ ನಿಯೋಜನೆ ಮಾಡುವುದು, ಇದು ನಮ್ಮ ಕ್ರಿಯಮಾಣವಾಗಿದೆ. ಅನಂತರ ವರ್ತಮಾನ ಕಾಲದಲ್ಲಿ ನಮ್ಮ ಮುಂದೆ ಯಾವ ಪರಿಸ್ಧಿತಿ ಬರುತ್ತದೆಯೊ ಅದನ್ನು ಈಶ್ವರನ ಇಚ್ಛೆಯೆಂದು ಸ್ವೀಕರಿಸುವುದು, ನಮ್ಮ ಸಾಧನೆಯಾಗಿದೆ.

೩. ಸೇವೆಯಿಂದಾಗುವ ದೇಹಶುದ್ಧಿ ಭಗವಂತನ ಸೇವೆಗಾಗಿ ನಾವು ಏನನ್ನು ಬಳಸುತ್ತೇವೊ, ಅದೆಲ್ಲವೂ ಶುದ್ಧವಾಗುತ್ತದೆ. ನಮ್ಮ ಶರೀರ, ಮನಸ್ಸು, ಬುದ್ಧಿ ಮತ್ತು ಅಹಂಕಾರ ಇವೆಲ್ಲವನ್ನೂ ಭಗವಂತನ ಸೇವೆಯಲ್ಲಿ ತೊಡಗಿಸಿದರೆ, ನಮ್ಮ ಸಂಪೂರ್ಣ ಶುದ್ಧಿಯಾಗಬಹುದು .

೩ ಅ. ಈಶ್ವರನಿಗಾಗಿ ನಿರಪೇಕ್ಷೆಯಿಂದ ನಾವು ಏನೆಲ್ಲ ಅರ್ಪಿಸುತ್ತೇವೆ, ಅದೆಲ್ಲವೂ ಶುದ್ಧವಾಗಿ ನಮ್ಮ ಈಶ್ವರ ಪ್ರಾಪ್ತಿಯ ಮಾಧ್ಯಮವಾಗುತ್ತಾ ಹೋಗುತ್ತದೆ.

೪. ಸೇವೆಯ ಸಂದರ್ಭದಲ್ಲಿ ಸ್ವೇಚ್ಛೆ, ಪರೇಚ್ಛೆ ಮತ್ತು ಈಶ್ವರೇಚ್ಛೆ

೪ ಅ. ಸೇವೆ ಮತ್ತು ಸ್ವೇಚ್ಛೆ : ಸೇವೆ ಮಾಡುವಾಗ ನಮಗೆ ಇಷ್ಟವಾದ ಸೇವೆಯನ್ನು ಆರಿಸಿ ಮಾಡಿದರೆ, ನಮ್ಮ ಅಹಂಕಾರ ಜಾಗೃತವಾಗಿ ಅದು ಹೆಚ್ಚಬಹುದು. ಸ್ವೇಚ್ಛೆಯಿಂದ ಸಾಧನೆ ಮತ್ತು ಈಶ್ವರಪ್ರಾಪ್ತಿ ಏನೂ ಆಗುವುದಿಲ್ಲ !

೪ ಆ. ಸೇವೆ ಮತ್ತು ಪರೇಚ್ಛೆ : ಸೇವೆ ಮಾಡುವಾಗ ಪರೇಚ್ಛೆ ಇದ್ದರೆ, ಇತರರ ಜೊತೆಗೆ (ಈಶ್ವರನ ಅನೇಕ ರೂಪಗಳೊಂದಿಗೆ) ಏಕರೂಪವಾಗುವ ವೇಗ ಹೆಚ್ಚುತ್ತದೆ, ಅಹಂಕಾರವು ಕಡಿಮೆ ಯಾಗುತ್ತದೆ. ಇದು ದೀರ್ಘಕಾಲ ನಡೆಯುವ ಪ್ರಕ್ರಿಯೆಯಾಗಿದೆ.

೪ ಇ. ಸೇವೆ ಮತ್ತು ಈಶ್ವರನ ಇಚ್ಛೆ : ಸೇವೆಯಲ್ಲಿ ಈಶ್ವರನ ಇಚ್ಛೆ ಇದ್ದರೆ, ಅಹಂಕಾರವು ನಷ್ಟವಾಗುವುದು. ಈಶ್ವರನೊಂದಿಗೆ ಏಕರೂಪವಾಗುವ ವೇಗ ಹೆಚ್ಚುವುದು. ಇದು ತುಂಬಾ ಒಳ್ಳೆಯ ಪ್ರಕ್ರಿಯೆಯಾಗಿದೆ ಇದರಿಂದ ಈಶ್ವರಪ್ರಾಪ್ತಿಯು ಸಹಜವಾಗಿ ಮತ್ತು ಸುಲಭವಾಗಿ ಆಗುತ್ತದೆ.

೫. ಸೇವೆಯ ನಿಯಮಗಳು ಸೇವೆಯನ್ನು ಮಾಡುವಾಗ ನಾವು ಏನನ್ನು ಬಿಂಬಿಸುತ್ತೇವೆ, ಅದು ನಮಗೆ ಅನೇಕಪಟ್ಟು ಮರಳಿ ಸಿಗುತ್ತದೆ, ಇದೇ ನಿಯಮವಾಗಿದೆ.

೬. ನಮಗೆ ಸಿಕ್ಕಿದ ಸೇವೆಯ ಜವಾಬ್ದಾರಿ ಮತ್ತು ನಮ್ಮ ಅರ್ಹತೆಯನ್ನು ಗುರುತಿಸುವುದು ಯಾರೊಬ್ಬನ ಪರಿಚಯವು ಅವನಿಗೆ ಸಿಗುವ ಜವಾಬ್ದಾರಿ ಯಿಂದ ಆಗುವುದಿಲ್ಲ, ಆದರೆ ‘ಯಾವುದೇ ಸನ್ನಿವೇಶವನ್ನು ಅವನು ಯಾವ ದೃಷ್ಟಿಕೋನದಿಂದ ನೋಡುತ್ತಾನೆ ?’, ಇದೇ ಅವನ ಅರ್ಹತೆ ಅಥವಾ ಅವನ ಪರಿಚಯವಾಗಿರುತ್ತದೆ.

ಅ. ಸಾಧಕನಿಗೆ ಯಾವುದಾದ ರೊಂದು ಸೇವೆಯ ಜವಾಬ್ದಾರಿ ಸಿಕ್ಕಿದರೆ, ‘ಆ ಜವಾಬ್ದಾರಿ ಸಿಗುವುದು, ಜವಾಬ್ದಾರಿಯನ್ನು ಹೊರಲು ಅರ್ಹನಾಗುವುದಕ್ಕಾಗಿ ಒಂದು ಅವಕಾಶವಿದೆಯೋ ಅಥವಾ ಅವನ ಅರ್ಹನಾಗಿದ್ದಾನೋ ? ಇದು ಆ ಸಾಧಕನಿಗೆ ಗೊತ್ತಾಗುವುದಿಲ್ಲ.

ಆ. ಓರ್ವನು ಯಾವುದೇ ಒಂದು ಪ್ರಸಂಗದಲ್ಲಿ ಮುಂದಾಳತ್ವ ವಹಿಸಿ (ನೇತೃತ್ವ) ಯಾವುದಾದರೊಂದು ಸಮಸ್ಯೆಯನ್ನು ಬಗೆಹರಿಸಿದರೆ, ಅದರ ಜವಾಬ್ದಾರಿ ಅವನಲ್ಲಿ (ಅಧಿಕಾರ) ಇಲ್ಲದಿದ್ದರೂ ಸಹ; ಅವನ ಈ ಸ್ಥಿತಿಯು ಅವನು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅರ್ಹನಿದ್ದಾನೆ ಎಂಬುದನ್ನು ತೊರಿಸುತ್ತದೆ.

ಇ. ಓರ್ವ ಸಾಧಕನ ಬಳಿ ಸೇವೆಯ ಜವಾಬ್ದಾರಿ ಇಲ್ಲದಿದ್ದರೂ ಅವನ ಅರ್ಹತೆಯಂತೆ ಆ ಸೇವೆ ಮಾಡುವುದು, ಇದು ಆಧ್ಯಾತ್ಮಿಕ ಪ್ರಗತಿಗಾಗಿ ಉಪಯುಕ್ತವಾಗಿರುತ್ತದೆ.

ಈ. ಓರ್ವ ಸಾಧಕನ ಬಳಿ ಯಾವುದಾರೊಂದು ಸೇವೆಯ ಜವಾಬ್ದಾರಿ ಇದ್ದು ಆ ಜವಾಬ್ದಾರಿಯನ್ನು ಹೊರಲು ಅವನು ಅರ್ಹನಾಗಿದ್ದರೆ, ಆ ಸೇವೆಯನ್ನು ಅವನು ಇನ್ನೂ ಪರಿಪೂರ್ಣ ವಾಗಿ ಮಾಡಬಹುದು.

ಉ. ಜವಾಬ್ದಾರಿ ಸಿಕ್ಕಿದ ನಂತರ ಸಾಧಕರಲ್ಲಿ ಅರ್ಹತೆ ಇಲ್ಲದಿದ್ದರೆ ಅದನ್ನು ನಿರ್ಮಾಣ ಮಾಡಲು ಪ್ರಯತ್ನಿಸುವುದು, ಇದೇ ಅವರ ಸಾಧನೆಯಾಗಿರುತ್ತದೆ.’

ಸಂಗ್ರಹ : ಸುಶ್ರೀ. ಪೂನಮ್‌ ಚೌಧರಿ, ದೆಹಲಿ ಸೇವಾಕೇಂದ್ರ, ದೆಹಲಿ (೧೩.೧.೨೦೨೩)